For Quick Alerts
ALLOW NOTIFICATIONS  
For Daily Alerts
 

India vs Pakistan: ಪ್ರೇಮದಾಸದಲ್ಲಿ ಭಾರತೀಯ ಆಟಗಾರರ ರನ್ ಮಹಾಕಾವ್ಯ; ಪಾಕಿಸ್ತಾನಕ್ಕೆ ಬೃಹತ್ ಗುರಿ

ಸೋಮವಾರ, ಸೆಪ್ಟೆಂಬರ್ 11ರಂದು ಕೊಲಂಬೊದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆಯುತ್ತಿರುವ 2023ರ ಏಷ್ಯಾ ಕಪ್ ಪಂದ್ಯಾವಳಿಯ ಸೂಪರ್ 4 ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡದ ವಿರುದ್ಧ ಭಾರತ ತಂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶನದ ಮೂಲಕ ಬೃಹತ್ ಗುರಿ ನೀಡಿದೆ.

ಭಾನುವಾರ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಭಾನುವಾರ ಮಳೆ ಬಂದು ಇನ್ನಿಂಗ್ಸ್ ಸ್ಥಗಿತಗೊಂಡಾಗ ಭಾರತ ತಂಡ 24.1 ಓವರ್‌ಗಳಲ್ಲಿ 2 ವಿಕೆಟ್‌ಗೆ 147 ರನ್ ಗಳಿಸಿತ್ತು. ವಿರಾಟ್ ಕೊಹ್ಲಿ 8 ರನ್ ಮತ್ತು ಕೆಎಲ್ ರಾಹುಲ್ 17 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದರು.

Asia Cup 2023 Super 4: Virat Kohli, KL Rahul Century; Pakistan Need 357 Runs To Win Against India

ಸೋಮವಾರ ಮೀಸಲು ದಿನದಂದು ಬ್ಯಾಟಿಂಗ್ ಮುಂದುವರೆಸಿದ ಭಾರತ ತಂಡ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಅವರ ಭರ್ಜರಿ ಶತಕದ ಸಹಾಯದಿಂದ ನಿಗದಿತ 50 ಓವರ್‌ಗಳಲ್ಲಿ 2 ವಿಕೆಟ್‌ಗೆ 356 ರನ್‌ಗಳನ್ನು ಕಲೆಹಾಕಿತು. ಎದುರಾಳಿ ಪಾಕಿಸ್ತಾನ ತಂಡಕ್ಕೆ 357 ರನ್‌ಗಳ ಗುರಿ ನೀಡಿದೆ.

ಭಾರತ ತಂಡದ ಇನ್ನಿಂಗ್ಸ್ ಆರಂಭಿಸಿದ್ದ ನಾಯಕ ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ಮೊದಲ ವಿಕೆಟ್‌ಗೆ 16.4 ಓವರ್‌ಗಳಲ್ಲಿ 121 ರನ್‌ಗಳ ಜೊತೆಯಾಟ ನೀಡುವ ಮೂಲಕ ಭದ್ರ ಬುನಾದಿ ಒದಗಿಸಿದರು.

ನಂತರ ಜೊತೆಗೂಡಿದ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಮೂರನೇ ವಿಕೆಟ್‌ಗೆ 194 ಎಸೆತಗಳಲ್ಲಿ ದಾಖಲೆಯ ಬರೋಬ್ಬರಿ 233 ರನ್‌ಗಳ ಜೊತೆಯಾಟ ನಿರ್ಮಿಸಿದರು.

ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ 47ನೇ ಶತಕ ಬಾರಿಸಿದರು ಮತ್ತು ಇದೇ ವೇಳೆ 13000 ರನ್‌ಗಳ ಮೈಲುಗಲ್ಲು ತಲುಪಿದರು. ಇನ್ನು ಕೆಎಲ್ ರಾಹುಲ್ ಏಕದಿನ ಕ್ರಿಕೆಟ್‌ನಲ್ಲಿ ತಮ್ಮ 6ನೇ ಶತಕ ಬಾರಿಸಿ ಅದ್ಭುತವಾಗಿ ಪುನರಾಗಮನ ಮಾಡಿದರು.

Asia Cup 2023 Super 4: Virat Kohli, KL Rahul Century; Pakistan Need 357 Runs To Win Against India

ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ 94 ಎಸೆತಗಳನ್ನು ಎದುರಿಸಿ 9 ಬೌಂಡರಿ ಮತ್ತು 3 ಸಿಕ್ಸರ್ ಮೂಲಕ ಅಜೇಯ 122 ರನ್ ಬಾರಿಸಿದರೆ, ಕನ್ನಡಿಗ ಕೆಎಲ್ ರಾಹುಲ್ 106 ಎಸೆತಗಳಲ್ಲಿ 12 ಬೌಂಡರಿ ಮತ್ತು 2 ಸಮೇತ ಔಟಾಗದೇ 111 ರನ್ ಸಿಡಿಸಿದರು.

ಇದಕ್ಕೂ ಮುನ್ನ ಭಾನುವಾರ ಬ್ಯಾಟಿಂಗ್ ಮಾಡಿದ್ದ ನಾಯಕ ರೋಹಿತ್ ಶರ್ಮಾ 49 ಎಸೆತಗಳಲ್ಲಿ 6 ಬೌಂಡರಿ ಮತ್ತು 4 ಸಿಕ್ಸರ್ ನೆರವಿನಿಂದ 56 ರನ್ ಗಳಿಸಿದರೆ, ಶುಭ್ಮನ್ ಗಿಲ್ 52 ಎಸೆತಗಳಲ್ಲಿ 10 ಬೌಂಡರಿ ಮೂಲಕ 58 ರನ್ ಬಾರಿಸಿದರು.

ಇನ್ನು ಪಾಕಿಸ್ತಾನ ತಂಡದ ಪರ ಬೌಲಿಂಗ್‌ನಲ್ಲಿ ಶಾದಾಬ್ ಖಾನ್ ಮತ್ತು ಶಾಹೀನ್ ಶಾ ಅಫ್ರಿದಿ ತಲಾ ಒಂದೊಂದು ವಿಕೆಟ್ ಪಡೆದರು. ಉಳಿದೆಲ್ಲ ಬೌಲರ್‌ಗಳು ದುಬಾರಿಯಾದರು.

Story first published: Monday, September 11, 2023, 18:47 [IST]
Other articles published on Sep 11, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+