Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Asia Cup T20: ಸೂಪರ್ 4ಗೆ ಅರ್ಹತೆ ಪಡೆದ ಶ್ರೀಲಂಕಾ, ಬಾಂಗ್ಲಾ: ಅಫ್ಘಾನಿಸ್ತಾನಕ್ಕೆ ನಿರಾಸೆ

ಅಬುದಾಬಿ: ಏಷ್ಯಾ ಕಪ್‌ ಟಿ20 ಕ್ರಿಕೆಟ್ ಟೂರ್ನಿಯ "ಬಿ" ಗುಂಪಿನ ಪಂದ್ಯದಲ್ಲಿ ಶ್ರೀಲಂಕಾ 6 ವಿಕೆಟ್‌ಗಳಿಂದ ಅಫ್ಘಾನಿಸ್ತಾನ ತಂಡವನ್ನು ಮಣಿಸಿ, ಸೂಪರ್ 4 ಹಂತಕ್ಕೆ ಅರ್ಹತೆ ಪಡೆದಿದೆ. ಇನ್ನು ರಶೀದ್ ಖಾನ್ ಪಡೆಯ ಮುಂದಿನ ಹಂತದ ಕನಸು ನುಚ್ಚುನೂರಾಗಿದೆ. ಇನ್ನು ಈ ಗುಂಪಿನಲ್ಲಿ ಬಾಂಗ್ಲಾದೇಶ ಸಹ ಸೂಪರ್ 4 ಹಂತಕ್ಕೆ ಪ್ರವೇಶಿಸಿದೆ.

ಅಫ್ಘಾನಿಸ್ತಾನದ ಆರಂಭ ಕಳಪೆಯಾಗಿತ್ತು. ಆರಂಭಿಕರಾದ ರಹಮಾನುಲ್ಲಾ ಗುರ್ಬಾಜ್ (14) ಹಾಗೂ ಸೇದಿಕುಲ್ಲಾ ಅಟಲ್ (18) ಕರಿಮ್ ಜನತ್‌ (1) ದೊಡ್ಡ ಇನಿಂಗ್ಸ್‌ ಕಟ್ಟುವಲ್ಲಿ ವಿಫಲರಾದರು. ಇಬ್ರಾಹಿಂ ಜರ್ದಾನ್‌ 1 ಸಿಕ್ಸರ್ ಸಹಾಯದಿಂದ 24 ರನ್‌ ಬಾರಿಸಿ ತಂಡಕ್ಕೆ ಆಧಾರವಾದರು. ಉಳಿದಂತೆ ಮಧ್ಯಮ ಕ್ರಮಾಂಕದ ಆಟಗಾರರು ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಏಳನೇ ವಿಕೆಟ್‌ಗೆ ನಾಯಕ ರಶೀದ್ ಖಾನ್‌ ಹಾಗೂ ಮೊಹಮ್ಮದ್ ನಬಿ ಜೋಡಿ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ 30 ಎಸೆತಗಳಲ್ಲಿ 35 ರನ್‌ ಜೊತೆಯಾಟದ ಕಾಣಿಕೆ ನೀಡಿತು. ರಶೀದ್‌ 2 ಬೌಂಡರಿ, 1 ಸಿಕ್ಸರ್ ಸಹಾಯದಿಂದ 24 ರನ್‌ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು.

Asia Cup T20 Sri Lanka Beat Afghanistan to Qualify for Super 4

ನಬಿ ಸ್ಫೋಟಕ ಆಟ

ಎಂಟನೇ ವಿಕೆಟ್‌ಗೆ ನೂರ್ ಅಹ್ಮದ್ ಹಾಗೂ ಮೊಹಮ್ಮದ್ ನಬಿ ಜೋಡಿ ಆರ್ಭಟಿಸಿತು. ಈ ಜೋಡಿ ಕೇವಲ 18 ಎಸೆತಗಳಲ್ಲಿ 55 ರನ್‌ ಸೇರಿಸಿತು. ಆಫ್ಘಾನ ತಂಡದ ಸ್ಟಾರ್ ಆಟಗಾರ ಮೊಹಮ್ಮದ್ ನಬಿ, ದುನಿತ್ ವೆಲ್ಲಲಾಗೆ ಎಸೆದ ಕೊನೆಯ ಓವರ್‌ನಲ್ಲಿ ಸತತ ಐದು ಸಿಕ್ಸರ್ ಬಾರಿಸಿ ಅಬ್ಬರಿಸಿದರು. ನಬಿ 3 ಬೌಂಡರಿ, 6 ಸಿಕ್ಸರ್‌ ಸಹಾಯದಿಂದ 60 ರನ್ ಬಾರಿಸಿ ಇಲ್ಲದ ರನ್‌ ಕದಿಯಲು ಹೋಗಿ ಔಟ್ ಆದರು. ಅಂತಿಮವಾಗಿ ಅಫ್ಘಾನಿಸ್ತಾನ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 169 ರನ್‌ ಸೇರಿಸಿತು. ಶ್ರೀಲಂಕಾ ತಂಡದ ಸ್ಟಾರ್ ವೇಗದ ಬೌಲರ್ ನುವಾನ್ ತುಷಾರ್ 18 ರನ್‌ ನೀಡಿ 4 ವಿಕೆಟ್‌ ಕಬಳಿಸಿದರು.

ಗುರಿಯನ್ನು ಹಿಂಬಾಲಿಸಿದ ಶ್ರೀಲಂಕಾ ತಂಡದ ಆರಂಭ ಸಾಧಾರಣವಾಗಿತ್ತು. ಆರಂಭಿಕ ಆಟಗಾರ ಪತನು ನಿಸ್ಸಂಕಾ (6), ಕಮಿಲ್ ಮಿಶ್ರಾ (4) ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಮೂರನೇ ವಿಕೆಟ್‌ಗೆ ಕುಸಾಲ್‌ ಮೆಂಡೀಸ್‌ ಹಾಗೂ ಕುಸಾಲ್‌ ಪೆರೆರಾ ಜೋಡಿ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ ರನ್‌ ವೇಗಕ್ಕೆ ಚುರುಕು ಮುಟ್ಟಿಸುವದಲ್ಲದೇ, ವಿಕೆಟ್‌ ಬೀಳದಂತೆ ನೋಡಿಕೊಂಡಿತು. ಈ ಜೋಡಿ 36 ಎಸೆತಗಳಲ್ಲಿ 45 ರನ್‌ ಸೇರಿಸಿತು. ಕುಸಾಲ್‌ ಪೆರೆರಾ 3 ಬೌಂಡರಿ ನೆರವಿನಿಂದ 28 ರನ್‌ ಬಾರಿಸಿ ಔಟ್ ಆದರು.

Asia Cup T20 Sri Lanka Beat Afghanistan to Qualify for Super 4

ಐದನೇ ವಿಕೆಟ್‌ಗೆ ಕುಸಾಲ್‌ ಮೆಂಡೀಸ್‌ ಹಾಗೂ ಕಮಿಂಡು ಮೆಂಡೀಸ್ (ಅಜೇಯ 26) ಜೋಡಿ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ 23 ಎಸೆತಗಳಲ್ಲಿ ಅಜೇಯ 52 ರನ್‌ ಸೇರಿಸಿತು. ಆರಂಭಿಕ ಕುಸಾಲ್‌ ಮೆಂಡೀಸ್‌ 10 ಬೌಂಡರಿ ನೆರವಿನಿಂದ ಅಜೇಯ 74 ರನ್‌ ಬಾರಿಸಿ ಜಯದಲ್ಲಿ ಮಿಂಚಿದರು. ಅಂತಿಮವಾಗಿ ಶ್ರೀಲಂಕಾ 18.4 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 171 ರನ್‌ ಸೇರಿಸಿ ಜಯ ಸಾಧಿಸಿತು. ಈ ಪಂದ್ಯವನ್ನು ಅಫ್ಘಾನಿಸ್ತಾನ ಗೆದ್ದಿದ್ದರೆ ಮಾತ್ರ ಸೂಪರ್ 4 ಹಂತಕ್ಕೆ ಪ್ರವೇಶ ಪಡೆಯಲಿತ್ತು. ಆದರೆ ನಿರಾಸೆ ಅನುಭವಿಸಿತು. ಬಾಂಗ್ಲಾದೇಶ ತಂಡ ಬಿ ಗುಂಪಿನ ಪಂದ್ಯದಿಂದ ಸೂಪರ್ 4 ಹಂತ ಪ್ರವೇಶಿಸಿದ ಎರಡನೇ ತಂಡವಾಗಿದೆ.

Story first published: Thursday, September 18, 2025, 23:46 [IST]
Other articles published on Sep 18, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+