Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬೇಸರದ ಸುದ್ದಿ; ಐಪಿಎಲ್ ನಂತರ ಮತ್ತೊಂದು ಟೂರ್ನಿ ಮುಂದೂಡಿಕೆ!

Asian Cricket Council officially postpones Asia Cup to 2023

ಕೊರೊನಾವೈರಸ್ ಕಾರಣದಿಂದಾಗಿ ಈ ಬಾರಿಯ ಐಪಿಎಲ್ ಹಾಗೂ ಪಿಎಸ್ಎಲ್ ಟೂರ್ನಿಗಳು ಮುಂದೂಡಲ್ಪಟ್ಟು ಭಾರತ ಹಾಗೂ ಪಾಕ್ ಕ್ರೀಡಾಭಿಮಾನಿಗಳು ಬೇಸರಕ್ಕೊಳಗಾಗಿದ್ದರು. ಇದೀಗ ಏಷ್ಯಾಕಪ್ ಟೂರ್ನಿ ಕೂಡ ಮುಂದೂಡಲ್ಪಡುವುದರ ಮೂಲಕ ಆ ಬೇಸರ ದುಪ್ಪಟ್ಟಾಗಿದೆ.

ಈ ವರ್ಷ ನಡೆಯಬೇಕಿದ್ದ ಏಷ್ಯಾಕಪ್ ಟೂರ್ನಿಯನ್ನು 2023ಕ್ಕೆ ಮುಂದೂಡಲಾಗಿದೆ ಎಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧಿಕೃತವಾಗಿ ಹೇಳಿಕೆ ನೀಡಿದೆ. ಏಷ್ಯಾಕಪ್ ಟೂರ್ನಿ 2018ರಲ್ಲಿ ಕೊನೆಯ ಬಾರಿಗೆ ನಡೆದಿತ್ತು, ಅದಾದ ಬಳಿಕ 2020ರಲ್ಲಿ ಏಷ್ಯಾಕಪ್ ಟೂರ್ನಿ ನಡೆಸಲು ತೀರ್ಮಾನಿಸಲಾಗಿತ್ತು,ಆದರೆ ಕೊರೊನಾವೈರಸ್ ಕಾರಣದಿಂದಾಗಿ 2020ರ ಏಷ್ಯಾಕಪ್ ಟೂರ್ನಿಯನ್ನು ಈ ವರ್ಷಕ್ಕೆ ಮುಂದೂಡಲಾಗಿತ್ತು. ಆದರೆ ಈ ವರ್ಷವೂ ಸಹ ಕೊರೊನಾವೈರಸ್ ಹೆಚ್ಚಿರುವ ಕಾರಣ ಟೂರ್ನಿಯನ್ನು 2023ಕ್ಕೆ ಮುಂದೂಡಲಾಗಿದೆ.

2023ಕ್ಕೂ ಮುನ್ನ 2022ರಲ್ಲಿ ಮತ್ತೊಂದು ಏಷ್ಯಾ ಕಪ್ ಟೂರ್ನಿ ನಡೆಯಲಿದ್ದು ಪಾಕಿಸ್ತಾನ ಈ ಟೂರ್ನಿಯ ಆತಿಥ್ಯ ವಹಿಸಿಕೊಳ್ಳುವ ಹಕ್ಕನ್ನು ಹೊಂದಿದೆ. ಇನ್ನು 2023ಕ್ಕೆ ಮುಂದೂಡಲ್ಪಟ್ಟಿರುವ ಏಷ್ಯಾಕಪ್ ಟೂರ್ನಿಯನ್ನು ಶ್ರೀಲಂಕಾ ಆತಿಥ್ಯ ವಹಿಸುವ ಸಂಭವವಿದೆ. ಒಟ್ಟಿನಲ್ಲಿ ಈ ವರ್ಷವೂ ಸಹ ಪಾಕಿಸ್ತಾನ ಮತ್ತು ಭಾರತ ನಡುವಿನ ಏಷ್ಯಾ ಕಪ್ ಪಂದ್ಯವನ್ನು ವೀಕ್ಷಿಸುವ ಅವಕಾಶ ತಪ್ಪಿದಂತಾಗಿದೆ.

Story first published: Monday, May 24, 2021, 9:50 [IST]
Other articles published on May 24, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+