Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Asia Cup 2023 Schedule: 2023ರ ಏಷ್ಯಾ ಕಪ್ ವೇಳಾಪಟ್ಟಿ ಬಿಡುಗಡೆ; ಭಾರತ vs ಪಾಕ್ ಪಂದ್ಯ ಯಾವಾಗ?

ಬುಧವಾರ, ಜುಲೈ 19ರಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಕೊನೆಗೂ ಬಹು ನಿರೀಕ್ಷಿತ 2023ರ ಏಷ್ಯಾ ಕಪ್ ಪಂದ್ಯಾವಳಿಯ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ಈ ಬಾರಿಯ ಪಂದ್ಯಾವಳಿಯು ಹೈಬ್ರಿಡ್ ಮಾದರಿಯಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ನಡೆಯಲಿದ್ದು, ಆಗಸ್ಟ್ 30ರಂದು ಮೊದಲ ಪಂದ್ಯ ನಡೆಯಲಿದ್ದರೆ, ಇನ್ನು ಫೈನಲ್ ಪಂದ್ಯ ಸೆಪ್ಟಂಬರ್ 17ರಂದು ನಡೆಯಲಿದೆ.

ಎಸಿಸಿ ಪ್ರಕಟಿಸಿದ 2023ರ ಏಷ್ಯಾ ಕಪ್ ವೇಳಾಪಟ್ಟಿಯ ಪ್ರಕಾರ, ಪಾಕಿಸ್ತಾನ ಮತ್ತು ನೇಪಾಳ ತಂಡಗಳು ಪಾಕಿಸ್ತಾನದ ಮುಲ್ತಾನ್‌ನಲ್ಲಿ ಆಗಸ್ಟ್ 30ರಂದು ಸೆಣಸಾಡಲಿದೆ.

 Asia Cup 2023 Schedule

ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ತನ್ನ 2023ರ ಏಷ್ಯಾ ಕಪ್ ಅಭಿಯಾನದ ಮೊದಲ ಪಂದ್ಯವನ್ನು ಶನಿವಾರ, ಸೆಪ್ಟೆಂಬರ್ 2ರಂದು ಶ್ರೀಲಂಕಾದ ಕ್ಯಾಂಡಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡದ ವಿರುದ್ಧ ಆಡಲಿದೆ.

ಸೋಮವಾರ, ಸೆಪ್ಟೆಂಬರ್ 4ರಂದು ಶ್ರೀಲಂಕಾದ ಕ್ಯಾಂಡಿಯಲ್ಲಿ ಭಾರತ ತಂಡವು ನೇಪಾಳ ತಂಡದ ವಿರುದ್ಧ ತಮ್ಮ ಅಂತಿಮ ಗುಂಪು ಹಂತದ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ.

ಭಾಗವಹಿಸುವ ತಂಡಗಳ ಕ್ರಿಕೆಟ್ ಮಂಡಳಿಗಳ ನಡುವಿನ ಸುದೀರ್ಘ ಚರ್ಚೆಗಳ ನಂತರ ಎಸಿಸಿ ಹೈಬ್ರಿಡ್ ಮಾದರಿಯನ್ನು ಅಂತಿಮಗೊಳಿಸಿತು. ಹೀಗಾಗಿ ಪಾಕಿಸ್ತಾನ ಮತ್ತು ಶ್ರೀಲಂಕಾ ಜಂಟಿಯಾಗಿ ಪಂದ್ಯಾವಳಿಯನ್ನು ಆಯೋಜಿಸುತ್ತಿವೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಪಂದ್ಯಾವಳಿಯ ಆತಿಥ್ಯ ಹಕ್ಕುಗಳ ಕುರಿತು ಜಗಳವಾಡಿದ ನಂತರ ಹೈಬ್ರಿಡ್ ಮಾದರಿ ಅನುಸರಿಸಲಾಗಿದೆ.

ಇತರ ಕಾರಣಗಳಿಂದ ಪಾಕಿಸ್ತಾನದಲ್ಲಿ ತಮ್ಮ ಯಾವುದೇ ಪಂದ್ಯಗಳನ್ನು ಆಡದಿರುವ ಬಗ್ಗೆ ಬಿಸಿಸಿಐ ಸ್ಪಷ್ಟಪಡಿಸಿದ್ದರೂ, ಪಿಸಿಬಿ ಪಂದ್ಯಾವಳಿಯ ಒಂದು ಭಾಗವನ್ನು ತವರಿನಲ್ಲಿ ಆಯೋಜಿಸುವ ಬಗ್ಗೆ ಉತ್ಸುಕವಾಗಿದೆ. ಆರು ರಾಷ್ಟ್ರಗಳ ಟೂರ್ನಿಯಲ್ಲಿ ಭಾರತ, ಶ್ರೀಲಂಕಾ, ಅಫ್ಘಾನಿಸ್ತಾನ, ನೇಪಾಳ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳು ಭಾಗವಹಿಸಲಿವೆ.

ಭಾರತ ತಂಡವನ್ನು ಪಾಕಿಸ್ತಾನ ಮತ್ತು ನೇಪಾಳ ತಂಡಗಳೊಂದಿಗೆ ಎ ಗುಂಪಿನಲ್ಲಿ ಇರಿಸಿದ್ದರೆ, ಏಷ್ಯಾ ಕಪ್ 2022ರ ವಿಜೇತರಾದ ಶ್ರೀಲಂಕಾ ತಂಡವನ್ನು ಬಾಂಗ್ಲಾದೇಶ, ಅಫ್ಘಾನಿಸ್ತಾನ ತಂಡಗಳೊಂದಿಗೆ ಬಿ ಗುಂಪಿನಲ್ಲಿ ಇಡಲಾಗಿದೆ.

2023ರ ಏಷ್ಯಾ ಕಪ್ ಪಂದ್ಯಾವಳಿಯು 50-ಓವರ್‌ಗಳ ಸ್ವರೂಪದಲ್ಲಿ ಆಡಲಾಗುತ್ತದೆ. ಇದು ಪ್ರಮುಖವಾಗಿ, ಅಕ್ಟೋಬರ್-ನವೆಂಬರ್‌ನಲ್ಲಿ ಭಾರತದಲ್ಲಿ ನಡೆಯಲಿರುವ 2023ರ ಏಕದಿನ ವಿಶ್ವಕಪ್‌ಗೆ ಪೂರ್ವಸಿದ್ಧತಾ ಸ್ಪರ್ಧೆಯಾಗಿದೆ.

ಎ ಮತ್ತು ಬಿ ಗುಂಪಿನ ಅಗ್ರ ಎರಡು ತಂಡಗಳು ಸೂಪರ್ 4 ಹಂತಕ್ಕೆ ಮುನ್ನಡೆ ಸಾಧಿಸುತ್ತವೆ. ಸೂಪರ್ 4 ಹಂತದಲ್ಲಿ ಪರಸ್ಪರ ಆಡಿದ ನಂತರ, ಅಗ್ರ ಎರಡು ತಂಡಗಳು ಪಂದ್ಯಾವಳಿಯ ಫೈನಲ್‌ಗೆ ಮುನ್ನಡೆಯುತ್ತವೆ. ಅಂತಿಮ ಪಂದ್ಯ ಭಾನುವಾರ, ಸೆಪ್ಟೆಂಬರ್ 17ರಂದು ನಡೆಯಲಿದೆ.

Story first published: Wednesday, July 19, 2023, 19:50 [IST]
Other articles published on Jul 19, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+