Asia Cup 2023 Super 4: ಮತ್ತೆ ಮಿಂಚಿದ ಪಾಕಿಸ್ತಾನ ವೇಗಿಗಳು; ಸಾಧಾರಣ ಮೊತ್ತಕ್ಕೆ ಬಾಂಗ್ಲಾದೇಶ ಆಲೌಟ್
ಬುಧವಾರ, ಸೆಪ್ಟೆಂಬರ್ 6ರಂದು ಲಾಹೋರ್‌ನ ಗಡಾಫಿ ಸ್ಟೇಡಿಯಂನಲ್ಲಿ ನಡೆ ಯುತ್ತಿರುವ2023ರ ಏಷ್ಯಾ ಕಪ್ ಪಂದ್ಯಾವಳಿಯ ಸೂಪರ್ 4 ಹಂತದ ರೋಚಕ ಪಂದ್ಯದಲ್ಲಿ ಆತಿಥೇಯ ಪಾಕಿಸ್ತಾನ ವಿರುದ್ಧ ಬಾಂಗ್ಲಾದೇಶ ತಂಡ ಸಾಧಾರಣ ಮೊತ್ತ ಕಲೆಹಾಕಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಬಾಂಗ್ಲಾದೇಶ ತಂಡ 38.4 ಓವರ್‌ಗಳಲ್ಲಿ 193 ರನ್‌ಗಳಿಗೆ ಸರ್ವಪತನ ಕಂಡಿದ್ದು, ಎದುರಾಳಿ ಪಾಕಿಸ್ತಾನ ತಂಡಕ್ಕೆ 194 ರನ್‌ಗಳ ಸುಲಭ ಗುರಿ ನೀಡಿದೆ.

ಪಾಕಿಸ್ತಾನ ತಂಡದ ಮಾರಕ ಬೌಲಿಂಗ್ ದಾಳಿಗೆ ಪತರುಗುಟ್ಟಿದ ಬಾಂಗ್ಲಾದೇಶ ತಂಡ, ದೊಡ್ಡ ಮೊತ್ತ ಪೇರಿಸುವಲ್ಲಿ ಸಂಕಷ್ಟ ಎದುರಿಸಿತು. ತಂಡದ ಖಾತೆ ತೆರೆಯುವ ಮುನ್ನವೇ ಮೆಹದಿ ಹಸನ್ ಮಿರಾಜ್ ಅವರನ್ನು ನಸೀಮ್ ಶಾ ಪೆವಿಲಿಯನ್‌ಗೆ ಕಳಿಸಿದರು.
ನಂತರ ಬಂದ ಲಿಟ್ಟನ್ ದಾಸ್ ಅಬ್ಬರಿಸುವ ಮುನ್ಸೂಚನೆ ತೋರಿಸಿದರೂ, 16 ರನ್ ಗಳಿಸಿದ್ದಾಗ ಶಾಹೀನ್ ಅಫ್ರಿದಿ ಬೌಲಿಂಗ್‌ನಲ್ಲಿ ವಿಕೆಟ್ ಕೀಪರ್‌ಗೆ ಕ್ಯಾಚ್ ನೀಡಿ ಹೊರನಡೆದರು. ಮೊಹಮ್ಮದ್ ನಯೀಮ್ 25 ಎಸೆತಗಳಲ್ಲಿ 4 ಬೌಂಡರಿ ಸಮೇತ 20 ರನ್ ಗಳಿಸಿ ಔಟಾದರು.
ಇನ್ನು ತೌಹಿದ್ ಹೃದೋಯ್ 2 ರನ್ ನಿರಾಸೆ ಮೂಡಿಸಿದರು. ತಂಡದ ಮೊತ್ತ 9.1 ಓವರ್‌ಗಳಲ್ಲಿ 47 ರನ್ ಗಳಿಸಿದ್ದಾಗ ಪ್ರಮುಖ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆಗ ಜೊತೆಯಾಗಿದ್ದು ನಾಯಕ ಶಕಿಬ್ ಅಲ್ ಹಸನ್ ಮತ್ತು ಮುಶ್ಫಿಕರ್ ರಹೀಂ.

ಈ ಇಬ್ಬರು ಅನುಭವಿಗಳು 5 ವಿಕೆಟ್‌ಗೆ 100 ರನ್‌ಗಳ ಜೊತೆಯಾಟ ನೀಡಿ ಕುಸಿದಿದ್ದ ತಂಡವನ್ನು ಮೇಲೆತ್ತಲು ಪ್ರಯತ್ನಿಸಿದರು. ಈ ಹಾದಿಯಲ್ಲಿ ಶಕಿಬ್ ಅಲ್ ಹಸನ್ 57 ಎಸೆತಗಳಲ್ಲಿ 7 ಬೌಂಡರಿ ಮೂಲಕ 53 ರನ್ ಮತ್ತು ಮುಶ್ಫಿಕರ್ ರಹೀಂ 87 ಎಸೆತಗಳಲ್ಲಿ 5 ಬೌಂಡರಿ ಸಮೇತ 64 ರನ್ ಗಳಿಸಿದರು.
ಇವರಿಬ್ಬರು ಔಟಾಗುತ್ತಿದ್ದಂತೆಯೇ ಬಾಂಗ್ಲಾದೇಶ ತಂಡದ ಕೆಳಕ್ರಮಾಂಕದ ಬ್ಯಾಟರ್‌ಗಳು ಪಾಕಿಸ್ತಾನ ಬೌಲಿಂಗ್ ವಿರುದ್ಧ ಪ್ರತಿರೋಧ ಒಡ್ಡಲು ವಿಫಲರಾದರು. ಶಮೀಮ್ ಹೊಸೈನ್ 16 ರನ್, ಅಫಿಫ್ ಹೊಸೈನ್ 12 ರನ್, ತಸ್ಕಿನ್ ಅಹ್ಮದ್ 0, ಶೋರಿಫುಲ್ ಇಸ್ಲಾಂ 1 ರನ್, ಹಸನ್ ಮಹಮೂದ್ 1 ರನ್ ಗಳಿಸಿದರು.

ಇನ್ನು ಪಾಕಿಸ್ತಾನ ತಂಡದ ಪರ ಬೌಲಿಂಗ್‌ನಲ್ಲಿ ಹ್ಯಾರಿಸ್ ರೌಫ್ 6 ಓವರ್‌ಗಳಲ್ಲಿ 19 ರನ್ ನೀಡಿ 4 ವಿಕೆಟ್ ಪಡೆದರೆ, ನಸೀಮ್ ಶಾ 5.4 ಓವರ್‌ಗಳಲ್ಲಿ 34 ರನ್ ನೀಡಿ 3 ವಿಕೆಟ್ ಕಬಳಿಸಿದರು. ಉಳಿದಂತೆ ಶಾಹೀನ್ ಅಫ್ರಿದಿ, ಫಾಹೀಮ್ ಅಶ್ರಫ್ ಮತ್ತು ಇಫ್ತಿಕರ್ ಅಹ್ಮದ್ ತಲಾ ಒಂದೊಂದು ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications