For Quick Alerts
ALLOW NOTIFICATIONS  
For Daily Alerts
 

Virat Kohli: ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಬೃಹತ್ ದಾಖಲೆ ನಿರ್ಮಿಸಲಿದ್ದಾರೆ ವಿರಾಟ್ ಕೊಹ್ಲಿ

ಶನಿವಾರ, ಸೆಪ್ಟೆಂಬರ್ 2ರಂದು ಶ್ರೀಲಂಕಾದ ಕ್ಯಾಂಡಿಯ ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಧ್ಯಾಹ್ನ 3 ಗಂಟೆಗೆ ಆರಂಭವಾಗಲಿರುವ 2023ರ ಏಷ್ಯಾ ಕಪ್‌ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಸೆಣಸಾಡಲಿವೆ.

ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಸೆಣಸಾಟಕ್ಕಾಗಿ ವಿಶ್ವ ಕ್ರಿಕೆಟ್‌ ಪ್ರೇಮಿಗಳು ಕುತೂಹಲದಿಂದ ಕಣ್ಣು ಬಿಟ್ಟು ಕಾಯುತ್ತಿರುತ್ತಾರೆ. ಇದೇ ವೇಳೆ ಕಳೆದ ಎರಡು ದಿನಗಳಿಂದ ಉಭಯ ತಂಡಗಳ ಆಟಗಾರರು ಅಭ್ಯಾಸದಲ್ಲಿ ತೊಡಗಿದ್ದರು ಮತ್ತು ಇಂದಿನ ಹೈ-ವೋಲ್ಟೇಜ್ ಪಂದ್ಯಕ್ಕಾಗಿ ಸಜ್ಜಾಗಿದ್ದಾರೆ.

Asia Cup 2023: Virat Kohli Will Create A Big Record In The Match Against Pakistan

ಇನ್ನು ಏಷ್ಯಾ ಕಪ್‌ನ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಬೃಹತ್ ದಾಖಲೆ ನಿರ್ಮಿಸುವ ಸನಿಹದಲ್ಲಿದ್ದಾರೆ. ಒಂದು ವೇಳೆ ಈ ದಾಖಲೆ ನಿರ್ಮಿಸಿದರೆ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ವೇಗದ ಬ್ಯಾಟ್ಸ್‌ಮನ್ ಎನಿಸಿಕೊಳ್ಳಲಿದ್ದಾರೆ.

ಭಾರತ ಕ್ರಿಕೆಟ್‌ನ ತಂಡದ ಸಾರ್ವಕಾಲಿಕ ಶ್ರೇಷ್ಠ ವಿರಾಟ್ ಕೊಹ್ಲಿ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವೇಗವಾಗಿ 13000 ರನ್ ಪೂರೈಸಲು ಕೇವಲ 102 ರನ್‌ಗಳ ದೂರದಲ್ಲಿದ್ದಾರೆ.

ಏಕದಿನ ಕ್ರಿಕೆಟ್ ಮಾದರಿಯಲ್ಲಿ ಚೇಸ್ ಮಾಸ್ಟರ್, ರನ್ ಮಷಿನ್ ಎಂದೇ ಖ್ಯಾತಿಯಾಗಿರುವ 34 ವರ್ಷದ ವಿರಾಟ್ ಕೊಹ್ಲಿ ಆಡಿರುವ 275 ಪಂದ್ಯಗಳಲ್ಲಿ 57.32ರ ಸರಾಸರಿ ಮತ್ತು 93.62ರ ಸ್ಟ್ರೈಕ್ ರೇಟ್‌ನಲ್ಲಿ 46 ಶತಕ ಮತ್ತು 65 ಅರ್ಧಶತಕಗಳೊಂದಿಗೆ 12,898 ರನ್ ಕಲೆಹಾಕಿದ್ದಾರೆ.

Asia Cup 2023: Virat Kohli Will Create A Big Record In The Match Against Pakistan

ವಿರಾಟ್ ಕೊಹ್ಲಿ ಇದುವರೆಗೆ 265 ಏಕದಿನ ಇನ್ನಿಂಗ್ಸ್‌ಗಳನ್ನು ಆಡಿದ್ದು, ಈ ಸ್ವರೂಪದಲ್ಲಿ 13000 ರನ್‌ಗಳ ಹೆಗ್ಗುರುತನ್ನು ತಲುಪಿದ ವಿಶ್ವದ ಅತಿ ವೇಗದ ಬ್ಯಾಟ್ಸ್‌ಮನ್ ಆಗಲಿದ್ದಾರೆ.

ಏಕದಿನ ಕ್ರಿಕೆಟ್‌ನ ಇನಿಂಗ್ಸ್‌ಗಳ ಲೆಕ್ಕದಲ್ಲಿ ವೇಗವಾಗಿ 13,000 ರನ್‌ಗಳನ್ನು ಪೂರೈಸಿದ ಪ್ರಸ್ತುತ ದಾಖಲೆಯು ಭಾರತದ ಲೆಜೆಂಡ್ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ. ಭಾರತದ ಮಾಜಿ ಆಟಗಾರ 321 ಇನ್ನಿಂಗ್ಸ್‌ಗಳಲ್ಲಿ ಹೆಗ್ಗುರುತನ್ನು ತಲುಪಿದ್ದರು.

Asia Cup 2023: Virat Kohli Will Create A Big Record In The Match Against Pakistan

ಸಚಿನ್ ತೆಂಡೂಲ್ಕರ್ ನಂತರದ ಸ್ಥಾನದಲ್ಲಿ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ 341 ಇನ್ನಿಂಗ್ಸ್‌ಗಳಲ್ಲಿ 13,000 ರನ್‌ ಪೂರೈಸಿದ್ದಾರೆ. ಇನ್ನು ಶ್ರೀಲಂಕಾದ ಮಾಜಿ ನಾಯಕರಾದ ಕುಮಾರ್ ಸಂಗಕ್ಕಾರ (363 ಇನ್ನಿಂಗ್ಸ್) ಮತ್ತು ಸನತ್ ಜಯಸೂರ್ಯ (416 ಇನ್ನಿಂಗ್ಸ್) ನಂತರದ ಸ್ಥಾನದಲ್ಲಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ 5ನೇ ಸ್ಥಾನ

ಒಟ್ಟಾರೆ, ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಐದನೇ ಸ್ಥಾನದಲ್ಲಿದ್ದಾರೆ. ತೆಂಡೂಲ್ಕರ್ (18,426), ಕುಮಾರ್ ಸಂಗಕ್ಕಾರ (14,234), ರಿಕಿ ಪಾಂಟಿಂಗ್ (13,704) ಮತ್ತು ಸನತ್ ಜಯಸೂರ್ಯ (13,430) ಮಾತ್ರ ಏಕದಿನ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿಗಿಂತ ಹೆಚ್ಚು ರನ್ ಗಳಿಸಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ 5ನೇ ಸ್ಥಾನ

ಭಾರತದ ರನ್ ಮಷಿನ್ ವಿರಾಟ್ ಕೊಹ್ಲಿ ಅವರು ಒಟ್ಟಾರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದು, ಒಟ್ಟು 25,582 ರನ್ ಗಳಿಸಿದ್ದಾರೆ.

ಸಚಿನ್ ತೆಂಡೂಲ್ಕರ್ (34,357), ಸಂಗಕ್ಕಾರ (28,016), ಪಾಂಟಿಂಗ್ (27,483) ಮತ್ತು ಮಹೇಲಾ ಜಯವರ್ಧನೆ (25,957) ಪಟ್ಟಿಯಲ್ಲಿ ಮೊದಲ ನಾಲ್ಕು ಸ್ಥಾನದಲ್ಲಿದ್ದಾರೆ.

Story first published: Saturday, September 2, 2023, 10:15 [IST]
Other articles published on Sep 2, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+