Asia Cup T20 IND vs PAK: ಭಾರತಕ್ಕೆ 128 ರನ್‌ಗಳ ಗುರಿಯನ್ನು ನೀಡಿದ ಪಾಕ್: ಕುಲ್‌ದೀಪ್ ಆರ್ಭಟ
ಟೀಮ್ ಇಂಡಿಯಾದ ಸ್ಟಾರ್ ಬೌಲರ್‌ಗಳ ಬಿಗುವಿನ ದಾಳಿಯ ಎದುರು ರನ್ ಕಲೆ ಹಾಕುವಲ್ಲಿ ಪಾಕ್ ಬ್ಯಾಟರ್‌ಗಳು ಪರದಾಟ ನಡೆಸಿದರು. ಸ್ಪಿನ್ ಬೌಲರ್‌ಗಳಾದ ಕುಲ್‌ದೀಪ್ ಯಾದವ್ ಹಾಗೂ ಅಕ್ಷರ್ ಪಟೇಲ್ ಬಿಗುವಿನ ದಾಳಿಯ ನೆರವಿನಿಂದ ಪಾಕಿಸ್ತಾನ ತಂಡದ ಸಾಧಾರಣ ಮೊತ್ತವನ್ನು ಕಲೆ ಹಾಕುವಲ್ಲಿ ಮಾತ್ರ ಯಶಸ್ವಿಯಾಗಿದೆ.
ಟಾಸ್ ಗೆದ್ದ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರವನ್ನು ತೆಗೆದುಕೊಂಡಿತು. ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಲ್ಲಿ ಸ್ಟಾರ್ ಆರಂಭಿಕ ಆಟಗಾರರು ವಿಫಲರಾದರು. ಆರಂಭಿಕ ಸೈಮ್ ಅಯುಬ್ ಮೊದಲ ಎಸೆತದಲ್ಲಿ ಹಾರ್ದಿಕ್ ಪಾಂಡ್ಯ ತೋಡಿದ ಖೆಡ್ಡಾಗೆ ಬಲಿಯಾದರು. ಇವರು ಹಾರ್ದಿಕ್ ಎಸೆದ ಗಂಟೆಗೆ 120 ಕಿಲೋ ಮೀಟರ್ ವೇಗದ ಚೆಂಡನ್ನು ಸ್ಕ್ವೇರ್ ಡ್ರೈವ್ ಮಾಡಿ ರನ್‌ಗಳಿಸಲು ಯತ್ನಿಸಿದ್ದಾಗ, ಅಲ್ಲಿ ನಿಂತಿದ್ದ ಜಸ್ಪ್ರಿತ್ ಬುಮ್ರಾ ಅವರ ಹಿಡಿದ ಉತ್ತಮ ಕ್ಯಾಚ್‌ಗೆ ಬಲಿಯಾದರು.

ಮಧ್ಯಮ ಕ್ರಮಾಂಕದಲ್ಲಿ ಮೊಹಮ್ಮದ್ ಹ್ಯಾರೀಸ್ ಅವರು ಸಹ ಬೇಗನೆ ಬಂದು ಹೋಗುವ ಸಂಪ್ರದಾಯವನ್ನು ಮುಗಿಸಿದರು. ಹ್ಯಾರೀಸ್, ಬುಮ್ರಾ ಎಸೆತದಲ್ಲಿ ಡೀಪ್ ಬ್ಯಾಕ್‌ವರ್ಡ್ ಸ್ಕ್ವೇರ್ ಲೆಗ್‌ನಲ್ಲಿ ಹಾರ್ದಿಕ್ ಪಾಂಡ್ಯ ಹಿಡಿದ ಉತ್ತಮ ಕ್ಯಾಚ್‌ಗೆ ಬಲಿಯಾದರು. ಪರಿಣಾಮ ಪಾಕಿಸ್ತಾನ ಪವರ್ ಪ್ಲೇನಲ್ಲಿ 2 ವಿಕೆಟ್ ಕಳೆದುಕೊಂಡು 42 ರನ್ ಸೇರಿಸಿತು.
ಮೂರನೇ ವಿಕೆಟ್‌ಗೆ ಫಖರ್ ಜಮಾನ್ ಹಾಗೂ ಶಹಿಬ್ಜಾದ್ ಫರ್ಹನ್ ಜೋಡಿ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ 38 ಎಸೆತಗಳಲ್ಲಿ 39 ರನ್ ಸೇರಿಸಿ ಟೀಮ್ ಇಂಡಿಯಾದ ಬೌಲರ್‌ಗಳಿಗೆ ಕೊಂಚ ಕಾಡಿದರು. ಫಖರ್ ಜಮಾನ್ 3 ಬೌಂಡರಿ ನೆರವಿನಿಂದ 17 ರನ್ ಬಾರಿಸಿದ್ದಾಗ, ಅಕ್ಷರ್ ಪಟೇಲ್ ಸ್ಪಿನ್ ಪಿರ್ಕಿಗೆ ಬಲಿಯಾದರು.
ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಅಘಾ ಸಹ ಒತ್ತಡವನ್ನು ಮೆಟ್ಟಿನಿಂತು ರನ್ ಬಾರಿಸುವಲ್ಲಿ ವಿಫಲರಾದರು. ಇವರು ಅಕ್ಷರ್ ಪಟೇಲ್ ತೋಡಿದ ಖೆಡ್ಡಾಗೆ ಬಲಿಯಾದರು. ಮಧ್ಯಮ ಕ್ರಮಾಂಕದಲ್ಲಿ ಹಸನ್ ನವಾಜ್ ಕುಲ್‌ದೀಪ್ ಯಾದವ್ ಎಸೆತದಲ್ಲಿ ಬಿಗ್ ಹಿಟ್ ಬಾರಿಸುವಲ್ಲಿ ವಿಫಲರಾದರು.
ಕುಲ್‌ದೀಪ್ ಫೈರ್
ಕುಲ್‌ದೀಪ್ ಯಾದವ್ ಇನಿಂಗ್ಸ್‌ನ 13ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಹಸನ್ ನವಾಜ್‌ಗೆ ಖೆಡ್ಡಾ ತೋಡಿದ ಕುಲ್‌ದೀಪ್, ನಂತರದ ಎಸೆತದಲ್ಲಿ ಮೊಹಮ್ಮದ್ ನವಾಜ್ ಅವರಿಗೆ ಪೆವೆಲಿಯನ್ ಹಾದಿ ತೋರಿಸಿದರು. ಪರಿಣಾಮ ಬ್ಯಾಕ್ ಟು ಬ್ಯಾಕ್ ವಿಕೆಟ್ ಪಡೆದು ಪಾಕ್ ಬ್ಯಾಟಿಂಗ್ ವಿಭಾಗಕ್ಕೆ ಪೆಟ್ಟು ನೀಡಿದರು.
ಫರ್ಹಾನ್ ಆಸರೆ
ಪಾಕಿಸ್ತಾನ ತಂಡದ ಪರ ಆರಂಭಿಕ ಸಾಹಿಬ್‌ಜಾದಾ ಫರ್ಹಾನ್ ಭರ್ಜರಿ ಬ್ಯಾಟಿಂಗ್ ನಡೆಸಿ ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ಸಫಲರಾದರು. ಇವರು 44 ಎಸೆತಗಳಲ್ಲಿ 1 ಬೌಂಡರಿ, 3 ಸಿಕ್ಸರ್ ಸಹಾಯದಿಂದ 40 ರನ್ ಬಾರಿಸಿ ಔಟ್ ಆದರು. ಇವರು ಕುಲ್‌ದೀಪ್ ಯಾದವ್ ಅವರ ಎಸೆತವನ್ನು ಬಿಗ್ ಹಿಟ್ ಬಾರಿಸುವಲ್ಲಿ ವಿಫಲರಾಗಿ ಹಾರ್ದಿಕ್ ಪಾಂಡ್ಯ ಹಿಡಿದ ಉತ್ತಮ ಕ್ಯಾಚ್‌ಗೆ ಬಲಿಯಾದರು. ಪಾಕಿಸ್ತಾನ ತಂಡದ ಪರ ಶಾಹೀನ್ ಶಾ ಆಫ್ರಿದಿ ಅಬ್ಬರಿಸಿದರು. ಇವರು 16 ಎಸೆತಗಳಲ್ಲಿ 4 ಸಿಕ್ಸರ್ ಸಹಾಯದಿಂದ ಅಜೇಯ 33 ರನ್ ಬಾರಿಸಿ ಮಿಂಚಿದರು. ಅಂತಿಮವಾಗಿ ಪಾಕ್ 20 ಓವರ್‌ಗಳಲ್ಲಿ 127 ರನ್ ಸೇರಿಸಿದೆ.
ಟೀಮ್ ಇಂಡಿಯಾದ ಪರ ಕುಲ್‌ದೀಪ್ ಯಾದವ್ 18 ರನ್ ನೀಡಿ ಮೂರು ವಿಕೆಟ್ ಕಬಳಿಸಿದರೆ, ಅಕ್ಷರ್ ಪಟೇಲ್ 18 ರನ್ ನೀಡಿ 2 ವಿಕೆಟ್ ಪಡೆದರು. ಉಳಿದಂತೆ ವೇಗಿ ಜಸ್ಪ್ರಿತ್ ಬುಮ್ರಾ 28 ರನ್ ನೀಡಿ 2 ವಿಕೆಟ್ ಉರುಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications