ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ಹಾಗೂ ಅಫ್ಘಾನಿಸ್ತಾನ ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯ ಎರಡು ತಂಡಗಳಿಗೂ ಅತ್ಯಂತ ಮಹತ್ವದ್ದಾಗಿದ್ದು ಕ್ರಿಕೆಟ್ ಅಭಿಮಾನಿಗಳ ಕುತೂಹಲ ಕೆರಳಿಸಿದೆ. ಈ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡದ ಆರಂಭಿಕ ಆಟಗಾರ ಇಬ್ರಾಹಿಮ್ ಜದ್ರಾನ್ ಅದ್ಭುತ ಶತಕವನ್ನು ಸಿಡಿಸಿದ್ದು ಅಫ್ಘಾನಿಸ್ತಾನದ ಪರವಾಗಿ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಜದ್ರಾನ್ ಆಸ್ಟ್ರೇಲಿಯಾ ವಿರುದ್ಧದ ಈ ಪಂದ್ಯದಲ್ಲಿ ಶತಕವನ್ನು ಬಾರಿಸುವ ಮೂಲಕ ವಿಶ್ವಕಪ್ ಟೂರ್ನಿಯಲ್ಲಿ ಅಫ್ಘಾನಿಸ್ತಾನ ತಂಡದ ಪರವಾಗಿ ಶತಕವನ್ನು ಸಿಡಿಸಿದ ಪ್ರಪ್ರಥಮ ಆಟಗಾರ ಎನಿಸಿಕೊಂಡಿದ್ದಾರೆ. ಪಂದ್ಯದ 44ನೇ ಓವರ್‌ನಲ್ಲಿ ಜೋಶ್ ಹೇಜಲ್‌ವುಡ್ ಎಸೆತದಲ್ಲಿ ಎರಡು ರನ್ ಪಡೆಯುವ ಮೂಲಕ ಜದ್ರಾನ್ ತಮ್ಮ ಶತಕವನ್ನು ಪೂರ್ಣಗೊಳಿಸಿದರು.

ಅಫ್ಘಾನಿಸ್ತಾನ ತಂಡಕ್ಕೆ ಜೊತೆಯಾಟದ ಅಗತ್ಯವಿದ್ದ ಸಂದರ್ಭದಲ್ಲಿ ಜದ್ರಾನ್ ಅವರಿಂದ ನಿರ್ಣಾಯಕ ಶತಕ ಮೂಡಿಬಂದಿದೆ. ಈ ಇನ್ನಿಂಗ್ಸ್ ಅಫ್ಘಾನಿಸ್ತಾನ ತಂಡಕ್ಕೆ ದೊಡ್ಡ ಬಲ ನೀಡಿದ್ದು ದೊಡ್ಡ ಮೊತ್ತವನ್ನು ಗಳಿಸಲು ಕಾರಣವಾಗಿದೆ. ಕೊನೆಯವರೆಗೂ ಕ್ರೀಸ್‌ನಲ್ಲಿ ನಿಂತು ಆಡಿದ ಜದ್ರಾನ್ ವಿಕೆಟ್ ಕಳೆದುಕೊಳ್ಳದೆ 129 ರನ್‌ಗಳನ್ನು ಗಳಿಸಿದರು. ಇದಕ್ಕಾಗಿ 143 ಎಸೆತಗಳನ್ನು ಬಳಸಿಕೊಂಡಿದ್ದಾರೆ. ಈ ಇನ್ನಿಂಗ್ಸ್‌ನಲ್ಲಿ 8 ಬೌಂಡರಿ ಹಾಗೂ 3 ಸಿಕ್ಸರ್‌ಗಳು ಬಾರಿಸಿದ್ದಾರೆ.
ಜದ್ರಾನ್ ಇತ್ತೀಚೆಗಷ್ಟೇ ಒಡಿಐ ಮಾದರಿಯಲ್ಲಿ ಅತ್ಯಣತ ವೇಗವಾಗಿ ಸಾವಿರ ರನ್ ಬಾರಿಸಿದ ಸಾಧನೆ ಮಾಡಿದ್ದರು. ಇದಕ್ಕೂ ಮುನ್ನ ಆರಂಭಿಕ ಜೊತೆಗಾರ ರಹ್ಮನುಲ್ಲಾ ಗುರ್ಬಾಜ್ 27 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದರು ಆದರೆ ಜದ್ರಾನ್ 24 ಇನ್ನಿಂಗ್ಸ್‌ಗಳಲ್ಲಿ ಈ ಮೈಲಿಗಲ್ಲು ದಾಟಿದ್ದರು.
ಇನ್ನಿ ಈ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡ ಟಾಸ್ ಗೆದ್ದು ಆರಂಭದಲ್ಲಿ ಬ್ಯಾಟಿಂಗ್ ನಡೆಸುವ ನಿರ್ಧಾರ ತೆಗೆದುಕೊಂಡಿತು. ಆಸ್ಟ್ರೇಲಿಯಾದ ಬೌಲಿಂಗ್ ದಾಳಿಯನ್ನು ಅದ್ಭುತವಾಗಿ ಎದುರಿಸಿದ ಅಫ್ಘಾನಿಸ್ತಾನ ತಂಡ ಜದ್ರಾನ್ ಅವರ ಅದ್ಭುತ ಶತಕದ ಜೊತೆಗೆ ಅಂತಿಮ ಹಂತದಲ್ಲಿ ರಶೀದ್ ಖಾನ್ ಅವರ ಸ್ಪೋಟಕ ಬ್ಯಾಟಿಂಗ್‌ನ ಕಾರಣದಿಂದಾಗಿ 291 ರನ್‌ಗಳನ್ನು ಗಳಿಸಿದೆ.
ಆಸ್ಟ್ರೇಲಿಯಾ: ಟ್ರಾವಿಸ್ ಹೆಡ್, ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಜೋಶ್ ಇಂಗ್ಲಿಸ್ (ವಾರ), ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಪ್ಯಾಟ್ ಕಮ್ಮಿನ್ಸ್ (ಸಿ), ಮಿಚೆಲ್ ಸ್ಟಾರ್ಕ್, ಆಡಮ್ ಝಂಪಾ, ಜೋಶ್ ಹ್ಯಾಜಲ್‌ವುಡ್
ಬೆಂಚ್: ಕ್ಯಾಮರೂನ್ ಗ್ರೀನ್, ಸೀನ್ ಅಬಾಟ್, ಅಲೆಕ್ಸ್ ಕ್ಯಾರಿ, ಸ್ಟೀವನ್ ಸ್ಮಿತ್
ಅಪ್ಘಾನಿಸ್ತಾನ: ರಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಜದ್ರಾನ್, ರಹಮತ್ ಶಾ, ಹಶ್ಮತುಲ್ಲಾ ಶಾಹಿದಿ (ಸಿ), ಅಜ್ಮತುಲ್ಲಾ ಒಮರ್ಜಾಯ್, ಮೊಹಮ್ಮದ್ ನಬಿ, ಇಕ್ರಮ್ ಅಲಿಖಿಲ್ (wk), ರಶೀದ್ ಖಾನ್, ಮುಜೀಬ್ ಉರ್ ರಹಮಾನ್, ನೂರ್ ಅಹ್ಮದ್, ನವೀನ್-ಉಲ್-ಹಕ್
ಬೆಂಚ್: ಫಜಲ್ಹಕ್ ಫಾರೂಕಿ, ನಜೀಬುಲ್ಲಾ ಜದ್ರಾನ್, ಅಬ್ದುಲ್ ರಹಮಾನ್, ರಿಯಾಜ್ ಹಸನ್