For Quick Alerts
ALLOW NOTIFICATIONS  
For Daily Alerts
 

Pakistan vs Sri Lanka: ರೋಚಕ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಮುಖಭಂಗ; ಫೈನಲ್‌ನಲ್ಲಿ ಭಾರತ vs ಶ್ರೀಲಂಕಾ ಸೆಣಸಾಟ

ಗುರುವಾರ, ಸೆಪ್ಟೆಂಬರ್ 14ರಂದು ಕೊಲಂಬೊದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ 2023ರ ಏಷ್ಯಾ ಕಪ್ ಪಂದ್ಯಾವಳಿಯ ಸೂಪರ್ 4 ರೋಚಕ ಪಂದ್ಯದಲ್ಲಿ ಪಾಕಿಸ್ತಾನ ತಂಡದ ವಿರುದ್ಧ ಆತಿಥೇಯ ಶ್ರೀಲಂಕಾ ತಂಡವು 2 ವಿಕೆಟ್‌ಗಳ ಅಂತರದಿಂದ ಗೆದ್ದು ಬೀಗಿದ್ದು, ಅಲ್ಲದೆ ಫೈನಲ್‌ ತಲುಪಿತು.

ಈ ಪಂದ್ಯದಲ್ಲಿ ಟಾಸ್ ನಡೆಯುವುದಕ್ಕೂ ಮುನ್ನ ಮತ್ತು ಆಟದ ಮಧ್ಯದಲ್ಲಿ ಮಳೆ ಅಡ್ಡಿಪಡಿಸಿದ ಕಾರಣ, ಓವರ್‌ಗಳನ್ನು ಕಡಿತಗೊಳಿಸಿ, ಪ್ರತಿ ಇನ್ನಿಂಗ್ಸ್‌ಗೆ 42 ಓವರ್‌ಗಳನ್ನು ನಿಗದಿಪಡಿಸಲಾಯಿತು.

Asia Cup 2023 Super 4: Sri Lanka Defeat Pakistan By 2 Wickets And Through To The Final

ಮಳೆ-ಬಾಧಿತ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ 42 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 252 ರನ್‌ಗಳನ್ನು ಕಲೆಹಾಕಿತು. 253 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡ 42 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು ಕೊನೆಯ ಎಸೆತದಲ್ಲಿ ಜಯಭೇರಿ ಬಾರಿಸಿತು.

ಶ್ರೀಲಂಕಾದ ಇನ್ನಿಂಗ್ಸ್ ಆರಂಭಿಸಿದ ಪಾಥುಮ್ ನಿಸ್ಸಾಂಕ 44 ಎಸೆತಗಳಲ್ಲಿ 4 ಬೌಂಡರಿ ಸಮೇತ 29 ರನ್ ಗಳಿಸಿದರೆ, ಕುಸಾಲ್ ಪೆರೆರಾ 8 ಎಸೆತಗಳಲ್ಲಿ 4 ಬೌಂಡರಿ ಮೂಲಕ 17 ರನ್ ಗಳಿಸಿದರು. ತಂಡದ ಮೊತ್ತ 20 ಹಾಗೂ 77 ರನ್‌ಗಳಾಗಿದ್ದಾಗ ಈ ಇಬ್ಬರು ಔಟಾದರು.

ನಂತರ ಜೊತೆಯಾದ ಕುಸಾಲ್ ಮೆಂಡೀಸ್ ಮತ್ತು ಸದೀರ್ ಸಮರವಿಕ್ರಮ 3ನೇ ವಿಕೆಟ್ ಜೊತೆಯಾಟಕ್ಕೆ 100 ರನ್‌ಗಳ ಜೊತೆಯಾಟ ನೀಡಿದರು. ಕುಸಾಲ್ ಮೆಂಡೀಸ್ 87 ಎಸೆತಗಳನ್ನು ಎದುರಿಸಿ 8 ಬೌಂಡರಿ ಮತ್ತು 1 ಸಿಕ್ಸರ್ ಸಮೇತ 91 ರನ್ ಬಾರಿದರು. ಇನ್ನು ಸಮರವಿಕ್ರಮ 51 ಎಸೆತಗಳಲ್ಲಿ 4 ಬೌಂಡರಿ ಮೂಲಕ 48 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

Asia Cup 2023 Super 4: Sri Lanka Defeat Pakistan By 2 Wickets And Through To The Final

ಈ ಜೋಡಿ ಔಟಾಗುತ್ತಿದ್ದಂತೆಯೇ ಶ್ರೀಲಂಕಾ ಒಂದರ ಹಿಂದೆ ಒಂದು ವಿಕೆಟ್ ಕಳೆದುಕೊಳ್ಳುತ್ತಾ ಹೋಯಿತು. ಆದರೆ, ಚರಿತ್ ಅಸಲಂಕಾ ಕ್ರೀಸ್‌ನಲ್ಲಿ ಗಟ್ಟಿಯಾಗಿ ನಿಂತು ತಂಡವನ್ನು ಗೆಲುವಿನ ದಡ ಸೇರಿಸಿದರು. ಅಸಲಂಕಾ 47 ಎಸೆತಗಳಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್ ಸಮೇತ ಅಜೇಯ 49 ರನ್ ಬಾರಿಸಿದರು.

ಬೌಲಿಂಗ್‌ನಲ್ಲಿ ಪಾಕಿಸ್ತಾನ ತಂಡದ ಪರ ಅರೆಕಾಲಿಕ ಸ್ಪಿನ್ನರ್ ಇಫ್ತಿಕರ್ ಅಹ್ಮದ್ 8 ಓವರ್‌ಗಳಲ್ಲಿ 50 ರನ್ ನೀಡಿ 3 ವಿಕೆಟ್ ಪಡೆದರೆ, ಶಾಹೀನ್ ಅಫ್ರಿದಿ 9 ಓವರ್‌ಗಳಲ್ಲಿ 52 ರನ್ ನೀಡಿ 2 ವಿಕೆಟ್ ಕಬಳಿಸಿದರು. ಉಳಿದಂತೆ ಶಾದಾಬ್ ಖಾನ್ 1 ವಿಕೆಟ್ ಪಡೆದರು.

Asia Cup 2023 Super 4: Sri Lanka Defeat Pakistan By 2 Wickets And Through To The Final

ಇನ್ನು ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ ತಂಡ 42 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 252 ರನ್‌ಗಳನ್ನು ಗಳಿಸಿತು. ಒಂದು ಹಂತದಲ್ಲಿ 130 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಪಾಕಿಸ್ತಾನ ತಂಡಕ್ಕೆ ಆಸರೆಯಾಗಿದ್ದು, ಮೊಹಮ್ಮದ್ ರಿಜ್ವಾನ್ ಮತ್ತು ಇಫ್ತಿಕರ್ ಅಹ್ಮದ್. ಈ ಜೋಡಿ 6ನೇ ವಿಕೆಟ್‌ಗೆ 108 ರನ್‌ಗಳ ಜೊತೆಯಾಟ ನೀಡಿ ತಂಡದ ಮೊತ್ತ 250ರ ಗಡಿ ದಾಟಲು ನೆರವಾದರು.

ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ಅಬ್ದುಲ್ಲಾ ಶಫಿಕ್ 69 ಎಸೆತಗಳಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್ ಮೂಲಕ 52 ರನ್ ಗಳಿಸಿದರೆ, ಫಖರ್ ಜಮಾನ್ ಕೇವಲ 4 ರನ್ ಗಳಿಸಿ ಔಟಾದರು.

ನಂತರ ಬಂದ ನಾಯಕ ಬಾಬರ್ ಅಜಂ 35 ಎಸೆತಗಳನ್ನು ಎದುರಿಸಿ 3 ಬೌಂಡರಿ ಸಹಾಯದಿಂದ 29 ರನ್ ಗಳಿಸಿದರೆ, ಮೊಹಮ್ದ ಹ್ಯಾರಿಸ್ ಕೇವಲ 3 ರನ್‌ಗಳಿಗೆ ವಿಕೆಟ್ ಒಪ್ಪಿಸಿದರು. ಮೊಹಮ್ಮದ್ ನವಾಜ್ 12 ರನ್ ಮಾತ್ರ ಗಳಿಸಿದರು.

Asia Cup 2023 Super 4: Sri Lanka Defeat Pakistan By 2 Wickets And Through To The Final

ಇನ್ನು ಮೊಹಮ್ಮದ್ ರಿಜ್ವಾನ್ 73 ಎಸೆತಗಳಲ್ಲಿ 6 ಬೌಂಡರಿ ಹಾಗೂ 2 ಭರ್ಜರಿ ಸಿಕ್ಸರ್ ಸಮೇತ 86 ರನ್ ಬಾರಿಸಿದರು. ಇವರಿಗೆ ಸಾಥ್ ನೀಡಿದ ಇಫ್ತಿಕರ್ ಅಹ್ಮದ್ 40 ಎಸೆತಗಳನ್ನು ಎದುರಿಸಿ 4 ಬೌಂಡರಿ ಹಾಗೂ 2 ಸಿಕ್ಸರ್ ಮೂಲಕ 47 ರನ್ ಒಟ್ಟುಗೂಡಿಸಿದರು.

ಇನ್ನು ಬೌಲಿಂಗ್‌ನಲ್ಲಿ ಶ್ರೀಲಂಕಾ ತಂಡದ ಪರ ಮತೀಶ ಪತಿರಾಣ 8 ಓವರ್‌ಗಳಲ್ಲಿ 65 ರನ್ ನೀಡಿ 3 ವಿಕೆಟ್ ಕಬಳಿಸಿದರೆ, ಪ್ರಮೋದ್ ಮಧುಶನ್ 7 ಓವರ್‌ಗಳಲ್ಲಿ 58 ರನ್ ನೀಡಿ 2 ವಿಕೆಟ್ ಪಡೆದರು. ಉಳಿದಂತೆ ಮಹೀಶ್ ತೀಕ್ಷಣ ಮತ್ತು ದುನಿತ್ ವೆಲ್ಲಾಲಗೆ ತಲಾ ಒಂದೊಂದು ವಿಕೆಟ್ ಪಡೆದರು.

Story first published: Friday, September 15, 2023, 1:56 [IST]
Other articles published on Sep 15, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+