ಬಹು ನಿರೀಕ್ಷಿತ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ವೇಳಾಪಟ್ಟಿ ಬಿಡುಗಡೆ ಆಗಿದೆ. ವಿಶ್ವದ ಚಿತ್ತವನ್ನು ಕದ್ದಿರುವ ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯಕ್ಕೆ ಸೆಪ್ಟೆಂಬರ್ 14 ಸಾಕ್ಷಿಯಾಗಲಿದೆ. ಈ ಬಾರಿಯ ಏಷ್ಯಾ ಕಪ್ ಟೂರ್ನಿಯನ್ನು ಟಿ20 ಫಾರ್ಮೆಟ್‌ನಲ್ಲಿ ಆಡಿಸಲಾಗುತ್ತದೆ. ಈ ಟೂರ್ನಿಯ ಫೈನಲ್ ಪಂದ್ಯ ಸೆಪ್ಟೆಂಬರ್ 28 ರಂದು ನಡೆಯಲಿದೆ. ಏಷ್ಯಾ ಕಪ್ ಕ್ರಿಕೆಟ್ ಮಂಡಳಿ ಶನಿವಾರ ನಡೆಸಿದ ಸಭೆಯಲ್ಲಿ ಈ ಮಹತ್ವದ ತೀರ್ಮಾನವನ್ನು ಕೈಗೊಳ್ಳಲಾಗಿದೆ.
ಈ ಬಾರಿ ಏಷ್ಯಾ ಕಪ್‌ನಲ್ಲಿ ಒಟ್ಟು 19 ಪಂದ್ಯಗಳು ನಡೆಯಲಿವೆ. ಈ ಮೆಗಾ ಟೂರ್ನಿಯಲ್ಲಿ ಎಂಟು ತಂಡಗಳು ಭಾಗವಹಿಸುತ್ತಿವೆ. ಈ ತಂಡಳನ್ನು 2 ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಭಾರತ ಹಾಗೂ ಪಾಕಿಸ್ತಾನ ತಂಡಗಳು ಒಂದೇ ಗುಂಪಿನಲ್ಲಿ ಸ್ಥಾನ ಪಡೆದಿವೆ. ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ತಂಡಗಳು ಮತ್ತೊಂದು ಗುಂಪಿನಲ್ಲಿ ಸ್ಥಾನ ಪಡೆದಿವೆ. ಭಾರತದ ಆತಿಥ್ಯದಲ್ಲಿ ನಡೆಯಲಿರುವ ಈ ಟೂರ್ನಿಯನ್ನು ಅಬುದಾಬಿ, ದುಬೈನಲ್ಲಿ ಆಡಿಸಲಾಗುತ್ತದೆ. ಈ ಬಾರಿಯ ಟೂರ್ನಿ ತಟಸ್ಥ ಸ್ಥಳದಲ್ಲಿ ನಡೆಸಲಾಗುತ್ತಿದೆ.

ಭಾರತ ಪಾಕಿಸ್ತಾನ, ಯುಎಇ ಹಾಗೂ ಒಮನ್ ತಂಡಗಳ ಗ್ರುಪ್ 1ರಲ್ಲಿ ಸ್ಥಾನ ಪಡೆದಿವೆ. ಇನ್ನು ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಹಾಗೂ ಹಾಂಗ್ ಕಾಂಗ್ ತಂಡಗಳ ಗ್ರುಪ್ 2ರಲ್ಲಿ ಸ್ಥಾನ ಪಡೆದಿವೆ. ಗುಂಪು ವಿಭಾಗದಲ್ಲಿ ಅಗ್ರ 2 ಸ್ಥಾನ ಪಡೆದ ತಂಡಗಳ ಸೂಪರ್ ಫೋರ್ ಹಂತದಲ್ಲಿ ಕಾದಾಟ ನಡೆಸಲಿವೆ.
ಸೆ. 10, ಯುಎಇ ವಿರುದ್ಧ
ಸೆ. 12, ಪಾಕಿಸ್ತಾನ ವಿರುದ್ಧ
ಸೆ. 19, ಓಮನ್ ವಿರುದ್ಧ
ಸೆ. 9 ಅಫ್ಘಾನಿಸ್ತಾನ vs ಹಾಂಗ್ ಕಾಂಗ್
ಸೆ. 11 ಬಾಂಗ್ಲಾದೇಶ vs ಹಾಂಗ್ ಕಾಂಗ್
ಸೆ. 12 ಪಾಕಿಸ್ತಾನ vs ಓಮನ್
ಸೆ. 13 ಬಾಂಗ್ಲಾದೇಶ vs ಶ್ರೀಲಂಕಾ
ಸೆ. 15 ಶ್ರೀಲಂಕಾ vs ಹಾಂಗ್ ಕಾಂಗ್
ಸೆ. 15 ಯುಎಇ vs ಓಮನ್
ಸೆ. 16 ಬಾಂಗ್ಲಾದೇಶvs ಅಫ್ಘಾನಿಸ್ತಾನ
ಸೆ. 17 ಪಾಕಿಸ್ತಾನ vs ಯುಎಇ
ಸೆ. 18 ಶ್ರೀಲಂಕಾ vs ಅಫ್ಘಾನಿಸ್ತಾನ
ಸೆ. 20, ಗ್ರುಪ್ ಬಿ ಕ್ವಾಲಿಫೈಯರ್ 1 vs ಗ್ರುಪ್ ಬಿ ಕ್ವಾಲಿಫೈಯರ್ 2
ಸೆ. 21, ಗ್ರುಪ್ ಎ ಕ್ವಾಲಿಫೈಯರ್ 1 vs ಗ್ರುಪ್ ಎ ಕ್ವಾಲಿಫೈಯರ್ 2
ಸೆ. 22, ವಿಶ್ರಾಂತಿ
ಸೆ. 23, ಗ್ರುಪ್ ಎ ಕ್ವಾಲಿಫೈಯರ್ 1 vs ಗ್ರುಪ್ ಬಿ ಕ್ವಾಲಿಫೈಯರ್ 2
ಸೆ. 24, ಗ್ರುಪ್ ಬಿ ಕ್ವಾಲಿಫೈಯರ್ 1 vs ಗ್ರುಪ್ ಎ ಕ್ವಾಲಿಫೈಯರ್ 2
ಸೆ. 25, ಗ್ರುಪ್ ಎ ಕ್ವಾಲಿಫೈಯರ್ 2 vs ಗ್ರುಪ್ ಬಿ ಕ್ವಾಲಿಫೈಯರ್ 2
ಸೆ. 26, ಗ್ರುಪ್ ಎ ಕ್ವಾಲಿಫೈಯರ್ 1 vs ಗ್ರುಪ್ ಬಿ ಕ್ವಾಲಿಫೈಯರ್ 1
ಸೆ. 27, ವಿಶ್ರಾಂತಿ
ಸೆ. 28, ಫೈನಲ್ ಪಂದ್ಯ