For Quick Alerts
ALLOW NOTIFICATIONS  
For Daily Alerts
 

Asia Cup 2023: ಟೀಂ ಇಂಡಿಯಾಗೆ ಇನ್ನೂ ಅಳಿಸಲಾಗದ 'ಆ ಒಂದು ದಾಖಲೆ'

By ನಾಗೇಶ್

ಆಗಸ್ಟ್ 30 ರಂದು ಪ್ರಾರಂಭವಾಗುವ ಏಷ್ಯಾ ಕಪ್ 2023ಕ್ಕೆ ಕೆಲವೇ ದಿನಗಳು ಉಳಿದಿವೆ. ಈ ಬಾರಿ 50 ಓವರ್ ಮಾದರಿಯಲ್ಲಿ ಏಷ್ಯಾ ಕಪ್ ಟೂರ್ನಿ ನಡೆಯಲಿದೆ. ಇದುವರೆಗೆ ಭಾರತ ಏಷ್ಯಾ ಕಪ್‌ನಲ್ಲಿ 7 ಬಾರಿ ಪ್ರಶಸ್ತಿ ಜಯಿಸಿದೆ. ಮೈದಾನದಲ್ಲಿ ಭರ್ಜರಿ ಪ್ರದರ್ಶನ ನೀಡುವ ಟೀಮ್ ಇಂಡಿಯಾ ಹಲವು ಅಂಕಿ ಅಂಶಗಳಿಗೆ ತಮ್ಮ ಹೆಸರನ್ನು ನಮೂದಿಸಿದೆ. ಆದರೆ, ಆ ಒಂದು ದಾಖಲೆಯನ್ನು ಅಳಿಸಲು ಟೀಮ್ ಇಂಡಿಯಾಕ್ಕೆ ಇನ್ನು ಸಾಧ್ಯವಾಗಿಲ್ಲ.

ಈ ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಪಾಕಿಸ್ತಾನ ಭಾರತಕ್ಕಿಂತಲೂ ಮುಂದಿದೆ. ಹೌದು.. ಟೀಮ್ ಇಂಡಿಯಾದಲ್ಲಿ ಸ್ಟಾರ್ ಆಟಗಾರರ ದಂಡೇ ಇದೆ. ದೊಡ್ಡ ಇನಿಂಗ್ಸ್ ಗಳನ್ನು ಸುಲಭವಾಗಿ ಕಟ್ಟುವ ಕ್ಷಮತೆಯೂ ಇದೆ. ಆದರೆ, ಕೆಲವೊಮ್ಮೆ ಎಡವಿ ಮುಖಭಂಗ ಅನುಭವಿಸಿದ್ದೂ ಇದೆ. ಆದರೆ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ಆ ಒಂದು ದಾಖಲೆಯನ್ನು ಟೀಮ್ ಇಂಡಿಯಾ ಮುರಿಯಲು ಹೆಣಗಾಟ ನಡೆಸುತ್ತಿದೆ.

Asia Cup 2023: This One Of The Record That Team India Yet To Overcome From This

ಏಕದಿನ ಮಾದರಿಯ ಏಷ್ಯಾ ಕಪ್ ನಲ್ಲಿ ಪಾಕ್ ಅತಿ ದೊಡ್ಡ ಮೊತ್ತವನ್ನು ಕಲೆ ಹಾಕಿದ ಹಿರಿಮೆ ಪಾಕ್ ತಂಡದ್ದಾಗಿದೆ. 2010ರಲ್ಲಿ ಶ್ರೀಲಂಕಾದ ಡಂಬುಲಾದಲ್ಲಿ ಬಾಂಗ್ಲಾದೇಶದ ವಿರುದ್ಧ ಪಾಕಿಸ್ತಾನ ಕ್ರಿಕೆಟ್ ತಂಡವು ODI ಸ್ವರೂಪದಲ್ಲಿ ಏಷ್ಯಾ ಕಪ್‌ನ ಅತಿದೊಡ್ಡ ಮೊತ್ತವನ್ನು ಕಲೆ ಹಾಕಿತ್ತು. ಈ ಪಂದ್ಯದಲ್ಲಿ ಪಾಕಿಸ್ತಾನ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 385 ರನ್ ಗಳಿಸಿತ್ತು.

ಶಾಹಿದ್ ಅಫ್ರಿದಿ 60 ಎಸೆತಗಳಲ್ಲಿ 124 ರನ್

ಈ ಪಂದ್ಯದಲ್ಲಿ ಶಾಹಿದ್ ಅಫ್ರಿದಿ 60 ಎಸೆತಗಳಲ್ಲಿ 206.67 ಸ್ಟ್ರೈಕ್ ರೇಟ್‌ನಲ್ಲಿ 124 ರನ್ ಗಳಿಸಿದ್ದರು. ಅವರ ಇನ್ನಿಂಗ್ಸ್‌ನಲ್ಲಿ 17 ಬೌಂಡರಿ ಮತ್ತು 4 ಸಿಕ್ಸರ್‌ಗಳು ಸೇರಿದ್ದವು. ಈ ಪಂದ್ಯವನ್ನು ಪಾಕಿಸ್ತಾನ 139 ರನ್‌ಗಳಿಂದ ಗೆದ್ದುಕೊಂಡಿತ್ತು. ಪಂದ್ಯದಲ್ಲಿ ಅದ್ಭುತ ಇನ್ನಿಂಗ್ಸ್‌ಗಾಗಿ ಶಾಹಿದ್ ಅಫ್ರಿದಿ 'ಪ್ಲೇಯರ್ ಆಫ್ ದಿ ಮ್ಯಾಚ್' ಪ್ರಶಸ್ತಿಗೆ ಭಾಜನರಾಗಿದ್ದರು. ಇದು ಏಷ್ಯಾ ಕಪ್ ನಲ್ಲಿ ದಾಖಲಾದ ಗರಿಷ್ಠ ಮೊತ್ತವಾಗಿದೆ.

ಟೀಮ್ ಇಂಡಿಯಾ, ಪಾಕಿಸ್ತಾನ ತಂಡಕ್ಕಿಂತ ಸ್ವಲ್ಪ ಹಿಂದಿದೆ

ಮತ್ತೊಂದೆಡೆ, ಅತಿ ದೊಡ್ಡ ಮೊತ್ತವನ್ನು ಗಳಿಸುವ ವಿಷಯದಲ್ಲಿ ಟೀಮ್ ಇಂಡಿಯಾ, ಪಾಕಿಸ್ತಾನ ತಂಡಕ್ಕಿಂತ ಸ್ವಲ್ಪ ಹಿಂದಿದೆ. 2008ರಲ್ಲಿ ಹಾಂಕಾಂಗ್ ವಿರುದ್ಧ ಪಾಕಿಸ್ತಾನದ ಕರಾಚಿಯಲ್ಲಿ ಭಾರತ 50 ಓವರ್‌ಗಳಲ್ಲಿ 4 ವಿಕೆಟ್‌ಗೆ 374 ರನ್‌ಗಳನ್ನು ಕಲೆ ಹಾಕಿತ್ತು. ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದ ಎಂ.ಎಸ್ ಧೋನಿ ಅಜೇಯ 109 ರನ್ ಗಳಿಸಿದ್ದರು.

ಅಲ್ಲದೆ ಸುರೇಶ್ ರೈನಾ ಐದನೇ ಕ್ರಮಾಂಕದಲ್ಲಿ 101 ರನ್ ಗಳಿಸಿದ್ದರು. ಈ ಪಂದ್ಯವನ್ನು ಭಾರತ 256 ರನ್‌ಗಳಿಂದ ಗೆದ್ದುಕೊಂಡಿತು, ಇದು ಇದುವರೆಗಿನ ಏಕದಿನ ಏಷ್ಯಾಕಪ್‌ನಲ್ಲಿ ರನ್‌ಗಳ ವಿಷಯದಲ್ಲಿ ಅತಿದೊಡ್ಡ ಗೆಲುವಾಗಿದೆ.

ಏಷ್ಯಾ ಕಪ್ ನಲ್ಲಿ ಗರಿಷ್ಠ ರನ್

> ಪಾಕಿಸ್ತಾನ: 385/7 - 2010 ರಲ್ಲಿ ಬಾಂಗ್ಲಾದೇಶ ವಿರುದ್ಧ (ದಂಬುಲಾ)
> ಭಾರತ: 374/4 - 2008 ರಲ್ಲಿ ಹಾಂಗ್ ಕಾಂಗ್ ವಿರುದ್ಧ (ಕರಾಚಿ)
> ಶ್ರೀಲಂಕಾ: 357/9 - ಬಾಂಗ್ಲಾದೇಶ ವಿರುದ್ಧ 2008 (ಲಾಹೋರ್)
> ಪಾಕಿಸ್ತಾನ: 343/5 - 2004 ರಲ್ಲಿ ಹಾಂಗ್ ಕಾಂಗ್ ವಿರುದ್ಧ (ಕೊಲಂಬೊ)
> ಶ್ರೀಲಂಕಾ: 2008 ರಲ್ಲಿ ಬಾಂಗ್ಲಾದೇಶ ವಿರುದ್ಧ 332/8 (ಕರಾಚಿ).

Story first published: Monday, August 28, 2023, 11:23 [IST]
Other articles published on Aug 28, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+