Asia Cup 2023: ಭಾರತ vs ಪಾಕಿಸ್ತಾನ ಪಂದ್ಯದಲ್ಲಿ ಬ್ರೇಕ್ ಆಗಲಿರುವ 3 ದಾಖಲೆಗಳಿವು
ಭಾನುವಾರ, ಸೆಪ್ಟೆಂಬರ್ 10ರಂದು ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2023ರ ಏಷ್ಯಾ ಕಪ್ ಪಂದ್ಯಾವಳಿಯ ಸೂಪರ್ 4 ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಪರಸ್ಪರ ಸೆಣಸಾಡುತ್ತಿವೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯಗಳ ವಿಷಯಕ್ಕೆ ಬಂದಾಗ, ಎಂದಿಗೂ ನೀರಸವಾಗಿರುವುದಿಲ್ಲ. ಜಿದ್ದಾಜಿದ್ದು, ಕುತೂಹಲ, ಹೈ-ವೋಲ್ಟೇಜ್‌ನಿಂದ ಕೂಡಿರುತ್ತದೆ. ಉಭಯ ದೇಶಗಳ ಅಭಿಮಾನಿಗಳು ಮಾತ್ರವಲ್ಲದೆ, ಜಗತ್ತಿನ ಕ್ರಿಕೆಟ್ ಪ್ರೇಮಿಗಳು ಕಾತರರಾಗಿರುತ್ತಾರೆ.
ಇಂದಿನ ಏಷ್ಯಾ ಕಪ್ ಸೂಪರ್ 4 ಪಂದ್ಯದಲ್ಲಿ ಎರಡು ಏಷ್ಯನ್ ದೈತ್ಯ ತಂಡಗಳು ಪರಸ್ಪರ ಪ್ರಾಬಲ್ಯ ಸಾಧಿಸಲು ಎದುರು ನೋಡುತ್ತಿದ್ದಾರೆ. ಅಲ್ಲದೆ, ಪಂದ್ಯಾವಳಿಯಲ್ಲಿ ಫೈನಲ್ ತಲುಪಲು ಎರಡೂ ತಂಡಗಳಿಗೂ ಈ ಗೆಲುವು ಅನಿವಾರ್ಯವಾಗಿದೆ.

ಭಾರತ ತಂಡದ ಇಬ್ಬರು ಅತ್ಯುತ್ತಮ ಬ್ಯಾಟರ್‌ಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಇಬ್ಬರೂ ಪಂದ್ಯ ಅಂತ್ಯಗೊಳ್ಳುವ ಹೊತ್ತಿಗೆ ಕೆಲವು ಹೊಸ ದಾಖಲೆಗಳನ್ನು ನಿರ್ಮಿಸಬಹುದು.
1) ಏಕದಿನ ಕ್ರಿಕೆಟ್‌ನಲ್ಲಿ 13,000 ರನ್ ದಾಖಲೆ ಮೇಲೆ ಕಣ್ಣಿಟ್ಟ ವಿರಾಟ್ ಕೊಹ್ಲಿ
ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮೌಂಟ್ 13,000 ರನ್‌ಗಳ ಗುರಿ ತಲುಪಲು ಕೇವಲ 98 ರನ್‌ಗಳ ಅವಶ್ಯಕತೆ ಇದೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಈ ಮೈಲುಗಲ್ಲು ತಲುಪಿದರೆ, ವಿರಾಟ್ ಕೊಹ್ಲಿ 50 ಓವರ್‌ಗಳ ಮಾದರಿಯಲ್ಲಿ 13,000 ರನ್ ಗಳಿಸಿದ ಅತ್ಯಂತ ವೇಗದ ಬ್ಯಾಟರ್ ಎನಿಸಲಿದ್ದಾರೆ.
ಈವರೆಗೆ 267 ಏಕದಿನ ಇನ್ನಿಂಗ್ಸ್‌ಗಳನ್ನು ಆಡಲಿರುವ ವಿರಾಟ್ ಕೊಹ್ಲಿ ಅವರು ಸಚಿನ್ ತೆಂಡೂಲ್ಕರ್ (321 ಇನ್ನಿಂಗ್ಸ್), ರಿಕಿ ಪಾಂಟಿಂಗ್ (341 ಇನ್ನಿಂಗ್ಸ್) ಮತ್ತು ಕುಮಾರ ಸಂಗಕ್ಕಾರ (363 ಇನ್ನಿಂಗ್ಸ್) ಅವರನ್ನು ಹಿಂದಿಕ್ಕಲಿದ್ದಾರೆ.

2) ಏಷ್ಯಾಕಪ್‌ನಲ್ಲಿ ರೋಹಿತ್ ಶರ್ಮಾ ಕೇವಲ 5 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ
ಹಿಂದಿನ ಏಷ್ಯಾಕಪ್ ಪಂದ್ಯದಲ್ಲಿ ನೇಪಾಳ ವಿರುದ್ಧ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಪಾಕಿಸ್ತಾನದ ವಿರುದ್ಧ ಅದೇ ಬ್ಯಾಟಿಂಗ್ ಫಾರ್ಮ್ ಮುಂದುವರಿಸಲು ಉತ್ಸುಕರಾಗಿದ್ದಾರೆ. ಏಷ್ಯಾ ಕಪ್‌ನಲ್ಲಿ ಸದ್ಯ 22 ಸಿಕ್ಸರ್ ಗಳಿಸಿದ್ದಾರೆ.
ಇನ್ನು 5 ಸಿಕ್ಸರ್‌ಗಳನ್ನು ಸಿಡಿಸಿದರೆ, ಅವರು ಏಷ್ಯಾ ಕಪ್‌ನ ಏಕದಿನ ಸ್ವರೂಪದಲ್ಲಿ ಗರಿಷ್ಠ ಸಿಕ್ಸರ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಶಾಹಿದ್ ಅಫ್ರಿದಿಯನ್ನು ಹಿಂದಿಕ್ಕಲಿದ್ದಾರೆ. ಪ್ರಸ್ತುತ ಪಟ್ಟಿಯಲ್ಲಿ ಶಾಹಿದ್ ಅಫ್ರಿದಿ 26 ಸಿಕ್ಸರ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಶ್ರೀಲಂಕಾದ ಸನತ್ ಜಯಸೂರ್ಯ 23 ಸಿಕ್ಸರ್‌ಗಳೊಂದಿಗೆ ಅವರ ಎರಡನೇ ಸ್ಥಾನದಲ್ಲಿದ್ದಾರೆ.
ಅಷ್ಟೇ ಅಲ್ಲದೆ, ಏಕದಿನ ಕ್ರಿಕೆಟ್‌ನಲ್ಲಿ 10,000 ರನ್‌ಗಳ ಮೈಲಿಗಲ್ಲು ತಲುಪಲು ಕೇವಲ 78 ರನ್‌ಗಳ ಹಿಂದೆ ಇದ್ದಾರೆ. ಈ ಪಂದ್ಯ ಬೃಹತ್ ಮೈಲಿಗಲ್ಲು ಸಾಧಿಸುವ ಅವಕಾಶ ಹೊಂದಿದ್ದಾರೆ.
3) ಜೊತೆಯಾಟದಲ್ಲಿ ದಾಖಲೆ ನಿರ್ಮಿಸಲಿದ್ದಾರೆ ರೋಹಿತ್-ಕೊಹ್ಲಿ
ಭಾರತದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಜೋಡಿಯಾಗಿ ಭಾರತ ತಂಡವನ್ನು ಹಲವಾರು ಪಂದ್ಯಗಳಲ್ಲಿ ಗೆಲ್ಲಿಸಿದ್ದಾರೆ. ಇವರಿಬ್ಬರ ಜೊತೆಯಾಟದ ಮೊತ್ತಕ್ಕೆ ಇನ್ನೂ 2 ರನ್ ಸೇರಿಸಿದರೆ, ರೋಹಿತ್ ಮತ್ತು ಕೊಹ್ಲಿ ಏಕದಿನ ಇತಿಹಾಸದಲ್ಲಿ ವೇಗವಾಗಿ 5000 ರನ್ ಗಡಿಯನ್ನು ದಾಟಿದ ಜೋಡಿಯಾಗಲಿದ್ದಾರೆ. ಈ ಜೋಡಿ ಪ್ರಸ್ತುತ 85 ಏಕದಿನ ಇನ್ನಿಂಗ್ಸ್‌ಗಳಲ್ಲಿ 4998 ರನ್‌ಗಳನ್ನು ಬಾರಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications