For Quick Alerts
ALLOW NOTIFICATIONS  
For Daily Alerts
 

ಫೈನಲ್‌ಗೆ ಪ್ರವೇಶಿಸುವ ಅವಕಾಶ ಪಾಕಿಸ್ತಾನಕ್ಕೆ ಇನ್ನೂ ಇದೆಯಾ?

ದುಬೈನ ಅಂಗಳದಲ್ಲಿ ಭಾನುವಾರ ಭಾರತ ಹಾಗೂ ಪಾಕಿಸ್ತಾನ ತಂಡಗಳು ಸೂಪರ್‌ 4 ಹಂತದಲ್ಲಿ ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿರುವ ಭಾರತ 6 ವಿಕೆಟ್‌ ಜಯ ಸಾಧಿಸಿದೆ. ಇನ್ನು ಪಾಕಿಸ್ತಾನ ಈ ಪಂದ್ಯದಲ್ಲಿ ಸೋಲು ಕಂಡಿದ್ದು ನಿರಾಸೆ ಅನುಭವಿಸಿದೆ. ಈ ಗೆಲುವಿನ ಮೂಲಕ ಟೀಮ್ ಇಂಡಿಯಾ ಫೈನಲ್‌ಗೆ ಪ್ರವೇಶಿಸುವ ಆಸೆ ಚಿಗುರಿದೆ. ಈ ಪಂದ್ಯದಲ್ಲಿ ಸೋತಿರೂವ ಪಾಕಿಸ್ತಾನ ಫೈನಲ್‌ಗೆ ಪ್ರವೇಶಿಸುವ ಕನಸು ಕಾಣುತ್ತಿದೆ. ಏನು ಹೇಳುತ್ತೇ ಅಂಕಿ ಅಂಶಗಳ ಲೆಕ್ಕಾಚಾರ ಈ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ.

ಸೂಪರ್‌ 4 ಹಂತದ ಪಂದ್ಯದಲ್ಲಿ ಎಲ್ಲ ತಂಡಗಳಿಗೂ 3 ಪಂದ್ಯಗಳು ಸಿಗುತ್ತಿವೆ. ಈ ವೇಳೆ ಪಾಕ್‌ ಈಗ ಒಂದು ಪಂದ್ಯವನ್ನು ಆಡಿದ್ದು, ಇನ್ನು 2 ಪಂದ್ಯಗಳನ್ನು ಆಡಬೇಕಿದೆ. ಟೀಮ್ ಇಂಡಿಯಾ ವಿರುದ್ಧದ ಸೋಲಿನ ಬಳಿಕ ಪಾಕಿಸ್ತಾನ ತಂಡಕ್ಕೆ ಇನ್ನು ಎರಡು ಪಂದ್ಯಗಳು ಸಿಗಲಿವೆ. ಈ ಪಂದ್ಯದ ಫಲಿತಾಂಶದ ಮೇಲೆ ಆ ತಂಡದ ಮುಂದಿನ ಭವಿಷ್ಯ ನಿರ್ಧಾರವಾಗಲಿದೆ.

Asia Cup Pakistan s path to final after Super 4 loss to India

ಈಗಾಗಲೇ ಸೂಪರ್ 4 ಹಂತದ ಪಂದ್ಯದಲ್ಲಿ ಎಲ್ಲ ತಂಡಗಳು ತಲಾ ಒಂದೊಂದು ಪಂದ್ಯವನ್ನು ಆಡಿವೆ. ಈ ವೇಳೆ ಭಾರತ ತಾನಾಡಿದ ಮೊದಲ ಪಂದ್ಯದಲ್ಲಿ ಜಯ ಸಾಧಿಸಿದ್ದು, ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇನ್ನು ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿರುವ ಬಾಂಗ್ಲಾ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಭಾರತದ ರನ್‌ ರೇಟ್‌ ಉತ್ತಮವಾಗಿದ್ದು, ಅಗ್ರ ಸ್ಥಾನದಲ್ಲಿದೆ. ಶ್ರೀಲಂಕಾ ಹಾಗೂ ಪಾಕ್‌ ತಂಡಗಳು ತಮ್ಮ ಮೊದಲ ಗೆಲುವಿನ ಹುಡುಕಾಟದಲ್ಲಿವೆ.

ಪಾಕ್‌ ಹಾದಿ ಯಾವುದು?

ಟೀಮ್ ಇಂಡಿಯಾ ವಿರುದ್ಧ ಭಾನುವಾರ ಪಾಕಿಸ್ತಾನ ಆಘಾತ ಅನುಭವಿಸಿದರೂ, ಅದರ ನೆಟ್‌ ರನ್‌ ರೇಟ್‌ -0.689 ಆಗಿದೆ. ಈ ರನ್‌ ರೇಟ್‌ ಉತ್ತಮ ಪಡಿಸಿಕೊಳ್ಳಲು ಪಾಕ್‌ ಮುಂದಿನ ಪಂದ್ಯಗಳಲ್ಲಿ ಅಮೋಗ ಪ್ರದರ್ಶನ ನೀಡಿ ಜಯ ಸಾಧಿಸಬೇಕಿದೆ. ಪಾಕ್‌ ತಂಡ ಮುಂದಿನ ಹಂತ ತಲುಪುವ ಹಾದಿ ತುಂಬಾ ಕಷ್ಟಕರವಾಗಿದೆ. ಸೆಪ್ಟೆಂಬರ್ 23 ರಂದು ಶ್ರೀಲಂಕಾ ವಿರುದ್ಧ ಮತ್ತು ಸೆಪ್ಟೆಂಬರ್ 28 ರಂದು ಬಾಂಗ್ಲಾದೇಶ ವಿರುದ್ಧ ಕಾದಾಟ ನಡೆಸಲಿದೆ.

Asia Cup Pakistan s path to final after Super 4 loss to India

ಶ್ರೀಲಂಕಾ ವಿರುದ್ಧ ಪಾಕ್‌ ಭರ್ಜರಿ ಜಯ ಸಾಧಿಸುವ ಕನಸು ಕಾಣುತ್ತಿದೆ. ಮಂಗಳವಾರ ನಡೆಯಲಿರುವ ಪಂದ್ಯದಲ್ಲಿ ಯಾರೇ ಸೋತರೂ ಏಷ್ಯಾ ಕಪ್‌ ಟಿ20 ಟೂರ್ನಿಯಿಂದ ಹೊರಗುಳಿಯಲಿವೆ. ಪಾಕ್‌, ಶ್ರೀಲಂಕಾ ವಿರುದ್ಧ ಜಯ ಸಾಧಿಸಿದ್ದೇ ಆದಲ್ಲಿ ಫೈನಲ್‌ ಪ್ರವೇಶಿಸುವ ಆಸೆ ಜೀವಂತವಾವಗಿರುತ್ತದೆ. ಇನ್ನು ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತತಾನ ಜಯ ಸಾಧಿಸಿದ್ದೇ ಆದಲ್ಲಿ ಫೈನಲ್ ಪ್ರವೇಶಿಸಲು ರನ್‌ ರೇಟ್‌ನತ್ತ ಮುಖ ಮಾಡಬೇಕಾಗುತ್ತದೆ. ಹೀಗಾಗಿ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಪಾಕ್‌ ಭರ್ಜರಿ ಜಯ ಸಾಧಿಸುವ ಅನಿವಾರ್ಯತೆ ಇದೆ. ಮಹತ್ವದ ಪಂದ್ಯದಲ್ಲಿ ಪಾಕ್‌ ಆಟಗಾರರು ಅಮೋಘ ಆಟವನ್ನು ಆಡುವ ಅನಿವಾರ್ಯತೆ ಇದೆ.

Story first published: Monday, September 22, 2025, 18:45 [IST]
Other articles published on Sep 22, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+