Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Asia Cup T20: ಸೂಪರ್‌ 4ಗೆ ಅರ್ಹತೆ ಪಡೆದ ಪಾಕ್‌: ಸೆ.21 ರಂದು ಭಾರತದ ವಿರುದ್ಧ ಕಾದಾಟ

ದುಬೈ: ಭರವಸೆ ಆಟಗಾರ ಫಖಾರ್ ಜಮಾನ್‌ (50 ರನ್) ಬಾರಿಸಿದ ಅರ್ಧಶತಕ ಹಾಗೂ ಶಾಹೀನ್ ಶಾ ಅಫ್ರಿದಿ (ಅಜೇಯ 29, 16ಕ್ಕೆ 2) ಇವರ ಭರ್ಜರಿ ಆಟದ ನೆರವಿನಿಂದ ಪಾಕಿಸ್ತಾನ ಏಷ್ಯಾ ಕಪ್ ಟಿ20 ಟೂರ್ನಿಯಲ್ಲಿ 41 ರನ್‌ಗಳಿಂದ ಯುಎಇ ತಂಡವನ್ನು ಮಣಿಸಿ ಸೂಪರ್‌ ಫೋರ್ ಹಂತಕ್ಕೆ ಅರ್ಹತೆ ಪಡೆದಿದೆ.

ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡದ ಆರಂಭ ಕಳಪೆಯಾಗಿತ್ತು. ಆರಂಭಿಕರಾದ ಸಾಹಿಬ್‌ಜಾದಾ ಫರ್ಹಾನ್ ಹಾಗೂ ಸೈಮ್ ಅಯೂಬ್ ದೊಡ್ಡ ಇನಿಂಗ್ಸ್‌ ಕಟ್ಟುವಲ್ಲಿ ವಿಫಲರಾದರು. ಮೂರನೇ ವಿಕೆಟ್‌ಗೆ ಫಖರ್ ಜಮಾನ್‌ ಹಾಗೂ ಸಲ್ಮಾನ್‌ ಅಲಿ ಆಘಾ ಜೋಡಿ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ 51 ಎಸೆತಗಳಲ್ಲಿ 61 ರನ್‌ ಸೇರಿಸಿತು. ಪರಿಣಾಮ ಪಾಕಿಸ್ತಾನ ಪವರ್ ಪ್ಲೇನಲ್ಲಿ 2 ವಿಕೆಟ್‌ಗೆ 39 ರನ್‌ ಸೇರಿಸಿತ್ತು. ಸಲ್ಮಾನ್‌ ಅಲಿ ಆಘಾ 2 ಬೌಂಡರಿ ನೆರವಿನಿಂದ 20 ರನ್‌ ಬಾರಿಸಿದರು.

Asia Cup T20 Pakistan Qualifies for Super Four to Face India on Sept 21

ಮೊಹಮ್ಮದ್‌ ಹ್ಯಾರಿಸ್‌ 18 ರನ್‌ ಬಾರಿಸಿದರೆ, ಕೆಳ ಕ್ರಮಾಂಕದಲ್ಲಿ ಶಾಹೀನ್‌ ಶಾ ಆಫ್ರಿದಿ 3 ಬೌಂಡರಿ, 2 ಸಿಕ್ಸರ್ ಸಹಾಯದಿಂದ ಅಜೇಯ 29 ರನ್‌ ಸಿಡಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಮಧ್ಯಮ ಕ್ರಮಾಂಕದಲ್ಲಿ ಫಖಾರ್‌ ಜಮನ್‌ 2 ಬೌಂಡರಿ, 3 ಸಿಕ್ಸರ್‌ ಸಹಾಯದಿಂದ 50 ರನ್‌ ಬಾರಿಸಿ ಔಟ್ ಆದರು. ಪರಿಣಾಮ ಪಾಕಿಸ್ತಾನ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 146 ರನ್‌ ಕಲೆ ಹಾಕಿತು. ಯುಎಇ ಪರ ಜುನೈದ್ ಸಿದ್ದೀಕ್ 18 ರನ್‌ ನೀಡಿ 4 ವಿಕೆಟ್‌ ಪಡೆದರೆ, ಸಿಮ್ರಂಜೀತ್ ಸಿಂಗ್ 3 ವಿಕೆಟ್‌ ಉರುಳಿಸಿದರು.

ಯುಎಇ ಗುರಿಯನ್ನು ಬೆನ್ನಟ್ಟಿದಾಗ ಆರಂಭಿಕರು ಉತ್ತಮ ಆರಂಭವನ್ನು ನೀಡುವಲ್ಲಿ ವಿಫಲರಾದರು. ಅಲಿಶನ್ ಶರಾಫು (12), ಮುಹಮ್ಮದ್ ವಸೀಂ (14) ರನ್‌ ಕಲೆ ಹಾಕುವ ಜವಾಬ್ದಾರಿಯನ್ನು ಮರೆತರು. ಮೂರನೇ ವಿಕೆಟ್‌ಗೆ ರಾಹುಲ್ ಚೋಪ್ರಾ ಹಾಗೂ ಧ್ರುವ ಪರಾಶರ ಜೋಡಿ 48 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿದರು. ರಾಹುಲ್‌ ಚೋಪ್ರಾ 1 ಬೌಂಡರಿ, 1 ಸಿಕ್ಸರ್ ಸಹಾಯದಿಂದ 35 ರನ್‌ ಸಿಡಿಸಿದರು. ಧ್ರುವ ಪರಾಶರ 20 ರನ್‌ ಬಾರಿಸಿದರು. ಪಾಕ್‌ ಪರ ಶಾಹೀನ್ ಶಾ ಆಫ್ರಿದಿ, ಹ್ಯಾರಿಸ್ ರೌಫ್‌, ಅಬ್ರಾರ್ ಅಹ್ಮದ್‌ ತಲಾ 2 ವಿಕೆಟ್‌ ಕಬಳಿಸಿದರು.

Asia Cup T20 Pakistan Qualifies for Super Four to Face India on Sept 21

ಭಾನುವಾರ ಮತ್ತೊಮ್ಮೆ ಕಾದಾಟ

"ಎ" ಗುಂಪಿನ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಸೂಪರ್ ಫೋರ್‌ ಹಂತಕ್ಕೆ ಪ್ರವೇಶ ಪಡೆದಿವೆ. ಇನ್ನು ಸೂಪರ್ ಫೋರ್‌ನಲ್ಲಿ ಉಭಯ ತಂಡಗಳು ಸೆಪ್ಟಂಬರ್‌ 21 ರಂದು ಮತ್ತೊಮ್ಮೆ ಕಾದಾಟ ನಡೆಸಲಿವೆ. ಈ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಭಾರತ ತನ್ನ ಲೀಗ್‌ ಹಂತದ ಕೊನೆಯ ಪಂದ್ಯವನ್ನು ಸೆ.19 ರಂದು ಓಮನ್‌ ವಿರುದ್ಧ ಆಡಲಿದೆ.

Story first published: Thursday, September 18, 2025, 1:06 [IST]
Other articles published on Sep 18, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+