Asia Cup T20: ಸೂಪರ್ 4 ಹಂತಕ್ಕೆ ಅರ್ಹತೆ ಪಡೆದ ತಂಡಗಳು ಎಷ್ಟು? ಇಲ್ಲಿದೆ ವೇಳಾ ಪಟ್ಟಿ
ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಲೀಗ್ ಹಂತದ ಪಂದ್ಯಗಳು ಮುಗಿದಿವೆ. ಶನಿವಾರದಿಂದ ಸೂಪರ್ ಫೋರ್ ಹಂತದ ಪಂದ್ಯಗಳು ಆರಂಭವಾಗಲಿವೆ. ಈ ಪಂದ್ಯಕ್ಕೆ ತಂಡಗಳು ತಯಾರಿ ನಡೆಸಿವೆ. "ಎ" ಗುಂಪಿನಿಂದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಂದಿನ ಹಂತಕ್ಕ ಪ್ರವೇಶಿಸಿವೆ. ಇನ್ನು "ಬಿ" ಗುಂಪಿನಲ್ಲಿ ಶ್ರೀಲಂಕಾ ಹಾಗೂ ಬಾಂಗ್ಲಾದೇಶ ತಂಡಗಳು ಸೂಪರ್ 4 ಹಂತ ಪ್ರವೇಶಿಸಿವೆ. ಸೂಪರ್ 4 ಹಂತದ ಪಂದ್ಯಗಳ ವೇಳಾ ಪಟ್ಟಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಸೂಪರ್ 4 ಹಂತದ ಪಂದ್ಯಗಳು ಬಾಂಗ್ಲಾದೇಶ ಹಾಗೂ ಶ್ರೀಲಂಕಾ ನಡುವಣ ಪಂದ್ಯದೊಂದಿಗೆ ಆರಂಭವಾಗಲಿದೆ. ಈ ತಂಡಗಳು ದುಬೈನಲ್ಲಿ ಕಾದಾಟ ನಡೆಸಲಿವೆ. ಶ್ರೀಲಂಕಾ ಆಡಿರುವ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿ, ಸೂಪರ್ 4 ಹಂತಕ್ಕೆ ಪ್ರವೇಶಿಸಿವೆ. ಇನ್ನು ಬಾಂಗ್ಲಾದೇಶ 2 ಜಯ ಸಾಧಿಸಿದ್ದು, ಮುಂದಿನ ಹಂತಕ್ಕೆ ಪ್ರವೇಶಿಸಿದೆ. ಸೂಪರ್ 4 ಹಂತದ ಪಂದ್ಯಗಳಲ್ಲಿ ಭಾಗವಹಿಸುವ ತಂಡಗಳು ತಲಾ ಒಮ್ಮೆ ಮುಖಾಮುಖಿ ಆಗಲಿವೆ.

ಟೀಮ್ ಇಂಡಿಯಾ ಶುಕ್ರವಾರ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಓಮನ್ ವಿರುದ್ಧ ಜಯ ಸಾಧಿಸಿದ್ದು, ಭಾರತ ಸಹ ಈ ಟೂರ್ನಿಯಲ್ಲಿ ತನ್ನ ಅಜೇಯ ಓಟವನ್ನು ಮುಂದುವರೆಸಿದೆ. ಭಾರತ ಹಾಗೂ ಪಾಕ್ ತಂಡಗಳು ಸೂಪರ್ 4 ಹಂತದಲ್ಲಿ ಭಾನುವಾರ ಕಾದಾಟ ನಡೆಸಲಿವೆ. ಈ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಭಾರತ ಈ ಪಂದ್ಯವನ್ನು ಗೆದ್ದು ಫೈನಲ್‌ಗೆ ಹತ್ತಿರವಾಗುವ ಕನಸು ಕಾಣುತ್ತಿದೆ.
ಭಾರತ, ಶ್ರೀಲಕಾ ಸೆ.26ಕ್ಕೆ ಫೈಟ್
ಭಾರತ ಹಾಗೂ ಬಾಂಗ್ಲಾದೇಶ ತಂಡಗಳು ಸೂಪರ್ 4 ಹಂತದಲ್ಲಿ ಬುಧವಾರ ಹೋರಾಟ ನಡೆಸಲಿವೆ. ಈ ಪಂದ್ಯ ಉಭಯ ತಂಡಗಳಿಗೆ ಮಹತ್ವದಾಗಿರುತ್ತದೆ. ಅಂಕಿ ಅಂಶಗಳ ಲೆಕ್ಕಾಚಾರ ಹಾಗೂ ಸದ್ಯದ ಫಾರ್ಮ್ ಗಮನಿಸಿದರೆ ಭಾರತ ತಂಡ ಬಲಾಢ್ಯವಾಗಿದೆ. ಹೀಗಾಗಿ ಈ ಪಂದ್ಯವನ್ನು ಗೆಲ್ಲುವ ಇರಾದೆ ಹೊಂದಿದೆ. ಇನ್ನು ಟೀಮ್ ಇಂಡಿಯಾ ಹಾಗೂ ಶ್ರೀಲಂಕಾ ನಡುವಣ ಶುಕ್ರವಾರ ನಡೆಯಲಿರುವ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಲೀಗ್ ಹಂತದ ಪಂದ್ಯಗಳಲ್ಲಿ ಉಭಯ ತಂಡಗಳು ಅಜೇಯ ಓಟವನ್ನು ಮುನ್ನಡೆಸಿದ್ದು, ಈ ಪಂದ್ಯದಲ್ಲಿ ಯಾರು ಗೆಲ್ಲುತ್ತಾರೆ ಎಂಬ ಪ್ರಶ್ನೆ ಉದ್ಭವಿಸಿದೆ.

ಸೂಪರ್ 4 ಹಂತದ ವೇಳಾಪಟ್ಟಿ
ಸೆ.20, ಬಾಂಗ್ಲಾದೇಶ ವಿರುದ್ಧ ಶ್ರೀಲಂಕಾ, ರಾತ್ರಿ 8ಕ್ಕೆ
ಸೆ.21, ಭಾರತ ಹಾಗೂ ಪಾಕಿಸ್ತಾನ, ರಾತ್ರಿ 8ಕ್ಕೆ
ಸೆ.23, ಪಾಕಿಸ್ತಾನ ಹಾಗೂ ಶ್ರೀಲಂಕಾ, ರಾತ್ರಿ 8ಕ್ಕೆ
ಸೆ.24, ಬಾಂಗ್ಲಾದೇಶ ಹಾಗೂ ಭಾರತ, ರಾತ್ರಿ 8ಕ್ಕೆ

ಸೆ.25, ಬಾಂಗ್ಲಾದೇಶ ಹಾಗೂ ಪಾಕಿಸ್ತಾನ, ರಾತ್ರಿ 8ಕ್ಕೆ
ಸೆ.26, ಭಾರತ ಹಾಗೂ ಶ್ರೀಲಂಕಾ, ರಾತ್ರಿ 8ಕ್ಕೆ
ಏಷ್ಯಾ ಕಪ್ ಟಿ20 ಟೂರ್ನಿಯ ಫೈನಲ್ ಪಂದ್ಯ ಸೆ.28 ರಂದು ನಡೆಯಲಿದೆ. ಸೂಪರ್ 4 ಹಂತದಲ್ಲಿ ಅಗ್ರ 2 ಸ್ಥಾನ ಪಡೆದ ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications