For Quick Alerts
ALLOW NOTIFICATIONS  
For Daily Alerts
 

Virat Kohli: 9 ವರ್ಷಗಳ ನಂತರ ಏಷ್ಯಾ ಕಪ್ ಆಡಲು ಸಜ್ಜಾದ ವಿರಾಟ್ ಕೊಹ್ಲಿ; ಅದು ಹೇಗೆ? ಇಲ್ಲಿದೆ ವಿವರ

ಗುರುವಾರ, ಜೂನ್ 15ರಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಪ್ರಸ್ತಾಪಿಸಿದ ಹೈಬ್ರಿಡ್ ಮಾದರಿಯನ್ನು ಅಧಿಕೃತವಾಗಿ ಒಪ್ಪಿಕೊಂಡಿತು. ಆಗಸ್ಟ್ 31ರಿಂದ ಸೆಪ್ಟೆಂಬರ್ 17ರವರೆಗೆ 2023ರ ಏಷ್ಯಾ ಕಪ್ ಪಂದ್ಯಾವಳಿ ನಡೆಯಲಿದೆ.

ಏಷ್ಯಾ ಕಪ್ 2023ರಲ್ಲಿ ಒಟ್ಟು ನಾಲ್ಕು ಪಂದ್ಯಗಳು ಪಾಕಿಸ್ತಾನದಲ್ಲಿ ನಡೆಯಲಿದ್ದರೆ, ಫೈನಲ್ ಸೇರಿದಂತೆ ಉಳಿದ ಒಂಬತ್ತು ಪಂದ್ಯಗಳಿಗೆ ಶ್ರೀಲಂಕಾ ಆತಿಥ್ಯ ವಹಿಸಲಿದೆ.

Virat Kohli Is All Set To Play Asia Cup

ಉಭಯ ದೇಶಗಳ ನಡುವಿನ ಹದಗೆಟ್ಟ ರಾಜಕೀಯ ಸಂಬಂಧಗಳಿಂದಾಗಿ ಪಾಕಿಸ್ತಾನಕ್ಕೆ ಪ್ರಯಾಣಿಸಲು ಸಾಧ್ಯವಾಗದ ಕಾರಣ ಭಾರತ ತಂಡ ತನ್ನ ಎಲ್ಲಾ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಲಿದೆ.

ಮುಂಬರುವ ಅಕ್ಟೋಬರ್-ನವೆಂಬರ್‌ನಲ್ಲಿ ಭಾರತದಲ್ಲಿಯೇ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್‌ ಪಂದ್ಯಾವಳಿಗೆ ಏಷ್ಯಾದ ತಂಡಗಳು ತಯಾರಿ ನಡೆಸುತ್ತಿರುವ ಕಾರಣದಿಂದಾಗಿ, ಈ ವರ್ಷದ ಏಷ್ಯಾಕಪ್ ಪಂದ್ಯಾವಳಿಯನ್ನು ಏಕದಿನ (50 ಓವರ್‌ಗಳ) ಮಾದರಿಯಲ್ಲಿ ಆಡುವುದರಿಂದ ಹೆಚ್ಚಿನ ಮಹತ್ವ ಪಡೆದಿದೆ.

2019ರ ಏಕದಿನ ವಿಶ್ವಕಪ್‌ಗಿಂತ ಮೊದಲು 2018ರಲ್ಲಿ ಏಕದಿನ ಮಾದರಿಯಲ್ಲಿ ಏಷ್ಯಾ ಕಪ್ ಪಂದ್ಯಾವಳಿ ಕೊನೆಯ ಬಾರಿಗೆ ನಡೆದಿತ್ತು. ಕುತೂಹಲಕಾರಿ ವಿಷಯವೆಂದರೆ, ವಿರಾಟ್ ಕೊಹ್ಲಿ ಅವರು 2018ರ ಆವೃತ್ತಿಯಿಂದ ವಿಶ್ರಾಂತಿ ಪಡೆದಿದ್ದ ಕಾರಣ, ಒಂಬತ್ತು ವರ್ಷಗಳ ನಂತರ ಮೊದಲ ಬಾರಿಗೆ ಏಕದಿನ ಏಷ್ಯಾ ಕಪ್ ಪಂದ್ಯಾವಳಿ ಆಡಲು ಸಿದ್ಧರಾಗಿದ್ದಾರೆ.

Virat Kohli Is All Set To Play Asia Cup

2014ರಲ್ಲಿ ನಡೆದ ಏಷ್ಯಾ ಕಪ್‌ನಲ್ಲಿ ಭಾರತ ತಂಡವು ಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾದಾಗ, ವಿರಾಟ್ ಕೊಹ್ಲಿ ಕೊನೆಯ ಬಾರಿಗೆ 50-ಓವರ್‌ಗಳ ಮಾದರಿಯ ಪಂದ್ಯಾವಳಿಯಲ್ಲಿ ಕಾಣಿಸಿಕೊಂಡಿದ್ದರು.

ಭಾರತ ತಂಡ ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ವಿರುದ್ಧ ಮಾತ್ರ ಗೆಲುವು ಸಾಧಿಸಿತ್ತು ಮತ್ತು ಪಾಕಿಸ್ತಾನ ಮತ್ತು ಶ್ರೀಲಂಕಾ ವಿರುದ್ಧ ಸೋಲು ಕಂಡಿತ್ತು. ಆ ಎರಡೂ ಪಂದ್ಯಗಳಲ್ಲಿ ಭಾರತ ನಿಕಟ ಅಂತರದಿಂದ ಪರಾಭವಗೊಂಡಿರುವುದು ಗೊತ್ತಿರುವ ವಿಷಯ.

2014ರಲ್ಲಿ ಶಾಹಿದ್ ಅಫ್ರಿದಿ ಪಾಕಿಸ್ತಾನ ತಂಡವನ್ನು ಒಂದು ವಿಕೆಟ್‌ನಿಂದ ಗೆಲುವಿನತ್ತ ಕೊಂಡೊಯ್ಯುವ ಮೂಲಕ, ಭಾರತ ತಂಡದ ಹಿಡಿತದಿಂದ ಪಂದ್ಯವನ್ನು ಕಸಿದಿದ್ದರು. ನಂತರ ಶ್ರೀಲಂಕಾ ವಿರುದ್ಧ ಕೇವಲ ಎರಡು ವಿಕೆಟ್‌ಗಳಿಂದ ಸೋಲು ಅನುಭವಿಸಿತ್ತು.

ಏಕದಿನ ಏಷ್ಯಾ ಕಪ್‌ ಪಂದ್ಯಾವಳಿಯಲ್ಲಿ ವಿರಾಟ್ ಕೊಹ್ಲಿ 10 ಇನ್ನಿಂಗ್ಸ್‌ಗಳಲ್ಲಿ 61.3ರ ಸರಾಸರಿಯಲ್ಲಿ 613 ರನ್ ಗಳಿಸಿದ್ದು, ಅದರಲ್ಲಿ 183 ರನ್ ಗರಿಷ್ಠ ಸ್ಕೋರ್ ಆಗಿದೆ. ಈವರೆಗೆ ಪಂದ್ಯಾವಳಿಯಲ್ಲಿ 1 ಅರ್ಧಶತಕ ಮತ್ತು 3 ಶತಕಗಳನ್ನು ಗಳಿಸಿದ್ದಾರೆ. ಅದೇ ರೀತಿ ಮುಂಬರುವ ಆವೃತ್ತಿಯಲ್ಲಿ ತಮ್ಮ ಖಾತೆಗೆ ಹೆಚ್ಚಿನ ರನ್ ಗಳಿಸಲು ವಿರಾಟ್ ಕೊಹ್ಲಿ ಉತ್ಸುಕರಾಗಿದ್ದಾರೆ.

2023ರ ಏಷ್ಯಾ ಕಪ್ ಪಂದ್ಯಾವಳಿ ಭಾರತ ಮತ್ತು ಇತರ ತಂಡಗಳಿಗೆ ಅಕ್ಟೋಬರ್ 5ರಂದು ಪ್ರಾರಂಭವಾಗುವ ಏಕದಿನ ವಿಶ್ವಕಪ್‌ ಪಂದ್ಯಾವಳಿಗೆ ತಮ್ಮ ತಂಡವನ್ನು ಕಟ್ಟಲು ಸಹಾಯ ಮಾಡಲಿದೆ.

Story first published: Friday, June 16, 2023, 19:28 [IST]
Other articles published on Jun 16, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+