Asia Cup T20: ಶುಭಮನ್ ಗಿಲ್‌ಗೆ ಟೀಮ್ ಇಂಡಿಯಾದ ಉಪನಾಯಕನ ಸ್ಥಾನ ಸಿಗುತ್ತಾ?
ಇನ್ನೇನು ಕೆಲವೇ ದಿನಗಳಲ್ಲಿ ಏಷ್ಯಾ ಕಪ್ ಟಿ20 ಟೂರ್ನಿಗೆ ಭಾರತ ತಂಡವನ್ನು ಪ್ರಕಟಿಸುವ ಸಾಧ್ಯತೆ ಇದೆ. ಈ ವೇಳೆ ಬಿಸಿಸಿಐ ಆಯ್ಕೆ ಸಮಿತಿಯ ಮುಂದೆ ದೊಡ್ಡ ಪ್ರಶ್ನೆಯೊಂದು ಎದುರಾಗಿದೆ. ಈ ಪ್ರಶ್ನೆ ನಿಜಕ್ಕೂ ಆಯ್ಕೆ ಸಮಿತಿಯ ನಿದ್ದೆ ಗೆಡಿಸಿದೆ. ಏಷ್ಯಾ ಕಪ್ ಟಿ20 ಟೂರ್ನಿಯ ವೇಳೆ ಸೂರ್ಯಕುಮಾರ್ ಯಾದವ್ ಫಿಟ್ ಆಗಿದ್ದರೆ ಅವರು ತಂಡವನ್ನು ಮುನ್ನಡೆಸುವುದು ಫಿಕ್ಸ್ ಎನ್ನಲಾಗಿದೆ. ಆದರೆ ತಂಡದ ಉಪನಾಯಕ ಯಾರು ಆಗ್ತಾರೆ ಎಂಬ ಪ್ರಶ್ನೆಗಳು ಉದ್ಭವಿಸಿವೆ. ಈ ಪ್ರಶ್ನೆ ನಿಜಕ್ಕೂ ಬಿಸಿಸಿಐ ನಿದ್ದೆ ಗೆಡಿಸಿದೆ.
ಟೆಸ್ಟ್ ಕ್ರಿಕೆಟ್ ರೋಹಿತ್ ಶರ್ಮಾ ಅವರು ನಿವೃತ್ತಿ ಘೋಷಿಸಿದ ಬಳಿಕ ತಂಡವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಟೀಮ್ ಇಂಡಿಯಾ ಮುನ್ನಡೆಸಿದ್ದ ಶುಭಮನ್ ಗಿಲ್ ಇಂಗ್ಲೆಂಡ್ ಪ್ರವಾಸದಲ್ಲಿ ಸ್ಥಿರ ಪ್ರದರ್ಶನ ನೀಡಿದ್ದರು. ಇವರು ಈ ವೇಳೆ ಸೊಗಸಾದ ಪ್ರದರ್ಶನ ನೀಡಿ ತಮಗೆ ಆಯ್ಕೆ ಸಮಿತಿ ನೀಡಿದ್ದ ನಾಯಕತ್ವವನ್ನು ಸಮರ್ಥಿಸಿಕೊಂಡಿದ್ದರು. ಇನ್ನು ಇವರ ಮುಂದಾಳತ್ವದಲ್ಲಿ ಟೀಮ್ ಇಂಡಿಯಾ ಇಂಗ್ಲೆಂಡ್‌ನಲ್ಲಿ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-2 ಸಮಬಲ ಸಾಧಿಸಿದೆ.

ಟೀಮ್ ಇಂಡಿಯಾ ಟಿ20 ಕ್ರಿಕೆಟ್‌ನಿಂದ ವರ್ಷಗಳ ಕಾಲ ದೂರ ಉಳಿದಿದ್ದ ಶುಭಮನ್ ಗಿಲ್, ಈಗ ಮತ್ತೆ ತಂಡಕ್ಕೆ ಕಂ ಬ್ಯಾಕ್ ಮಾಡುವ ಕನಸಿನಲ್ಲಿದ್ದಾರೆ. ಟೀಮ್ ಇಂಡಿಯಾದ ಪರ ಈಗಾಗಲೇ ಸೀಮಿತ ಓವರ್‌ಗಳ ಪಂದ್ಯಗಳಲ್ಲಿ ಉಪನಾಯಕರಾಗಿ ಕಾಣಿಸಿಕೊಂಡಿದ್ದ ಶುಭಮನ್ ಗಿಲ್ ಈಗ ಮತ್ತೆ ತಂಡಕ್ಕೆ ಕಂ ಬ್ಯಾಕ್ ಮಾಡುವ ಕನಸಿನಲಿದ್ದಾರೆ. ಇವರು ಏಷ್ಯಾ ಕಪ್ ತಂಡದಲ್ಲಿ ಸ್ಥಾನ ಪಡೆದರೆ ಇವರಿಗೆ ಉಪನಾಯಕ ಸ್ಥಾನವನ್ನು ನೀಡುವ ಸಾಧ್ಯತೆ ಇದೆ. ಶುಭಮನ್ ಗಿಲ್ ಟಿ20 ಕ್ರಿಕೆಟ್‌ನಲ್ಲಿ ಈಗಾಗಲೇ ಭಾರತದ ಪರ 21 ಪಂದ್ಯಗಳನ್ನು ಆಡಿದ್ದು, 30.42ರ ಸರಾಸರಿಯಲ್ಲಿ 578 ರನ್ ಸಿಡಿಸಿದ್ದಾರೆ. ಈ ವೇಳೆ 1 ಶತಕ ಹಾಗೂ ಮೂರು ಅರ್ಧಶತಕಗಳನ್ನು ಸಿಡಿಸಿದ್ದಾರೆ. ಇನ್ನು ಇವರು ಐಪಿಎಲ್‌ನಲ್ಲಿ 115 ಪಂದ್ಯಗಳನ್ನು ಆಡಿದ್ದು 39.44ರ ಸರಾಸರಿಯಲ್ಲಿ 3866 ರನ್ ಸಿಡಿಸಿದ್ದಾರೆ.
ಶುಭಮನ್ ಗಿಲ್ ಏನು ಮಾಡಬೇಕು?
ಒಂದು ವೇಳೆ ಶುಭಮನ್ ಗಿಲ್ ಅವರಿಗೆ ಟಿ20 ತಂಡದಲ್ಲಿ ಸ್ಥಾನ ಪಡೆದರೆ ಯಾವ ಸ್ಥಾನದಲ್ಲಿ ಆಡಬೇಕು ಎಂಬುದೇ ದೊಡ್ಡ ಸಮಸ್ಯೆಯಾಗಿದೆ. ಇವರು ತಂಡಕ್ಕೆ ಎಂಟ್ರಿ ನೀಡಿದರೆ ದೊಡ್ಡ ಜವಾಬ್ದಾರಿ ನೀಡುವ ಸಾಧ್ಯತೆ ದಟ್ಟವಾಗಿದೆ. ಆದರೆ ಇದಕ್ಕಾಗಿ ಶುಭಮನ್ ಗಿಲ್ ಸಹ ತಮ್ಮ ಆಟದಲ್ಲಿ ಕೊಂಚ ಬದಲಾವಣೆಗಳನ್ನು ಮಾಡಿಕೊಳ್ಳುವ ಅವಶ್ಯಕತೆ ಇದೆ. ಇವರ ಆರಂಭದಲ್ಲಿ ಟೈಮ್ ಸ್ಪೆಂಡ್ ಮಾಡುವುದನ್ನು ಬಿಟ್ಟು, ಫಸ್ಟ್ ಬೌಲ್‌ನಿಂದಲೇ ಅಗ್ರೇಸಿವ್ ಇಂಟೇಟ್ ತೋರಿಸಬೇಕಿದೆ. ಶುಭಮನ್ ಗಿಲ್ ಏಷ್ಯಾ ಕಪ್ ಟಿ20 ತಂಡದಲ್ಲಿ ಸ್ಥಾನ ಪಡೆದು ತಮ್ಮ ಕ್ಷಮತೆಯನ್ನು ಪ್ರದರ್ಶಿಸಿದರೆ, ಮಾತ್ರ ಮುಂದಿನ ವರ್ಷ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಸ್ಥಾನ ಪಡೆಯ ಬಹುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications