Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪಾಕಿಸ್ತಾನದ ಮುಂದೆ ನೂರೆಂಟು ವಿಘ್ನ: ಎಲ್ಲವನ್ನೂ ಮೀರಿ ಫೈನಲ್‌ನಲ್ಲಿ ಭಾರತಕ್ಕೆ ಎದುರಾಳಿಯಾಗುತ್ತಾ ಬಾಬರ್ ಪಡೆ?

ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಈಗಾಗಲೇ ಫೈನಲ್‌ಗೆ ಪ್ರವೇಶ ಪಡೆದ ಬಳಿಕ ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳು ಉಳಿದಿರುವ ಒಂದು ಸ್ಥಾನದ ಮೇಲೆ ಕಣ್ಣಿಟ್ಟಿದೆ. ಬಾಂಗ್ಲಾದೇಶ ಈಗಾಗಲೇ ಮೊದಲ ಎರಡು ಪಂದ್ಯಗಳಲ್ಲಿಯೂ ಸೋಲು ಅನುಭವಿಸಿರುವ ಕಾರಣ ಟೂರ್ನಿಯಿಂದ ಈಗಾಗಲೇ ಹಪರಬಿದ್ದಿದ್ದು ಪಾಕ್ ಲಂಕಾ ತಂಡಗಳ ನಡುವಿವೆ ನೇರ ಪೈಪೋಟಿಯಿದೆ.

ಶ್ರೀಲಂಕಾ ಹಾಗೂ ಪಾಕಿಸ್ತಾನ ಎರಡು ತಂಡಗಳಿಗೂ ಫೈನಲ್‌ಗೆ ಪ್ರವೇಶಿಸುವ ಅವಕಾಶ ಸಮವಾಗಿದೆ. ಇಂದಿನ ಪಂದ್ಯದಲ್ಲಿ ಗೆಲುವು ಸಾಧಿಸಿದ ತಂಡ ಫೈನಲ್‌ನಲ್ಲಿ ಭಾರತ ತಂಡವನ್ನು ಎದುರಿಸಲಿದೆ. ಆದರೆ ಇಂಥಾ ಮಹತ್ವದ ಪಂದ್ಯಕ್ಕೂ ಮುನ್ನ ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ತಂಡ ಸವಾಲುಗಳ ಸುಳಿಯಲ್ಲಿ ಸಿಲುಕಿಕೊಂಡಿದೆ. ಹಾಗಿದ್ದರೂ ಈ ಎಲ್ಲಾ ಸವಾಲುಗಳನ್ನು ಮೀರಿ ಬಾಬರ ಅಜಂ ಬಳಗ ಫೈನಲ್‌ಗೆ ಪ್ರವೇಶ ಪಡೆಯಲಿದೆಯಾ ಎನ್ನುವುದು ಈಗಿರುವ ಕುತೂಹಲ.

ಹಾಗಾದರೆ ಪಾಕಿಸ್ತಾನ ತಂಡದ ಮುಂದಿರುವ ಆ ಸವಾಲುಗಳು ಯಾವುದು? ಇಲ್ಲಿದೆ ಮಾಹಿತಿ ಮುಂದೆ ಓದಿ..

Asia Cup: Pakistan face many challenges ahead of most important match against Sri Lanka to reach finals

ಕಾಡುತ್ತಿದೆ ಗಾಯದ ಸಮಸ್ಯೆ

ಪಾಕಿಸ್ತಾನ ತಂಡಕ್ಕೆ ದೊಡ್ಡ ಆಘಾತ ನೀಡಿರುವುದು ತಂಡದ ಆಟಗಾರರ ಗಾಯದ ಸಮಸ್ಯೆ. ಪ್ರಮುಖ ವೇಗಿಗಳಾದ ನಸೀಮ್ ಶಾ ಹಾಗೂ ಹ್ಯಾರಿಸ್ ರೌಫ್ ಇಬ್ಬರು ಕೂಡ ಶ್ರೀಲಂಕಾ ವಿರುದ್ಧದ ಈ ನಿರ್ಣಾಯಕ ಪಂದ್ಯದಲ್ಲಿ ಆಡುತ್ತಿಲ್ಲ. ಹೀಗಾಗಿ ಪಾಕ್ ವೇಗದ ಬೌಲಿಂಗ್ ವಿಭಾಗ ಈ ಪಂದ್ಯದಲ್ಲಿ ತನ್ನ ವರ್ಚಸ್ಸನ್ನು ಕಳೆದುಕೊಂಡಿದೆ. ಈ ಎಲ್ಲಾ ಒತ್ತದ ಶಾಹೀ್ನ ಶಾ ಅಫ್ರಿದಿ ಮೇಲಿದೆ. ಆದರೆ ಶಾಹೀನ್ ಭಾರತದ ವಿರುದ್ಧದ ಪಂದ್ಯದಲ್ಲಿ ಭಾರೀ ಹಿನ್ನಡೆ ಅನುಭವಿಸಿರುವ ಕಾರಣ ಅವರ ಆತ್ಮವಿಶ್ವಾಸಕ್ಕೂ ಏಟುಬಿದ್ದಿರುವುದರಲ್ಲಿ ಅನುಮಾನವಿಲ್ಲ.

ಫಾರ್ಮ್ ಕಳೆದುಕೊಂಡ ಪ್ರಮುಖ ಸ್ಪಿನ್ನರ್

ಕೊಲಂಬೋ ಪಿಚ್ ಸ್ಪಿನ್ನರ್‌ಗಳಿಗೆ ಅಕ್ಷರಶಃ ಸ್ವರ್ಗವಾಗಿ ಪರಿಣಮಿಸಿದೆ. ಭಾರತ ಹಾಗೂ ಶ್ರೀಲಂಕಾ ವಿರುದ್ಧದ ಪಂದ್ಯವೇ ಇದಕ್ಕೆ ಸಾಕ್ಷಿ. ತವರಿನ ಈ ಪಿಚ್‌ನಲ್ಲಿ ಶ್ರೀಲಂಕಾದ ಸ್ಪಿನ್ನರ್‌ಗಳು ಭಾರತದ ಬಲಿಷ್ಠ ಬ್ಯಾಟಿಂಗ್ ವಿಭಾಗವನ್ನೇ ಅಲುಗಾಡಿಸುವಲ್ಲಿ ಶಕ್ತವಾಗಿದ್ದರು. ಆದರೆ ಇಂಥಾ ಪಿಚ್‌ನಲ್ಲಿ ಕಣಕ್ಕಿಳಿಯುವಾಗ ಪಾಕಿಸ್ತಾನ ಭಾರೀ ದೊಡ್ಡ ಕೊರತೆಯನ್ನು ಎದುರಿಸುತ್ತಿದೆ. ತಂಡದ ಪ್ರಮುಖ ಸ್ಪಿನ್ನರ್ ಆಗಿರುವ ಶದಬ್ ಖಾನ್ ಫಾರ್ಮ್ ಕಳೆದುಕೊಂಡಿದ್ದು ತಂಡಕ್ಕೆ ಭಾರೀ ಹಿನ್ನಡೆಯಾಗುವ ಸಾಧ್ಯತೆಯಿದೆ. ಹೀಗಾಗಿ ಪಿಚ್ ಕೂಡ ಪಾಕ್‌ಗೆ ಪೂರಕವಾಗಿಲ್ಲ.

ನೆಟ್‌ರನ್‌ರೇಟ್‌ ಕಳಪೆ: ಮಳೆಗೆ ಆಹುತಿಯಾದರೆ ಕನಸು ಭಗ್ನ

ಇನ್ನು ಈ ಟೂರ್ನಿಯಲ್ಲಿ ಪಾಕಿಸ್ತಾನ ಫೈನಲ್‌ಗೆ ಪ್ರವೇಶ ಪಡೆಯಬೇಕಿದ್ದರೆ ಗೆಲುವು ಹೊರತುಪಡಿಸಿ ಬೇರೆ ದಾರಿಯೇ ಇಲ್ಲ. ಮಳೆಯಿಂದಾಗಿ ಪಂದ್ಯ ರದ್ದಾದರೂ ಅದು ಪಾಕಿಸ್ತಾನದ ಫೈನಲ್ ಪ್ರವೇಶದ ಕನಸನ್ನು ಘಗ್ನಗೊಳಿಸಲಿದೆ. ಅದಕ್ಕೆ ಕಾರಣ ತಂಡ ನೆಟ್‌ರನ್‌ರೇಟ್‌ನಲ್ಲಿ ಭಾರೀ ಹಿಂದಿದೆ. ಭಾರತದ ವಿರುದ್ಧ ಹೀನಾಯವಾಗಿ ಸೋಲು ಅನುಭವಿಸಿದೆ ಪಾಕಿಸ್ತಾನ -1.892 ನೆಟ್‌ ರನ್‌ರೇಟ್ ಹೊಂದಿದೆ. ಆದರೆ ಶ್ರೀಲಂಕಾದ ನೆಟ್‌ರನ್‌ರೇಟ್ ಪಾಕಿಸ್ತಾನ ತಂಡಕ್ಕಿಂತ ಉತ್ತಮವಾಗಿದೆ. ಇದು ಶ್ರೀಲಂಕಾಗೆ ನೆರವಾಗಲಿದೆ.

ಪಾಕ್‌ಗೆ ಮಳೆ ಕೈಕೊಡುವ ಸಾಧ್ಯತೆಯೇ ಹೆಚ್ಚು!!

ಇನ್ನು ಈ ಪಂದ್ಯಕ್ಕೆ ಮೀಸಲು ದಿನ ಇರುವುದಿಲ್ಲ. ಆದರೆ ಹವಾಮಾನ ವರದಿಯ ಪ್ರಕಾರ ಈ ಪಂದ್ಯಕ್ಕೆ ಮಳೆಯಾಗುವ ಸಾಧ್ಯತೆ 90ರಷ್ಟಿದೆ ಎನ್ನಲಾಗಿದೆ. ಹಾಗಾಗಿ ಸದ್ಯ ಹವಾಮಾನ ಪರಿಸ್ಥಿತಿ ಕೂಡ ಪಾಕಿಸ್ತಾನ ತಂಡದ ವಿರುದ್ಧವಾಗಿಯೇ ಇದೆ. ಈಗಾಗಲೇ ತಿಳಿಸಿರುವಂತೆ ನೆಟ್‌ರನ್‌ರೇಟ್‌ನಲ್ಲಿ ಪಾಕ್ ಹಿಂದಿರುವ ಕಾರಣ ಮಳೆಯಿಂದಾಗಿ ಪಂದ್ಯ ರದ್ದಾದರೆ ಎರಡು ತಂಡಗಳು ಕೂಡ ತಲಾ ಒಂದೊಂದು ಅಂಕಗಳನ್ನು ಹಂಚಿಕೊಳ್ಳಳಿದೆ. ಹೀಗಾಗಿ ನೆಟ್‌ರನ್‌ರೇಟ್‌ನಲ್ಲಿ ಮುಂದಿರುವ ಶ್ರೀಲಂಕಾ ನೇರವಾಗಿ ಫೈನಲ್‌ಗೆ ಪ್ರವೇಶ ಪಡೆಯಲಿದೆ.

ಈ ಎಲ್ಲಾ ಸವಾಲುಗಳು ಪಾಕಿಸ್ತಾನ ತಂಡದ ಮುಂದಿದೆ. ಈ ಎಲ್ಲಾ ಸವಾಲುಗಳನ್ನು ಮೀರಿಯೂ ಪಾಕಿಸ್ತಾನ ಈ ಪಂದ್ಯದಲ್ಲಿ ಗೆಲುವು ಸಾಧಿಸಿ ಫೈನಲ್‌ಗೆ ಪ್ರವೇಶ ಪಡೆಯಲಿದೆಯಾ ಎನ್ನುವುದು ಕುತೂಹಲ ಮೂಡಿಸಿದೆ. ಒಂದು ವೇಳೆ ಅದು ಸಾಧ್ಯವಾದರೆ ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ಪ್ರೇಮಿಗಳಿಗೆ ಮತ್ತೊಂದು ರಣರೋಚಕ ಪಂದ್ಯ ದೊರೆಯುವುದರಲ್ಲಿ ಅನುಮಾನವಿಲ್ಲ.

Story first published: Thursday, September 14, 2023, 11:25 [IST]
Other articles published on Sep 14, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+