3 ತಿಂಗಳಲ್ಲಿ ನಡೆಯುವ ಕೆಎಲ್ ರಾಹುಲ್ ಮದುವೆಗೆ ನಾನೂ ಹೋಗುತ್ತೇನೆ; ಅಚ್ಚರಿ ಮೂಡಿಸಿದ ಅಥಿಯಾ ಶೆಟ್ಟಿ ಹೇಳಿಕೆ!

ಕ್ರಿಕೆಟ್ ಜಗತ್ತಿನಲ್ಲಿ ಸದ್ಯ ವಿವಾಹದ ಕುರಿತಾಗಿ ಅತಿ ದೊಡ್ಡ ಮಟ್ಟದಲ್ಲಿ ಸುದ್ದಿಗೀಡಾಗಿರುವ ಜೋಡಿ ಎಂದರೆ ಅದು ಕೆಎಲ್ ರಾಹುಲ್ ಮತ್ತು ಅಥಿಯಾ ಶೆಟ್ಟಿ ಜೋಡಿ. ಹೌದು, ಈ ಇಬ್ಬರೂ ಸಹ ಇಲ್ಲಿಯವರೆಗೂ ಯಾವುದೇ ಸಂದರ್ಶನದಲ್ಲಾಗಲಿ ಅಥವಾ ಸಾಮಾಜಿಕ ಜಾಲತಾಣದ ಪೋಸ್ಟ್‌ಗಳಲ್ಲಾಗಲಿ ತಾವಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದೇವೆ ಎಂಬ ವಿಷಯವನ್ನು ಬಹಿರಂಗಪಡಿಸಿಲ್ಲ. ಆದರೂ ಸಹ ಈ ಇಬ್ಬರೂ ಆತ್ಮೀಯವಾಗಿರುವ ರೀತಿ ಹಾಗೂ ಪೋಸ್ಟ್ ಮಾಡುವ ಚಿತ್ರಗಳನ್ನು ಗಮನಿಸಿರುವ ನೆಟ್ಟಿಗರು ಹಾಗೂ ಅಭಿಮಾನಿ ಬಳಗ ಇಬ್ಬರ ನಡುವೆ ಪ್ರೀತಿ ಇದೆ ಎಂದು ದೊಡ್ಡ ಮಟ್ಟದಲ್ಲಿ ಊಹಿಸಿದ್ದಾರೆ.
ಕೆಎಲ್ ರಾಹುಲ್ ಮತ್ತು ಅಥಿಯಾ ಶೆಟ್ಟಿ ಈಗಾಗಲೇ ಹಲವಾರು ಬಾರಿ ಹೋಟೆಲ್‌ಗಳಲ್ಲಿ ಭೋಜನ ಸವಿಯುವಾಗ ಹಾಗೂ ಪ್ರವಾಸ ಕೈಗೊಂಡ ಸಂದರ್ಭಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದು, ಇಬ್ಬರೂ ಸಹ ಪರಸ್ಪರ ಸಾಮಾಜಿಕ ಜಾಲತಾಣಗಳಲ್ಲಿ ಒಟ್ಟಿಗೆ ಇರುವ ಫೋಟೋಗಳನ್ನು ಹೆಚ್ಚಾಗಿ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಅಥಿಯಾ ಶೆಟ್ಟಿ ಅವರ ತಂದೆ ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಸುನೀಲ್ ಶೆಟ್ಟಿ ಕೂಡ ಮಗಳು ಅಥಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ಜತೆ ಹಲವಾರು ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.
ಹೀಗಾಗಿಯೇ ಕೆಎಲ್ ರಾಹುಲ್ ಮತ್ತು ಅಥಿಯಾ ಶೆಟ್ಟಿ ಮದುವೆಯಾಗಲಿದ್ದಾರೆ ಎಂಬ ಅಭಿಪ್ರಾಯ ಹಲವರಲ್ಲಿದೆ. ಸದ್ಯ ಕೆಎಲ್ ರಾಹುಲ್ ಮತ್ತು ಅಥಿಯಾ ಶೆಟ್ಟಿ ಮುಂದಿನ 3 ತಿಂಗಳುಗಳಲ್ಲಿ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಹರಿದಾಡುತ್ತಿದೆ. ಈ ವಿಷಯದ ಕುರಿತಾಗಿ ಇದೀಗ ಸ್ವತಃ ಅಥಿಯಾ ಶೆಟ್ಟಿ ಅವರೇ ಪ್ರತಿಕ್ರಿಯಿಸಿದ್ದು, ಈ ಕೆಳಕಂಡಂತೆ ಉತ್ತರವನ್ನು ನೀಡಿದ್ದಾರೆ.

ಮದುವೆಯ ಸುದ್ದಿ ತಳ್ಳಿಹಾಕಿದ ಆಥಿಯಾ ಶೆಟ್ಟಿ
3 ತಿಂಗಳುಗಳಲ್ಲಿ ಕೆಎಲ್ ರಾಹುಲ್ ಮತ್ತು ಅಥಿಯಾ ಶೆಟ್ಟಿ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಕುರಿತಾಗಿ ಪ್ರತಿಕ್ರಿಯಿಸಿರುವ ಅಥಿಯಾ ಶೆಟ್ಟಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸ್ಟೋರಿ ಒಂದನ್ನು ಪೋಸ್ಟ್ ಮಾಡಿದ್ದು 3 ತಿಂಗಳಿನಲ್ಲಿ ನಡೆಯಲಿದೆ ಎನ್ನಲಾಗುತ್ತಿರುವ ಮದುವೆಗೆ ನನ್ನನ್ನೂ ಸಹ ಆಹ್ವಾನಿಸಿದ್ದಾರೆ ಎಂದು ಭಾವಿಸುತ್ತೇನೆ ಎಂದು ವ್ಯಂಗ್ಯವಾಗಿ ಬರೆದುಕೊಳ್ಳುವುದರ ಮೂಲಕ ಮದುವೆ ಕುರಿತಾಗಿ ಹರಿದಾಡುತ್ತಿದ್ದ ಎಲ್ಲಾ ಸುದ್ದಿಗಳನ್ನು ತಳ್ಳಿ ಹಾಕಿದ್ದಾರೆ.

ಸದ್ಯಕ್ಕಿಲ್ಲ ಮದುವೆ ಎಂಬ ಸೂಚನೆ ನೀಡಿದ ಅಥಿಯಾ
ಈ ರೀತಿಯ ಸ್ಟೋರಿ ಹಂಚಿಕೊಳ್ಳುವುದರ ಮೂಲಕ ಅಥಿಯಾ ಶೆಟ್ಟಿ ತಮ್ಮ ಮತ್ತು ಕೆಎಲ್ ರಾಹುಲ್ ವಿವಾಹ ಸದ್ಯಕ್ಕಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆಯೇ ಹೊರತು ಇಬ್ಬರ ನಡುವೆ ಮದುವೆಯ ವಿಚಾರವಿಲ್ಲ ಎಂಬುದನ್ನು ಸ್ಪಷ್ಟವಾಗಿ ತಿಳಿಸಿಲ್ಲ. ಹಾಗೂ ತನ್ನ ಮತ್ತು ಕೆಎಲ್ ರಾಹುಲ್ ಮದುವೆಗೆ ತನಗೆ ಆಮಂತ್ರಣ ನೀಡಿದ್ದಾರೆ ಎಂದು ಭಾವಿಸುತ್ತೇನೆ ಎಂದಿರುವ ಅಥಿಯಾ ಶೆಟ್ಟಿ ಮದುವೆ ಸದ್ಯಕ್ಕಿಲ್ಲ, ಮುಂದಿನ ದಿನಗಳಲ್ಲಿ ಆಗಲಿದೆ ಎಂಬುದನ್ನು ಪರೋಕ್ಷವಾಗಿ ತಿಳಿಸಿದಂತಿದೆ ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ.

ಮದುವೆ ಯೋಜಿಸಲಾಗಿಲ್ಲ ಎಂದ ಸುನೀಲ್ ಶೆಟ್ಟಿ
ಈ ಕುರಿತಾಗಿ ಅಥಿಯಾ ಶೆಟ್ಟಿ ಅವರ ತಂದೆ ಸುನೀಲ್ ಶೆಟ್ಟಿ ಕೂಡ ಪ್ರತಿಕ್ರಿಯಿಸಿದ್ದು, ಇನ್ನೂ ಯಾವುದನ್ನೂ ಸಹ ಯೋಜಿಸಲಾಗಿಲ್ಲ ಎಂಬ ಉತ್ತರವನ್ನು ನೀಡಿದ್ದಾರೆ. ಈ ಮೂಲಕ ಕೆಎಲ್ ರಾಹುಲ್ ಮತ್ತು ಅಥಿಯಾ ಶೆಟ್ಟಿ ಮದುವೆ ಮುಂದಿನ 3 ತಿಂಗಳುಗಳಲ್ಲಿ ನಡೆಯುವುದಿಲ್ಲ ಎಂಬುದನ್ನು ಸುನೀಲ್ ಶೆಟ್ಟಿ ಖಾತರಿಪಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications