Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟೀಮ್ ಇಂಡಿಯಾಗೆ ಇಲ್ಲ ರೆಸ್ಟ್: ಪಾಕ್ ವಿರುದ್ಧದ ಪಂದ್ಯದ ಮರುದಿನವೇ ಶ್ರೀಲಂಕಾ ಸವಾಲು

ಭಾರತ ಹಾಗೂ ಪಾಕಿಸ್ತಾನ ತಂಡಗಳು ಏಷ್ಯಾಕಪ್ ಟೂರ್ನಿಯ ಸೂಪರ್ 4 ಹಂತದಲ್ಲಿ ಮುಖಾಮುಖಿಯಾಗಿದ್ದು ಭರ್ಜರಿ ಪ್ರದರ್ಶನ ನೀಡಿದೆ. ಈ ಪಂದ್ಯ ಮಳೆಯ ಕಾರಣದಿಂದಾಗಿ ಮೀಸಲು ದಿನಕ್ಕೆ ಮುಂದೂಡಿಕೆಯಾದ ಕಾರಣ ಸೋಮವಾರ ಈ ಪಂದ್ಯವನ್ನು ಮುಂದುವರಿಸಲಾಯಿತು. ಹೀಗಾಗಿ ಟೀಮ್ ಇಂಡಿಯಾಗೆ ಒಂದು ದಿನವೂ ವಿಶ್ರಾಂತಿ ಇಲ್ಲದೆ ಮತ್ತೊಂದು ಪಂದ್ಯವನ್ನು ಆಡಬೇಕಾಗಿದೆ.

ಹೌದು ಮಂಗಳವಾರ ಭಾರತ ತಂಡ ಸೂಪರ್ 4 ಹಂತದಲ್ಲಿ ಮತ್ತೊಂದು ತಂಡವನ್ನು ಎದುರಿಸಲಿದೆ. ಶ್ರೀಲಂಕಾ ಹಾಗೂ ಭಾರತ ತಂಡಗಳು ಕೊಲಂಬೋ ಕ್ರೀಡಾಂಗಣದಲ್ಲಿಯೇ ಮುಖಾಮುಖಿಯಾಗಲಿದ್ದು ಇದು ಕೂಡ ಎರಡು ತಂಡಗಳಿಗೂ ಮಹತ್ವದ ಪಂದ್ಯವಾಗಿರಲಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ಬಹುತೇಕ ಫೈನಲ್‌ಗೇರುವ ಸಾಧ್ಯತೆ ಹೆಚ್ಚಾಗಿರಲಿದೆ.

Asia cup 2023: Team India will face Sri Lanka few hours after match against Pakistan

ಪಂದ್ಯದ ಮಾಹಿತಿ ನೇರಪ್ರಸಾರ

ಭಾರತ ಹಾಗೂ ಶ್ರೀಲಂಕಾ ತಂಡಗಳ ನಡುವಿನ ಈ ಪಂದ್ಯ ಮಧ್ಯಾಹ್ನ 3 ಗಂಟೆಗೆ ಆರಂಭವಾಗಲಿದ್ದು 2:30ಕ್ಕೆ ಟಾಸ್ ಪ್ರಕ್ರಿಯೆ ನಡೆಯಲಿದೆ. ಕೊಲಂಬೋದ ಪ್ರೇಮದಾಸ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದ್ದು ಈ ಪಂದ್ಯಕ್ಕೂ ಮಳೆ ಅಡ್ಡಿಯಾಗುವ ಸಾಧ್ಯತೆಯಿದೆ. ಇನ್ನು ಈ ಪಂದ್ಯದ ನೇರಪ್ರಸಾರ ಸ್ಟಾರ್‌ಸ್ಟಪೋರ್ಟ್ಸ್ ವಾಹಿನಿಯಲ್ಲಿ ಪ್ರಸಾರವಾಗಲಿದ್ದು ಹಾಟ್‌ಸ್ಟಾರ್‌ನಲ್ಲಿ ಪಂದ್ಯವನ್ನು ವೀಕ್ಷಿಸಬಹುದಾಗಿದೆ.

ಪಿಚ್ ರಿಪೋರ್ಟ್

ಈಗಾಗಲೇ ಹೇಳಿದಂತೆ ಈ ಪಂದ್ಯ ಕೂಡ ಕೊಲಂಬೋದ ಪ್ರೇಮದಾಸ ಕ್ರೀಡಾಂಗಣದಲ್ಲಿಯೇ ಆಯೋಜನೆಯಾಗಲಿದೆ. ಈ ಮೈದಾನದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಭರ್ಜರಿ ಪ್ರದರ್ಶನ ನೀಡಿದೆ, ಅದರಲ್ಲೂ ಟೀಮ್ ಇಂಡಿಯಾ ಇಲ್ಲಿ ಪಾಕ್ ವಿರುದ್ಧ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ್ದು ಭರ್ಜರಿ 356 ರನ್‌ಗಳನ್ನು ಕಲೆಹಾಕಿತ್ತು. ಇನ್ನು ಶ್ರೀಲಂಕಾದ ತವರು ಮೈದಾನವೇ ಆಗಿದ್ದರೂ ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಬ್ಯಾಟಿಂಗ್ ವಿಭಾಗದ ಆತ್ಮವಿಶ್ವಾಸ ಹೆಚ್ಚಾಗಿರುವುದಲ್ಲಿ ಅನುಮಾನವಿಲ್ಲ. ಹೀಗಾಗಿ ಲಂಕಾ ವಿರುದ್ಧ ಭಾರತವೂ ಭಾರತದ ಬ್ಯಾಟರ್‌ಗಳು ಅಬ್ಬರಿಸುವ ಸಾಧ್ಯತೆಯಿದೆ. ಇನ್ನು ಯಾವುದೇ ತಂಡ ಇಲ್ಲಿ ಟಾಸ್ ಗೆದ್ದರೆ ಮೊದಲಿಗೆ ಬ್ಯಾಟಿಂಗ್ ನಡೆಸುವ ಸಾಧ್ಯತೆ ಹೆಚ್ಚಿದೆ. ಶ್ರೀಲಂಕಾ ಟಾಸ್ ಗೆದ್ದರೂ ಕೂಡ ಪಾಕ್ ವಿರುದ್ಧ ಭಾರತ ಅಬ್ಬರಿಸಿದ ರೀತಿಯನ್ನು ನೋಡಿದ ಬಳಿಕ ಮತ್ತೆ ಆರಂಭದಲ್ಲಿ ಭಾರತವನ್ನು ಬ್ಯಾಟಿಂಗ್‌ಗೆ ಇಳಿಸುವ ಸಾಹಸ ಮಾಡುವುದು ಬಹಳ ಕಷ್ಟ.

ಸಂಭಾವ್ಯ ಆಡುವ ಬಳಗ

ಭಾರತ ಸಂಬಾವ್ಯ ಆಡುವ ಬಳಗ: ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್

ಶ್ರೀಲಂಕಾ ಸಂಭಾವ್ಯ ಆಡುವ ಬಳಗ: ಪಾತುಮ್ ನಿಸ್ಸಾಂಕ, ದಿಮುತ್ ಕರುಣಾರತ್ನೆ, ಕುಸಲ್ ಮೆಂಡಿಸ್ (ವಿಕೆಟ್ ಕೀಪರ್), ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವ, ದಸುನ್ ಶನಕ (ನಾಯಕ), ದುನಿತ್ ವೆಲ್ಲಲಾಗೆ, ಮಹೇಶ್ ತೀಕ್ಷಣ, ಕಸುನ್ ರಜಿತ, ಮತೀಶ ಪತಿರಣ

Story first published: Monday, September 11, 2023, 21:09 [IST]
Other articles published on Sep 11, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+