Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Asian Games 2026 ಪಾಕ್‌ ತಂಡ ಪ್ರಕಟ: ಸಾಹಿಬ್‌ಜಾದಾ ಫರ್ಹಾನ್ ನಾಯಕ, ಬಾಬರ್‌ ಅಜಮ್‌ಗೆ ವಿಶ್ರಾಂತಿ

ಈ ವರ್ಷ ನಡೆಯಲಿರುವ ಏಷ್ಯನ್‌ ಗೇಮ್ಸ್‌ ಕ್ರೀಡಾಕೂಟದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈ ಟೂರ್ನಿಗೆ ಈಗಾಗಲೇ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಈಗ ಪಾಕಿಸ್ತಾನ ಸಹ ತನ್ನ ತಂಡವನ್ನು ಪ್ರಕಟಿಸಿದೆ. ಏಷ್ಯನ್ ಕ್ರೀಡಾಕೂಟಕ್ಕಾಗಿ ಪಿಸಿಬಿ ತನ್ನ 15 ಸದಸ್ಯರ ಪುರುಷರ ತಂಡವನ್ನು ಪ್ರಕಟಿಸಿದೆ. ಈ ಬಾರಿ, ಅನುಭವಿ ಬ್ಯಾಟ್ಸ್‌ಮನ್ ಸಾಹಿಬ್‌ಜಾದಾ ಫರ್ಹಾನ್ ಅವರನ್ನು ತಂಡದ ನಾಯಕತ್ವ ನೀಡಲಾಗಿದೆ. ಈ ತಂಡದಲ್ಲಿ ಹಿರಿಯ ಆಟಗಾರರಾದ ಬಾಬರ್ ಅಜಮ್ ಮತ್ತು ಶಾಹೀನ್ ಶಾ ಅಫ್ರಿದಿ ಅವರಿಗೆ ವಿಶ್ರಾಂತಿ ನೀಡಲಾಗಿದ್ದು, ಯುವ ಆಟಗಾರರಿಗೆ ಹೆಚ್ಚಿನ ಅವಕಾಶ ನೀಡಲಾಗಿದೆ.

ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯಲಿರುವ ಏಷ್ಯನ್ ಕ್ರೀಡಾಕೂಟದಲ್ಲಿ ಪಾಕಿಸ್ತಾನ ಚಿನ್ನದ ಪದಕವನ್ನು ಗುರಿಯಾಗಿಸಿಕೊಂಡಿದೆ. ಆದಾಗ್ಯೂ, ಬಲಿಷ್ಠ ಭಾರತೀಯ ತಂಡದಿಂದ ಪಾಕಿಸ್ತಾನ ಕಠಿಣ ಸವಾಲನ್ನು ಎದುರಿಸಲಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) 15 ಸದಸ್ಯರ ತಂಡವನ್ನು ಪ್ರಕಟಿಸಿದ್ದು, ಅಬ್ದುಲ್ ಸಮದ್ ಅವರನ್ನು ಉಪನಾಯಕನನ್ನಾಗಿ ನೇಮಿಸಲಾಗಿದೆ.

Asian Games

2026 ರ ಏಷ್ಯನ್ ಕ್ರೀಡಾಕೂಟವು ಸೆಪ್ಟೆಂಬರ್ 19 ರಿಂದ ಅಕ್ಟೋಬರ್ 4 ರವರೆಗೆ ನಡೆಯಲಿದೆ. 10 ತಂಡಗಳು ಈ ಕ್ರೀಡಾ ಕೂಟದಲ್ಲಿ ಭಾಗವಹಿಸುತ್ತಿವೆ. ಇನ್ನು ಟಿ20 ಮಾದರಿಯಲ್ಲಿ ಪಂದ್ಯಗಳು ನಡೆಯಲಿವೆ. ಏಷ್ಯನ್‌ ಗೇಮ್ಸ್‌ನಲ್ಲಿ ಕ್ರಿಕೆಟ್‌ ಪಂದ್ಯಗಳು ಸೆಪ್ಟೆಂಬರ್ 24 ರಂದು ಪ್ರಾರಂಭವಾಗಿ, ಅಕ್ಟೋಬರ್ 3ರ ವರೆಗೆ ನಡೆಯಲಿವೆ.

ಯುವಕರಿಗೆ ಅವಕಾಶ

ಈ ಬಾರಿ ಪಾಕ್‌ ತಂಡವನ್ನು 30 ವರ್ಷದ ಸಾಹಿಬ್‌ಜಾದಾ ಫರ್ಹಾನ್ ಮುನ್ನಡೆಸಲಿದ್ದಾರೆ. ಇವರು ಈಗಾಗಲೇ ಪಾಕ್‌ ಪರ 46 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, ಎರಡು ಶತಕಗಳು ಮತ್ತು 10 ಅರ್ಧಶತಕಗಳು ಸೇರಿದಂತೆ 1305 ರನ್ ಗಳಿಸಿದ್ದಾರೆ.

Asian Games

ಹಲವಾರು ಯುವ ಆಟಗಾರರಿಗೂ ತಂಡದಲ್ಲಿ ಅವಕಾಶ ನೀಡಲಾಗಿದೆ. ಇನ್ನು ಪಾಕ್ ಪರ ಅಕಿಫ್ ಜಾವೇದ್, ಅಲಿ ರಜಾ, ಮಾಜ್ ಸದಾಕತ್ ಮತ್ತು ಸಾದ್ ಮಸೂದ್ ಟಿ20 ಅಂತರರಾಷ್ಟ್ರೀಯ ಪಂದ್ಯಗಳಿಗೆ ಇನ್ನೂ ಪಾದಾರ್ಪಣೆ ಮಾಡಿಲ್ಲ ಆದರೂ ಪಾಕ್‌ ಇವರನ್ನು ಆಯ್ಕೆ ಮಾಡಿದೆ.

2026 ರ ಏಷ್ಯನ್ ಕ್ರೀಡಾಕೂಟಕ್ಕಾಗಿ ಪಾಕಿಸ್ತಾನದ 15 ಸದಸ್ಯರ ತಂಡ: ಸಾಹಿಬ್‌ಜಾದಾ ಫರ್ಹಾನ್ (ನಾಯಕ), ಅಬ್ದುಲ್ ಸಮದ್ (ಉಪನಾಯಕ), ಅಬ್ರಾರ್ ಅಹ್ಮದ್, ಅಹ್ಮದ್ ದಾನಿಯಾಲ್, ಅಕಿಫ್ ಜಾವೇದ್, ಅಲಿ ರಜಾ, ಅರಾಫತ್ ಮಿನ್ಹಾಸ್, ಹೈದರ್ ಅಲಿ, ಹಸನ್ ನವಾಜ್, ಮಾಜ್ ಸದಾಕತ್, ಮೊಹಮ್ಮದ್ ಸಲ್ಮಾನ್ ಮಿರ್ಜಾ, ಸಾದ್ ಮಸೂದ್, ಸೈಮ್ ಅಯೂಬ್, ಸುಫಿಯಾನ್ ಮೊಕೀಮ್ ಮತ್ತು ಉಸ್ಮಾನ್ ಖಾನ್ (ವಿಕೆಟ್ ಕೀಪರ್).

Story first published: Wednesday, June 10, 2026, 11:53 [IST]
Other articles published on Jun 10, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+