For Quick Alerts
ALLOW NOTIFICATIONS  
For Daily Alerts
 

ಕೊನೇ ಕ್ಷಣದಲ್ಲಿ ಸಿಕ್ಸ್ ಚಚ್ಚಿ ಭಾರತದೆದುರು ಪಾಕ್ ಗೆಲ್ಲಿಸಿದ್ದರು ಅಫ್ರಿದಿ!

Asia Cup history: When Afridi powered Pak to last over win against India

ಬೆಂಗಳೂರು, ಸೆಪ್ಟೆಂಬರ್ 9: ಅದು ಯಾವುದೇ ಕ್ರೀಡೆ ಆಗಿರ್ಲಿ; ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಿದೆ ಎಂದರೆ ಆ ಸ್ಪರ್ಧೆ ಅದು ಸಾಕಷ್ಟು ಕುತೂಹಲ, ರೋಚಕ ಅನ್ನಿಸಿಯೇ ಅನ್ನಿಸಿಕೊಳ್ಳುತ್ತದೆ. ಅಂಥದ್ದೇ ಒಂದು ಅಪರೂಪದ ಕ್ಷಣಕ್ಕೆ ಅವತ್ತಿನ ಏಷ್ಯಾಕಪ್ ಪಂದ್ಯ ಸಾಕ್ಷಿಯಾಗಿತ್ತು.

ಈ ಪಂದ್ಯ ನಡೆದಿದ್ದು ಬಾಂಗ್ಲಾದೇಶದ ಢಾಕಾದಲ್ಲಿ. ಏಷ್ಯ ಕಪ್ 2014ರ ಆರನೇ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಿತ್ತು. ಭಾರತ ಆ ಪಂದ್ಯವನ್ನು ಇನ್ನೇನು ಗೆದ್ದೇಬಿಟ್ಟಿತು ಅನ್ನುವಾಗಲೇ ಪಾಕ್ ಆಟಗಾರ ಶಾಹೀದ್ ಅಫ್ರಿದಿ ಫಲಿತಾಂಶವನ್ನು ತಿರುಗಿಸಿ ಭಾರತೀಯರನ್ನು ಬೆರಗಾಗಿಸಿದ್ದರು.

ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಭಾರತ 50 ಓವರ್ ಮುಕ್ತಾಯಕ್ಕೆ 8 ವಿಕೆಟ್ ಕಳೆದು 245 ರನ್ ಪೇರಿಸಿ ಎದುರಾಳಿಗೆ 246 ರನ್ ಗುರಿ ನೀಡಿತ್ತು. ಈ ವೇಳೆ ರೋಹಿತ್ ಶರ್ಮಾ 56, ಅಂಬಟಿ ರಾಯುಡು 58, ರವೀಂದ್ರ ಜಡೇಜಾ 52 ರನ್ ಪೇರಿಸಿ ತಂಡದ ಮೊತ್ತ ಏರಿಸಿದ್ದರು.

ಚೇಸಿಂಗ್ ಗೆ ಇಳಿದ ಪಾಕಿಸ್ತಾನ ತಂಡ ಮೊಹಮ್ಮದ್ ಹಫೀಜ್ 75, ಅಹಮ್ಮದ್ ಶೆಹಜಾದ್ 42, ಶೊಹೀಬ್ ಮಕ್ಸೂದ್ 38 ರನ್ ನೆರವಿನೊಂದಿಗೆ 49 ಓವರ್ ಗಳಲ್ಲಿ 8 ವಿಕೆಟ್ ಕಳೆದು 236 ರನ್ ಪೇರಿಸಿತ್ತು. ಪಾಕ್ ಗೆ ಗೆಲ್ಲಲು 6 ಎಸೆತಕ್ಕೆ 10 ರನ್ ನ ಅವಶ್ಯಕತೆಯಿತ್ತು. ಕೊನೆಯ ಓವರ್ ಎಸೆಯಲು ಅಶ್ವಿನ್ ನಿಂತಿದ್ದರು.

ಅಂತಿಮ ಓವರ್ ನ ಮೊದಲ ಎಸೆತಕ್ಕೆ ಪಾಕ್ ಆಟಗಾರ ಸಾಯೀದ್ ಅಜ್ಮಲ್ 0 ರನ್ ನಿಂದ ಬೌಲ್ಡ್ ಆಗಿ ಅಶ್ವಿನ್ ಗೆ ವಿಕೆಟ್ ಒಪ್ಪಿಸಿ ನಡೆದರು. ಭಾರತ ಗೆಲುವಿನ ಅಂಚಿನಲ್ಲಿ ನಿಂತು ಸಂಭ್ರಮಿಸಿತು. ಯಾಕೆಂದರೆ ಪಾಕ್ ಗೆ 5 ಎಸೆತಕ್ಕೆ 10 ರನ್ನಿನ ಅವಶ್ಯಕತೆಯಿತ್ತು. ಆಗಲೇ ಪಾಕ್ ನ 9 ವಿಕೆಟ್ ಉರುಳಿಯಾಗಿತ್ತು.

ಅಶ್ವಿನ್ ಅವರ ಕೊನೆಯ ಓವರ್ ನ ಎರಡನೇ ಎಸೆತದಲ್ಲಿ ಜುನೈದ್ ಖಾನ್ ಸಿಂಗಲ್ ರನ್ ಕದ್ದು ಪಾಕ್ ಗಾಗಿ ಉಳಿದಿದ್ದ ಕೊನೆಯ ಭರವಸೆ ಅಫ್ರಿದಿಗೆ ಆಡಲು ಅವಕಾಶ ಮಾಡಿಕೊಟ್ಟರು. ಅಲ್ಲಿಗೆ ಸ್ಟೋರಿ ಫಿನಿಷ್; ಅಶ್ವಿನ್ ಅವರ 3 ಮತ್ತು 4ನೇ ಎಸೆತವನ್ನು ಅಫ್ರಿದಿ ಸಿಕ್ಸ್ ಲೈನ್ ಗೆ ಅಟ್ಟಿದರು!

50 ಓವರ್ ಗೆ ಇನ್ನೂ ಎರಡು ಎಸೆತ ಇರುವಾಗಲೇ (49.4 ಓವರ್ ನಲ್ಲಿ) ಪಾಕಿಸ್ತಾನ 249 ರನ್ ಪೇರಿಸುವುದರೊಂದಿಗೆ 1ನಿಂದ ವಿಕೆಟ್ ಗೆಲುವನ್ನಾಚರಿಸಿತು. ಅಫ್ರಿದಿ ಈ ಪಂದ್ಯದಲ್ಲಿ 18 ಎಸೆತಕ್ಕೆ 34 ರನ್ ಚಚ್ಚಿ ಪಾಕ್ ಗೆಲುವಿನ ಹೀರೋ ಆಗಿ ಮಿಂಚಿದ್ದರು.

Story first published: Sunday, September 9, 2018, 2:03 [IST]
Other articles published on Sep 9, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+