For Quick Alerts
ALLOW NOTIFICATIONS  
For Daily Alerts
 

Asia cup: ಭಾರತ vs ಪಾಕಿಸ್ತಾನ ಫೈನಲ್ ನಡೆಯಲ್ಲ: ಇತಿಹಾಸ ನೆನಪಿಸಿದ ಆಕಾಶ್ ಚೋಪ್ರ

ಏಷ್ಯಾಕಪ್ ಟೂರ್ನಿಯ ಫೈನಲ್ ಪಂದ್ಯದ ಸ್ಥಾನಕ್ಕಾಗಿ ಶ್ರೀಲಂಕಾ ಹಾಗೂ ಪಾಕಿಸ್ತಾನ ತಂಡಗಳು ಕದನಕ್ಕೆ ಸಿದ್ಧವಾಗುತ್ತಿದೆ. ಭಾರತ ಈಗಾಘಲೇ ಫೈನಲ್‌ಗೆ ಪ್ರವೇಶ ಪಡೆದಿರುವ ಕಾರಣ ಈ ಪಂದ್ಯ ಈ ಎರಡು ತಂಡಗಳಿಗೂ ಮುಖ್ಯವಾಗಿದೆ. ಗೆದ್ದ ತಂಡ ಫೈನಲ್‌ಗೆ ಪ್ರವೇಶ ಪಡೆಯಲಿರುವ ಕಾರಣ ತೀವ್ರ ಕುತೂಹಲ ಮೂಡಿಸಿದೆ.

ಈ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಕಾಮೆಂಟೇಟರ್ ಆಕಾಶ್ ಚೋಪ್ರ ಕುತೂಹಲಕಾರಿ ಹೇಳಿಕೆಯೊಂದನ್ನು ನೀಡಿದ್ದಾರೆ. ಏಷ್ಯಾಕಪ್ ಟೂರ್ನಿಯ ಇತಿಹಾಸವನ್ನು ಉಲ್ಲೇಖಿಸಿರುವ ಆಕಾಶ್ ಚೋಪ್ರ ಈ ಕಾರಣದಿಂದಾಗಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುವುದಿಲ್ಲ ಎನ್ನುವ ಅಭಿಪ್ರಾಯವನ್ನು ಹಂಚಿಕೊಂಡರು.

Asia Cup History: India-Pakistan Final Unlikely, Must-Win for Pakistan vs. Sri Lanka - Akash Chopra

ಭಾರತ ಪಾಕ್ ಈವರೆಗೆ ಮುಖಾಮುಖಿ ಆಗಿಲ್ಲ!!

ಏಷ್ಯಾಕಪ್ ಟೂರ್ನಿಯ ಇತಿಹಾಸವನ್ನು ಉಲ್ಲೇಖಿಸಿರುವ ಆಕಾಶ್ ಚೋಪ್ರ ಈವರೆಗೆ ಈ ಟೂರ್ನಿಯ ಫೈನಲ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿಲ್ಲ ಎನ್ನುವುದನ್ನು ಬೊಟ್ಟುಮಾಡಿದರು. ಎರಡು ಬಲುಷ್ಠ ತಂಡಗಳಾಗಿದ್ದರೂ ಏಷ್ಯಾಕಪ್‌ನ ಚಾಂಪಿಯನ್ ಪಟ್ಟಕ್ಕಾಗಿ ಈ ಎರಡು ತಡಗಳ ನಡುವಿಗೆ ಈವರೆಗೆ ಕಾದಾಟ ನಡೆದಿಲ್ಲ ಎಂದಿದ್ದಾರೆ ಆಕಾಶ್ ಚೋಪ್ರ.

1
10-2023

"ಇಂದಿನ ಪಂದ್ಯವನ್ನು ನಾವು ನೋಡಿದರೆ ಇದು ನೇರವಾದ ಹಣಾಹಣಿ. ಈ ಟೂರ್ನಿಯ ದೊಡ್ಡ ಅಂಶವೆಂದರೆ ಕ್ರೀಡಾಕೂಟದ ಇತಿಹಾಸದ ಪ್ರಕಾರ ನೀವು ನಿಮ್ಮ ಕೈಲಾದಷ್ಟು ಪ್ರಯತ್ನ ನಡೆಸಿದರೂ ಅದು ಭಾರತ-ಪಾಕಿಸ್ತಾನ ಫೈನಲ್‌ಗೆ ಅವಕಾಶ ನೀಡುವುದಿಲ್ಲ ಎಂದು ಹೇಳುತ್ತಿದೆ" ಎಂದು ಹೇಳಿಕೆ ನೀಡಿದ್ದಾರೆ ಆಕಾಶ್ ಚೋಪ್ರ.

ಇದು ಭಾರತ vs ಪಾಕಿಸ್ತಾನ ಟೂರ್ನಮೆಂಟ್ ಎಂದ ಆಕಾಶ್ ಚೋಪ್ರ

ಇನ್ನು ಇದೇ ಸಂದರ್ಭದಲ್ಲಿ ಆಕಾಶ್ ಚೋಪ್ರ ಏಷ್ಯಾಕಪ್ ಟೂರ್ನಿಯನ್ನು ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಟೂರ್ನಿ ಎಂದು ಹೇಳಿಕೆ ನೀಡಿದ್ದಾರೆ. "ನಿಮ್ಮ ತಂಡದಲ್ಲಿ ಇದ್ದ ಮತ್ತೊಂದು ತಂಡ ಯಾವುದು ಎಂದರೆ ನೇಪಾಳ. ಆಡು ತಂಡಗಳ ಪೈಕಿ ಎರಡು ತಂಡಗಳು ಮಾತ್ರ ಹೊರಗುಳಿದು ನಾಲ್ಕು ತಂಡಗಳು ಸೂಪರ್ 4ಗೆ ಪ್ರವೇಶಿಸುತ್ತವೆ ಮತ್ತು ನಂತರ ಫೈನಲ್ ಪಂದ್ಯ ನಡೆಯುತ್ತದೆ. ಹಾಗಾಗಿ ಇದು ಭಾತಯ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಟೂರ್ನಮೆಂಟ್‌ನಂತೆ ಭಾಸವಾಗುತ್ತಿದೆ. ಅಲ್ಲದೆ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಪಂದ್ಯಕ್ಕೆ ಮಾತ್ರವೇ ಮೀಸಲು ದಿನವನ್ನು ನಿಗದಿಪಡಿಸಲಾಗಿದೆ. ಉಳಿದ ಯಾರಿಗೂ ಆ ಅವಕಾಶ ದೊರೆತಿಲ್ಲ" ಎಂದಿದ್ದಾರೆ.

ನಿರ್ಣಾಯಕ ಪಂದ್ಯಕ್ಕೂ ಮುನ್ನ ಪಾಕಿಸ್ತಾನಕ್ಕೆ ಹಿನ್ನಡೆ

ಇನ್ನು ಶ್ರೀಲಂಕಾ ವಿರುದ್ಧದ ಈ ನಿರ್ಣಾಯಕ ಪಂದ್ಯಕ್ಕೆ ಮುನ್ನ ಪಾಕಿಸ್ತಾನ ತಂಡ ಭಾರೀ ಹಿನ್ನಡೆಯನ್ನು ಅನುಭವಿಸಿದೆ. ತಂಡದ ಇಬ್ಬರು ಪ್ರಮುಖ ವೇಗದ ಬೌಲರ್‌ಗಳು ಈ ಪಂದ್ಯಕ್ಕೂ ಮುನ್ನ ಗಾಯಗೊಂಡಿದ್ದಾರೆ. ಹ್ಯಾರಿಸ್ ರೌಫ್ ಹಾಗೂ ನಸೀಮ್ ಶಾ ಗಾಯಕ್ಕೆ ತುತ್ತಾಗಿರುವ ಕಾರಣ ಹೊರಬಿದ್ದಿದ್ದಾರೆ. ಅಲ್ಲದೆ ಭಾರತದ ವಿರುದ್ಧ ಅನುಭವಿಸಿದ ಭಾರೀ ಸೋಲು ಕೂಡ ಪಾಕಿಸ್ತಾನ ತಂಡದ ಆತ್ಮವಿಶ್ವಾಸಕ್ಕೆ ದೊಡ್ಡ ಏಟು ನೀಡಿರುವುದರಲ್ಲಿ ಅನುಮಾನವಿಲ್ಲ.

ಪಾಕಿಸ್ತಾನದ ಆಡುವ ಬಳಗ: ಮೊಹಮ್ಮದ್ ಹ್ಯಾರಿಸ್, ಇಮಾಮ್-ಉಲ್-ಹಕ್, ಬಾಬರ್ ಅಜಮ್ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಸೌದ್ ಶಕೀಲ್, ಇಫ್ತಿಕರ್ ಅಹ್ಮದ್, ಶದಬ್ ಖಾನ್ (ಉಪನಾಯಕ) , ಮೊಹಮ್ಮದ್ ನವಾಜ್, ಶಾಹೀನ್ ಅಫ್ರಿದಿ, ಮೊಹಮ್ಮದ್ ವಾಸಿಮ್ ಜೂನಿಯರ್, ಜಮಾನ್ ಖಾನ್.

ಶ್ರೀಲಂಕಾ ಸಂಭಾವ್ಯ ಆಡುವ ಬಳಗ: ಪಾತುಮ್ ನಿಸ್ಸಾಂಕ, ದಿಮುತ್ ಕರುಣಾರತ್ನ, ಕುಸಲ್ ಪೆರೇರ (ವಿಕೆಟ್ ಕೀಪರ್), ಸದೀರ ಸಮರವಿಕ್ರಮ, ಚರಿತ್ ಅಸಲಂಕ, ಧನಂಜಯ ಡಿ ಸಿಲ್ವ, ದಸುನ್ ಶಾನಕ (ನಾಯಕ), ದುನಿತ್ ವೆಲ್ಲಲಗೆ, ಮಹೀಶ ತೀಕ್ಷಣ, ಕಸುನ್ ರಜಿತ, ಮತೀಶ ಪತಿರಣ

Story first published: Thursday, September 14, 2023, 12:35 [IST]
Other articles published on Sep 14, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+