
ಬೌಲಿಂಗ್‌ನಲ್ಲಿನ ವೈಫಲ್ಯ
ಯುಎಇನಲ್ಲಿ ನಡೆದ ಏಷ್ಯಾಕಪ್‌ನಲ್ಲಿ ಭಾರತ ಬೌಲಿಂಗ್‌ನಲ್ಲಿ ವೈಫಲ್ಯತೆಯನ್ನು ಅನುಭವಿಸಿರುವುದು ಸ್ಪಷ್ಟವಾಗಿದೆ. ಸವಾಲಿನ ಮೊತ್ತವನ್ನು ಪೇರಿಸಿದ ಹೊರೆತಾಗಿಯೂ ಭಾರತ ಸೂಪರ್ 4 ಹಂತದ ಎರಡು ಪಂದ್ಯಗಳಲ್ಲಿಯೂ ಅದನ್ನು ರಕ್ಷಿಸುವಲ್ಲಿ ವಿಫಲವಾಯಿತು. ನಿರ್ಣಾಯಕ ಹಂತದಲ್ಲಿ ವಿಕೆಟ್ ಪಡೆಯಲು ಸಾಧ್ಯವಾಗದಿರುವುದರ ಜೊತೆಗೆ ಈ ಹಂತದಲ್ಲಿ ಸಾಕಷ್ಟು ರನ್‌ಗಳನ್ನು ಬಿಟ್ಟುಕೊಟ್ಟಿದ್ದು ಕೂಡ ತಂಡದ ಸೋಲಿಗೆ ಕಾರಣವಾಯಿತು.

ಆಯ್ಕೆಗಾರರ ಮಹಾ ಪ್ರಮಾದ
ಇನ್ನು ಭಾರತದ ಬೌಲಿಂಗ್ ವಿಭಾಗದಲ್ಲಿ ಹಿನ್ನಡೆ ಅನುಭವಿಸಲು ಆಯ್ಕೆ ಮಂಡಳಿಯ ದೊಡ್ಡ ಪ್ರಮಾದವೂಈ ಕಾರಣವಾಗಿದೆ. ಏಷ್ಯಾ ಕಪ್‌ನಂತಾ ಮಹತ್ವದ ಟೂರ್ನಿಗೆ ಕೇವಲ ಮೂವರು ಸ್ಪೆಶಲಿಸ್ಟ್ ವೇಗಿಗಳನ್ನು ಮಾತ್ರವೇ ಆಯ್ಕೆ ಮಾಡಿದ್ದು ತಂಡದ ಸಂಯೋಜನೆಯಲ್ಲಿ ದೊಡ್ಡ ಹಿನ್ನಡೆಗೆ ಕಾರಣವಾಯಿತು. ಅದರಲ್ಲೂ ಅಂತಿಮ ಹಂತದಲ್ಲಿ ಆವೇಶ್ ಖಾನ್ ಅನಾರೋಗ್ಯದಿಂದ ಬಳಲಿದ ಕಾರಣ ಸೂಪರ್ 4 ಹಂತದ ಎರಡು ಪ್ರಮುಖ ಪಂದ್ಯಗಳಲ್ಲಿ ಭಾರತ ಎರಡು ಸ್ಪೆಶಲಿಸ್ಟ್ ವೇಗಿಗಳು ಹಾಗೂ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರೊಂದಿಗೆ ಕಣಕ್ಕಿಳಿಯುವ ಅನಿವಾರ್ಯತೆಗೆ ಸಿಲುಕಿತ್ತು. ಇದು ತಂಡಕ್ಕೆ ದೊಡ್ಡ ಹಿನ್ನಡೆಯುಂಟು ಮಾಡಿದೆ.

ಮಧ್ಯಮ ಓವರ್‌ಗಳಲ್ಲಿ ಚುರುಕಿಲ್ಲದ ಬ್ಯಾಟಿಂಗ್
ಇನ್ನು ಬ್ಯಾಟಿಂಗ್ ವಿಭಾಗವೂ ಅಂದುಕೊಂಡಂತಾ ಪ್ರದರ್ಶನ ನೀಡಲು ವಿಫಲವಾಗಿರುವುದು ಏಷ್ಯಾ ಕಪ್‌ನ ಸೋಲಿಗೆ ಕಾರಣಗಳಲ್ಲಿ ಒಂದು. ಅದರಲ್ಲೂ ಪವರ್‌ಪ್ಲೇನಲ್ಲಿ ಭಾರತ ತಂಡದಿಂದ ಉತ್ತಮ ರನ್‌ಗಳು ಹರಿದುಬಂದರೂ ಅದಾದ ಬಳಿಕ ಮಧ್ಯದ ಓವರ್‌ಗಳಲ್ಲಿ ರನ್‌ವೇಗವನ್ನು ಹೆಚ್ಚಿಸಲು ಭಾರತ ತಂಡ ವಿಫಲವಾಯಿತು. ಈ ಹಂತದಲ್ಲಿ ಭಾರತ ತಂಡ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಾ ಸಾಗಿದ್ದು ತಂಡಕ್ಕೆ ಹಿನ್ನಡೆಯುಂಟಾಯಿತು. ಹೀಗಾಗಿ ಆರಂಭದಲ್ಲಿ ಪಡೆದುಕೊಂಡ ವೇಗವನ್ನು ಈ ಹಂತದಲ್ಲಿ ಮುಂದುವರಿಸಿಕೊಂಡು ಹೋಗಲು ಭಾರತ ತಂಡ ವಿಫಲವಾಗಿದೆ.

ಫಿನಿಷಿಂಗ್‌ನಲ್ಲಿಯೂ ಎಡವಿದ ಭಾರತ
ಏಷ್ಯಾ ಕಪ್‌ಗಿಂತಲೂ ಹಿಂದಿನವರೆಗೂ ಭಾರತ ಹೆಚ್ಚು ಯಶಸ್ಸು ಸಾಧಿಸಿದ್ದು ಫಿನಿಷಿಂಗ್ ಹಂತದಲ್ಲಿ. ಈ ಹಂತದಲ್ಲಿ ವೇಗವಾಗಿ ರನ್‌ಗಳನ್ನು ಗಳಿಸುತ್ತಾ ಎದುರಾಳಿ ಮೇಲೆ ಮತ್ತಷ್ಟು ಒತ್ತಡ ಹಾಕುವಲ್ಲಿ ಭಾರತ ಯಶಸ್ವಿಯಾಗಿತ್ತು. ಆದರೆ ಏಷ್ಯಾಕಪ್‌ನಲ್ಲಿ ಭಾರತ ತಂಡ ಮತ್ತೆ ತಂಡದ ಸಂಯೋಜನೆಯಲ್ಲಿ ಮಾಡಿದ ಎಡವಟ್ಟು ಹೊಡೆತ ನೀಡಿತು. ಡೆತ್ ಓವರ್‌ಗಳಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಆಡುವ ದಿನೇಶ್ ಕಾರ್ತಿಕ್ ಅವರನ್ನು ಆಡುವ ಬಳಗದಿಂದ ಹೊರಗಿಟ್ಟು ಅಂತಿಮ ಐದು ಓವರ್‌ಗಳಲ್ಲಿ ವೇಗವಾಗಿ ರನ್ ಕದಿಯುವ ಆಟಗಾರನಿಲ್ಲದೆ ತಂಡ ಎಡವಿತು. ದಿನೇಶ್ ಕಾರ್ತಿ್ ಬದಲಿಗೆ ಕಣಕ್ಕಿಳಿದ ರಿಷಬ್ ಪಂತ್ ಎಂದಿನಂತೆ ಚುಟುಕು ಮಾದರಿಯಲ್ಲಿ ವೈಫಲ್ಯ ಅನುಭವಿಸಿದರು. ಇನ್ನು ಅಗ್ರ ಕ್ರಮಾಂಕದಲ್ಲಿ ಕಣಕ್ಕಿಳಿಯುತ್ತಿದ್ದ ದೀಪಕ್ ಹೂಡಾ ಅವರನ್ನು ಫಿನಿಷರ್ ಆಗಿ ಕಣಕ್ಕಿಳಿಸುವಂತಾ ಕೆಟ್ಟ ಪ್ರಯೋಗಗಳು ಏಷ್ಯಾಕಪ್‌ನಂತಾ ನಿರ್ಣಾಯಕ ವೇದಿಕೆಯಲ್ಲಿಯೂ ನಡಿಯಿತು. ಈ ರೀತಿಯ ಪ್ರಯೋಗಗಳು ತಂಡದ ಮೇಲೆ ಕೆಟ್ಟ ಪರಿಣಾಮ ಬೀರುವ ಜೊತೆಗೆ ಉತ್ತಮ ಲಯದಲ್ಲಿರುವ ಆಟಗಾರರ ಮೇಲೂ ಒತ್ತಡ ಬೀರುತ್ತವೆ ಎಂಬ ಬಲವಾದ ಅಭಿಪ್ರಾಉಗಳ ಮಧ್ಯೆಯೂ ಇಂಥಾ ಪ್ರಯೋಗಗಳು ಭಾರತ ತಂಡದ ಮ್ಯಾನೇಜ್‌ಮೆಂಟ್‌ನಲ್ಲಿ ನಡೆದಿರುವುದು ವಿಪರ್ಯಾಸ. ಈ ಎಲ್ಲಾ ಅಂಶಗಳನ್ನು ಟೀಮ್ ಇಂಡಿಯಾ ಯಾವ ರೀತಿಯಾಗಿ ಸರಿಪಡಿಸಿಕೊಳ್ಳಳಿದೆ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications












