For Quick Alerts
ALLOW NOTIFICATIONS  
For Daily Alerts
 

Abhishek vs Afridi: ಹೈವೋಲ್ಟೇಜ್‌ ಫೈನಲ್‌ ಕದನದ ಪ್ರಮುಖ ಆಕರ್ಷಣೆ

ಭಾನುವಾರ ಏಷ್ಯಾ ಕಪ್‌ ಟಿ20 ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಕಾದಾಟ ನಡೆಸಲಿವೆ. ಈ ವೇಳೆ ಉಭಯ ತಂಡಗಳ ಸ್ಟಾರ್ ಆಟಗಾರರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈ ವೇಳೆ ಟೀಮ್ ಇಂಡಿಯಾದ ಸ್ಟಾರ್ ಆರಂಭಿಕ ಆಟಗಾರ ಅಭಿಷೇಕ್‌ ಶರ್ಮಾ ಹಾಗೂ ಪಾಕಿಸ್ತಾನ ತಂಡದ ಸ್ಟಾರ್ ಬೌಲರ್ ಶಾಹೀನ್‌ ಶಾ ಅಫ್ರಿದಿ ಅವರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

ಅಭಿಷೇಕ್‌ ಶರ್ಮಾ ತಮ್ಮ ಬಿರುಸಿನ ಬ್ಯಾಟಿಂಗ್‌ನಿಂದ ಹೆಸರುವಾಸಿ. ಇವರು ತಾವು ಎದುರಿಸವು ಮೊದಲ ಎಸೆತದಿಂದ ಅಬ್ಬರದ ಆಟವನ್ನು ಆಡಲು ಖ್ಯಾತರು. ಇವರು ಮೊದಲ ಎಸೆತದಿಂದ ಎದುರಾಳಿ ಬೌಲರ್‌ಗಳ ಮೇಲೆ ಒತ್ತಡವನ್ನು ಹೇರುತ್ತಾರೆ. ಇತ್ತೀಚಿಗೆ ನಡೆದ ಸೂಪರ್ 4 ಹಂತದ ಪಂದ್ಯದಲ್ಲೂ ಅಭಿಷೇಕ್‌ ತಾವು ಎದುರಿಸಿದ ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸಿದ್ದರು. ಈ ಪಂದ್ಯದಲ್ಲಿ ಅಭಿಷೇಕ್, ಶಾಹೀನ್‌ ಶಾ ಆಫ್ರಿದಿ ಅವರ ಎಸೆತವನ್ನು ಸಿಕ್ಸರ್‌ ಸಿಡಿಸಿದ್ದಾರೆ. ಹೀಗಾಗಿ ಫೈನಲ್‌ ಪಂದ್ಯದಲ್ಲಿ ಇವರು ಹೇಗೆ ಆಡುತ್ತಾರೆ ಎಂಬುದರ ಮೇಲೆ ಚಿತ್ತ ನೆಟ್ಟಿದೆ.

Asia Cup Final Abhishek vs Afridi Duel The Powerplay Battle That Will Decide IND vs PAK

ಅಭಿಷೇಕ್‌ ಶರ್ಮಾ ಏಷ್ಯಾ ಕಪ್‌ ಟಿ20 ಟೂರ್ನಿಯ ಈ ಹಿಂದೆ ಆಡಿದ ಮೂರು ಪಂದ್ಯಗಳಲ್ಲಿ ಅರ್ಧಶತಕ ಬಾರಿಸಿ ಅಬ್ಬರಿಸಿದ್ದಾರೆ. ಬಾಂಗ್ಲಾ, ಪಾಕ್‌, ಶ್ರೀಲಂಕಾ ವಿರುದ್ಧ ಅರ್ಧಶತಕ ಬಾರಿಸಿರುವ ಅಭಿಷೇಕ್‌ ಮತ್ತೊಂದು ಅರ್ಧಶತಕ ಬಾರಿಸುವ ಕನಸಿನಲ್ಲಿದ್ದಾರೆ. ಇವರ ಈ ಫಾರ್ಮ್‌ ನಿಜಕ್ಕೂ ಅಭಿಮಾನಿಗಳ ಭರವಸೆ ಹೆಚ್ಚಿಸಿದೆ. ಅಭಿಷೇಕ್‌ ಶರ್ಮಾ, ಪಾಕ್‌ ವೇಗಿ ಆಫ್ರಿದಿ ವಿರುದ್ಧ ಸದ್ಯಕ್ಕಂತೂ ಮೇಲುಗೈ ಸಾಧಿಸಿದ್ದಾರೆ.

ಯಾರ ಕೈ ಮೇಲೆ?

ಏಷ್ಯಾ ಕಪ್ ಫೈನಲ್‌ ಪಂದ್ಯದಲ್ಲಿ ಅಭಿಷೇಕ್‌ ಶರ್ಮಾ ಆರಂಭದಲ್ಲಿ ಬಿರುಸಿನ ಆಟವಾಡಿ ತಂಡಕ್ಕೆ ಬಿಗ್ ಓಪನಿಂಗ್‌ ನೀಡುವ ಕನಸಿನಲ್ಲಿದ್ದಾರೆ. ಇನ್ನು ಪಾಕ್‌ ವೇಗಿ ಶಾಹಿನ್ ಶಾ ಆಫ್ರಿದಿ ಪವರ್‌ ಪ್ಲೇನಲ್ಲಿ ಶಿಸ್ತು ಬದ್ಧ ದಾಳಿ ನಡೆಸಿ ಕಾಡಬೇಕಿದೆ. ಭಾನುವಾರ ನಡೆಯುವ ಪಂದ್ಯದಲ್ಲಿ ಯಾರ ಕೈ ಮೇಲಾಗುತ್ತದೆ ಎಂಬ ಬಗ್ಗೆ ಚರ್ಚೆಗಳು ಆರಂಭವಾಗಿವೆ. ಈಗಾಗಲೇ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ ಕಲೆ ಹಾಕಿರುವ ದಾಖಲೆಯನ್ನು ಹೊಂದಿರುವ ಅಭಿಷೇಕ್‌ ಶರ್ಮಾ, ಮತ್ತೊಮ್ಮೆ ಸ್ಥಿರ ಪ್ರದರ್ಶನ ನೀಡಿದ್ದೇ ಆದಲ್ಲಿ ಟೀಮ್ ಇಂಡಿಯಾ ಗೆಲುವಿನ ಕನಸು ಕಾಣಬಹುದಾಗಿದೆ.

ಭಾನುವಾರ ಪಾಕ್‌ ವೇಗಿ ಅಭಿಷೇಕ್‌ ಶರ್ಮಾ ಅವರ ಆಟಕ್ಕೆ ಬ್ರೇಕ್ ಹಾಕಿ ಟೀಮ್ ಇಂಡಿಯಾಕ್ಕೆ ಕಾಡಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಒಂದು ವೇಳೆ ಈ ಪ್ಲ್ಯಾನ್ ಕೈ ಕೊಟ್ಟಲ್ಲಿ ಸಂಪೂರ್ಣ ಪಂದ್ಯ ಪಾಕ್‌ ನಿಂದ ಭಾರತದ ಕಡೆಗೆ ವಾಲುತ್ತದೆ. ಅಭಿಷೇಕ್‌ ಪಂದ್ಯದ ಗತಿಯನ್ನೇ ಬದಲಿಸಬಲ್ಲ ಪ್ಲೇಯರ್ ಎಂಬುದರಲ್ಲಿ ಎರಡು ಮಾತಿಲ್ಲ. ಏಷ್ಯಾ ಕಎಪ್‌ ಟಿ20 ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಅಭಿಷೇಕ್‌ ಹಾಗೂ ಶಾಹಿನ್‌ ನಡುವಿನ ಕಾಳಗ ಎಲ್ಲರ ಚಿತ್ತ ಕದ್ದಿದೆ. ಭಾನುವಾರ ಯಾರ ಕೈ ಮೇಲಾಗುತ್ತದೆ ಎಂಬ ಬಗ್ಗೆ ವಿವರ ಇಲ್ಲಿದೆ.

Story first published: Sunday, September 28, 2025, 13:40 [IST]
Other articles published on Sep 28, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+