
ರನ್ ಸುರಿಮಳೆ ಹರಿಸಿದ ಸೂರ್ಯ
ಹಾಂಕಾಂಗ್ ವಿರುದ್ಧದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅಕ್ಷರಶಃ ರನ್ ಮಳೆ ಹರಿಸಿದ್ದಾರೆ. ಕೊನೆಯ ಏಳು ಓವರ್‌ಗಳಲ್ಲಿ ಹಾಂಕಾಅಂಗ್ ಲೆಕ್ಕಾಚಾರನ್ನೆಲ್ಲಾ ಬುಡಮೇಲು ಮಾಡುವಲ್ಲಿ ಸೂರ್ಯ ಯಶಸ್ವಿಯಾದರು. ಆರು ಸಿಕ್ಸರ್ ಹಾಗೂ ಆರು ಬೌಂಡರಿ ಸಿಡಿಸಿದ ಸೂರ್ಯ ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟಿದ್ದಾರೆ. 13ನೇ ಓವರ್‌ನ ಅಂತ್ಯದಲ್ಲಿ 94 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದ ಭಾರತ ನಂತರದ 42 ಎಸೆತಗಳಲ್ಲಿ ಸೂರ್ಯಕುಮಾರ್ ಅಬ್ಬರದಿಂದಾಗಿ 98 ರನ್‌ಗಳನ್ನು ಸೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.

ಅಂತಿಮ ಓವರ್‌ನಲ್ಲಿ ಸೂರ್ಯ ರೌದ್ರಾವತಾರ
ಇನ್ನು ಭಾರತದ ಬ್ಯಾಟಿಂಗ್ ಇನ್ನಿಂಗ್ಸ್‌ನ ಅಂತಿಮ ಓವರ್‌ನಲ್ಲಿ ಸೂರ್ಯಕುಮಾರ್ ಯಾದವ್ ಮತ್ತಷ್ಟು ರೌದ್ರಾವತಾರವನ್ನು ತಾಳಿದರು. ಹರೂನ್ ಅರ್ಶದ್ ಅವರ ಅಂತಿಮ ಓವರ್‌ನಲ್ಲಿ ನಾಲ್ಕು ಸಿಕ್ಸರ್ ಸಿಡಿಸಿದ ಸೂರ್ಯ ಅಂತಿಮವಾಗಿ 68 ರನ್‌ಗಳನ್ನು ಗಳಿಸಿ ಅಜೇಯವಾಗುಳಿದರು. ಸೂರ್ಯಕುಮಾರ್ ಯಾದವ್ ಅವರ ಈ ಬ್ಯಾಟಿಂಗ್ ಪ್ರದರ್ಶನವೇ ಎರಡು ತಂಡಗಳ ವ್ಯತ್ಯಾಸಕ್ಕೆ ಕಾರಣವಾಯಿತು. ಅಂತಿಮವಾಗಿ ಭಾರತ ತಂಡ ಈ ಪಂದ್ಯದಲ್ಲಿ ಭರ್ಜರಿ 40 ರನ್‌ಗಳ ಅಂತರದಿಂದ ಗೆಲುವು ಸಾಧಿಸಿತು.

ಪದಗಳಿಂದ ವರ್ಣಿಸಲು ಸಾಧ್ಯವಿಲ್ಲ
ಪ್ರಾಮಾಣಿಕವಾಗಿ ಹೇಳುತ್ತಿದ್ದೇನೆ, ಸೂರ್ಯಕುಮಾರ್ ಆಡಿದ ಇಂದಿನ ಇನ್ನಿಂಗ್ಸ್‌ಅನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಅವರು ಪ್ರತಿ ಬಾರಿಯೂ ಈ ರೀರಿಯ ಭಿನ್ನವಾದ ಹೊಡೆತಗಳನ್ನು ಬಾರಿಸಿಕೊಂಡು ಬಂದಿದ್ದಾರೆ. ಅವರಲ್ಲಿರುವ ಆತ್ಮವಿಶ್ವಾಸದ ಕಾರಣದಿಂದಾಗಿಯೇ ಅವರಿಗೆ ಅಂಥಾ ಹೊಡೆತಗಳನ್ನು ಸಲೀಸಾಗಿ ಬಾರಿಸಲು ಸಾಧ್ಯವಾಗುತ್ತದೆ. ಇಂದು ಬಾರಿಸಿದ ಕೆಲ ಹೊಡೆತಗಳು ಪಠ್ಯದಿಂದ ಬಂದವುಗಳಲ್ಲ. ಹೊಡೆತಗಳ ಆಯ್ಕೆಗಳು ಕೂಡ ನಿರ್ಣಾಯಕ. ಅವರು ಮೈದಾನದ ಎಲ್ಲಾ ಭಾಗಕ್ಕೂ ಚೆಂಡನ್ನು ಅಟ್ಟಬಲ್ಲರು ಎಂಬುದು ನಮಗೆ ತಿಳಿದಿದೆ. ಇಂದು ಅವರು ಮಾಡಿದ್ದು ಕೂಡ ಅದನ್ನೇ" ಎಂದು ಸೂರ್ಯ ಕುಮಾರ್ ಯಾದವ್ ಬಗ್ಗೆ ಭಾರೀ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ ರೋಹಿತ್ ಶರ್ಮಾ.

ಭಾನುವಾರ ಮತ್ತೆ ಮುಖಾಮುಖಿಯಾಗಲಿದೆಯಾ ಪಾಕಿಸ್ತಾನ
ಇನ್ನು ಭಾರತ ಹಾಂಕಾಂಗ್ ವಿರುದ್ಧದ ಈ ಗೆಲುವಿನೊಂದಿಗೆ ಭಾರತ ಸೂಪರ್ 4 ಹಂತಕ್ಕೇರುವಲ್ಲಿ ಯಶಸ್ವಿಯಾಗಿದೆ. ಭಾರತದ ಮುಂದಿನ ಪಂದ್ಯ ಭಾನುವಾರ ನಡೆಯಲಿದ್ದು ಹಾಂಕಾಂಗ್ ಹಾಗೂ ಪಾಕಿಸ್ತಾನದ ವಿರುದ್ಧದ ನಡೆಯಲಿರುವ ಪಂದ್ಯದಲ್ಲಿ ಗೆಲ್ಲುವ ತಂಡ ಭಾನುವಾರ ಭಾರತಕ್ಕೆ ಮುಖಾಮುಖಿಯಾಗಲಿದೆ. ಇನ್ನು ಮತ್ತೊಂದೆಡೆ ಮೊದಲ ಪಂದ್ಯದಲ್ಲಿ ಭಾರತದ ವಿರುದ್ಧ ಸೋಲು ಅನುಭವಿಸಿರುವ ಪಾಕಿಸ್ತಾನ ತಂಡ ಸೂಪರ್ 4 ಹಂತಕ್ಕೇರಬೇಕಾದರೆ ಹಾಂಕಾಂಗ್ ವಿರುದ್ಧದ ಪಂದ್ಯವನ್ನು ಗೆಲ್ಲಲೇ ಬೇಕಾಗಿದೆ. ಹಾಂಕಾಂಗ್ ಪಾಕಿಸ್ತಾನಕ್ಕೆ ತೀವ್ರ ಪೈಪೋಟಿ ನೀಡುವ ಲಕ್ಷಣಗಳು ಕಾಣಿಸುತ್ತಿದ್ದು ಭಾನುವಾರ ಯಾವ ತಂಡ ಭಾರತಕ್ಕೆ ಎದುರಾಳಿಯಾಗಿರಲಿದೆ ಎಂಬುದು ಕೂಡ ಕುತೂಹಲ ಮೂಡಿಸಿದೆ.


Click it and Unblock the Notifications












