Glenn Maxwell: ಏಕದಿನ ಕ್ರಿಕೆಟ್ ಇತಿಹಾಸದಲ್ಲಿ 'ರನ್ ರಾಕ್ಷಸ ಗ್ಲೆನ್ ಮ್ಯಾಕ್ಸ್‌ವೆಲ್' ನಿರ್ಮಿಸಿದ ದಾಖಲೆಗಳು!
ಮಂಗಳವಾರ, ನವೆಂಬರ್ 7ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್‌ನ ಅಫ್ಘಾನಿಸ್ತಾನ ವಿರುದ್ಧದ ರೋಚಕ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಮೂರು ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು.
ಇದೇ ವೇಳೆ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟರ್ ಗ್ಲೆನ್ ಮ್ಯಾಕ್ಸ್‌ವೆಲ್ ಕ್ರಾಂಪ್ ನೋವಿನಿಂದ ಬಳಲಿದರು ಮತ್ತು ಏಕದಿನ ಕ್ರಿಕೆಟ್‌ನ ರನ್ ಚೇಸ್‌ನಲ್ಲಿ ದ್ವಿಶತಕ ಬಾರಿಸಿದ ಮೊದಲ ಬ್ಯಾಟರ್ ಎನಿಸಿಕೊಂಡರು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಅಫ್ಘಾನಿಸ್ತಾನ ತಂಡ ಇಬ್ರಾಹಿಂ ಝದ್ರಾನ್ ಅಜೇಯ 129 ರನ್‌ಗಳ ತಮ್ಮ ತಂಡದ ಮೊದಲ ಏಕದಿನ ವಿಶ್ವಕಪ್ ಶತಕದೊಂದಿಗೆ 5 ವಿಕೆಟ್‌ಗೆ 291 ರನ್ ಕಲೆಹಾಕಿತು.

292 ರನ್‌ಗಳ ಸವಾಲಿನ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ 91 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಜೊತೆಯಾದ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ನಾಯಕ ಪ್ಯಾಟ್ ಕಮ್ಮಿನ್ಸ್ ಮುರಿಯದ 8 ವಿಕೆಟ್‌ಗೆ 202 ಜೊತೆಯಾಟದ ಮೂಲಕ ಇನ್ನೂ 19 ಎಸೆತಗಳು ಬಾಕಿ ಇರುವಂತೆಯೇ ತಮ್ಮ ತಂಡಕ್ಕೆ ಅಮೋಘ ಗೆಲುವು ತಂದುಕೊಟ್ಟರು.
ಗ್ಲೆನ್ ಮ್ಯಾಕ್ಸ್‌ವೆಲ್ ತಮ್ಮ ಅದೃಷ್ಟದ ದಿನದಂದು ಅಫ್ಘಾನಿಸ್ತಾನ ತಂಡದ ಮೇಲೆ ಸವಾರಿ ಮಾಡಿದರು ಮತ್ತು ಸ್ನಾಯುಸೆಳೆತವು ವಿಕೆಟ್‌ಗಳ ನಡುವೆ ಓಡುವ ಸಾಮರ್ಥ್ಯವನ್ನು ತಡೆಯುವ ಮೊದಲು 76 ಎಸೆತಗಳಲ್ಲಿ ಶತಕ ಪೂರೈಸಿದರು. ಆದಾಗ್ಯೂ, ಆಲ್‌ರೌಂಡರ್ ಮೈದಾನದಿಂದ ಹೊರನಡೆಯಲು ನಿರಾಕರಿಸಿ, ಅದ್ಭುತ ಶಾಟ್‌ಗಳ ಮೂಲಕ ಏಕಾಂಗಿಯಾಗಿ ಹೋರಾಡಿ ಪಂದ್ಯವನ್ನು ಗೆಲ್ಲಿಸಿಕೊಟ್ಟರು.

ಗ್ಲೆನ್ ಮ್ಯಾಕ್ಸ್‌ವೆಲ್ ತಮ್ಮ ಸ್ಮರಣೀಯ ಇನ್ನಿಂಗ್ಸ್‌ನಲ್ಲಿ 128 ಎಸೆತಗಳನ್ನು ಎದುರಿಸಿ 21 ಬೌಂಡರಿಗಳು ಹಾಗೂ 10 ಭರ್ಜರಿ ಸಿಕ್ಸರ್‌ಗಳ ಸಮೇತ ಅಜೇಯ 201 ರನ್‌ಗಳ ಭರ್ಜರಿ ದ್ವಿಶತಕ ಸಿಡಿಸಿದರು. ಪ್ಯಾಟ್ ಕಮ್ಮಿನ್ಸ್ ಔಟಾಗದೆ 12 ರನ್ ಗಳಿಸಿದರು.
ಗ್ಲೆನ್ ಮ್ಯಾಕ್ಸ್‌ವೆಲ್ ಅವರು 2015ರಲ್ಲಿ ಡೇವಿಡ್ ವಾರ್ನರ್ ಅವರ 178 ರನ್‌ಗಳ ದಾಖಲೆಯನ್ನು ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಮುರಿದರು. ಇದು ಈ ಹಿಂದೆ ಏಕದಿನ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾದ ಬ್ಯಾಟರ್‌ನಿಂದ ಗರಿಷ್ಠ ಸ್ಕೋರ್ ಎನಿಸಿತ್ತು.
ಏಕದಿನ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ನಿರ್ಮಿಸಿದ ದಾಖಲೆಗಳ ಪಟ್ಟಿ ಇಲ್ಲದೆ.
ಏಕದಿನ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ಪರ ಗರಿಷ್ಠ ವೈಯಕ್ತಿಕ ಸ್ಕೋರ್
201 - ಗ್ಲೆನ್ ಮ್ಯಾಕ್ಸ್‌ವೆಲ್ vs ಅಫ್ಘಾನಿಸ್ತಾನ, ಮುಂಬೈ, 2023
185 - ಶೇನ್ ವ್ಯಾಟ್ಸನ್ vs ಬಾಂಗ್ಲಾದೇಶ, ಮೀರ್‌ಪುರ್, 2011
181 - ಮ್ಯಾಥ್ಯೂ ಹೇಡನ್ vs ನ್ಯೂಜಿಲೆಂಡ್, ಹ್ಯಾಮಿಲ್ಟನ್, 2007
179 - ಡೇವಿಡ್ ವಾರ್ನರ್ vs ಪಾಕಿಸ್ತಾನ, ಅಡಿಲೇಡ್, 2017
178 - ಡೇವಿಡ್ ವಾರ್ನರ್ vs ಅಫ್ಘಾನಿಸ್ತಾನ, ಪರ್ತ್, 2015
ಏಕದಿನ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳು
49 - ಕ್ರಿಸ್ ಗೇಲ್
45 - ರೋಹಿತ್ ಶರ್ಮಾ
43 - ಗ್ಲೆನ್ ಮ್ಯಾಕ್ಸ್‌ವೆಲ್
37 - ಎಬಿ ಡಿವಿಲಿಯರ್ಸ್
37 - ಡೇವಿಡ್ ವಾರ್ನರ್
ಏಕದಿನ ಕ್ರಿಕೆಟ್‌ನ ರನ್-ಚೇಸ್‌ನಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್
201 - ಗ್ಲೆನ್ ಮ್ಯಾಕ್ಸ್‌ವೆಲ್, ಮುಂಬೈ, 2023
193 - ಫಖರ್ ಜಮಾನ್, ಜೋಹಾನ್ಸ್‌ಬರ್ಗ್, 2021
185 - ಶೇನ್ ವ್ಯಾಟ್ಸನ್, ಮೀರ್‌ಪುರ್, 2011
183 - ಎಂಎಸ್ ಧೋನಿ, ಜೈಪುರ, 2005
183 - ವಿರಾಟ್ ಕೊಹ್ಲಿ, ಮೀರ್‌ಪುರ್, 2012
158 - ಆಂಡ್ರ್ಯೂ ಸ್ಟ್ರಾಸ್, ಬೆಂಗಳೂರು, 2011
ಏಕದಿನ ವಿಶ್ವಕಪ್‌ನಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್
237 - ಮಾರ್ಟಿನ್ ಗಪ್ಟಿಲ್, ವೆಲ್ಲಿಂಗ್ಟನ್, 2015
215 - ಕ್ರಿಸ್ ಗೇಲ್, ಕ್ಯಾನ್‌ಬೆರಾ, 2015
201 - ಗ್ಲೆನ್ ಮ್ಯಾಕ್ಸ್‌ವೆಲ್, ಮುಂಬೈ, 2023
188 - ಗ್ಯಾರಿ ಕರ್ಸ್ಟನ್, ರಾವಲ್ಪಿಂಡಿ, 1996
183 - ಸೌರವ್ ಗಂಗೂಲಿ, ಟೌಂಟನ್, 1999
ಏಕದಿನ ಪಂದ್ಯಗಳಲ್ಲಿ ಆರಂಭಿಕನಲ್ಲದ ಬ್ಯಾಟರ್‌ನಿಂದ ಅತ್ಯಧಿಕ ಸ್ಕೋರ್
201 - ಗ್ಲೆನ್ ಮ್ಯಾಕ್ಸ್‌ವೆಲ್, ಮುಂಬೈ, 2023
194 - ಚಾರ್ಲ್ಸ್ ಕೋವೆಂಟ್ರಿ, ಬುಲವಾಯೊ, 2009
189 - ವಿವಿಯನ್ ರಿಚರ್ಡ್ಸ್, ಮ್ಯಾಂಚೆಸ್ಟರ್, 1984
185 - ಫಾಫ್ ಡು ಪ್ಲೆಸಿಸ್, ಕೇಪ್ ಟೌನ್, 2017
181 - ವಿವಿಯನ್ ರಿಚರ್ಡ್ಸ್, ಕರಾಚಿ, 1987
ಏಕದಿನ ಪಂದ್ಯಗಳಲ್ಲಿ ವೇಗದ ದ್ವಿಶತಕ (ಎಸೆತಗಳಿಂದ)
126 - ಇಶಾನ್ ಕಿಶನ್ (ಭಾರತ) vs ಬಾಂಗ್ಲಾದೇಶ, ಚಟ್ಟೋಗ್ರಾಮ್, 2022
128 - ಗ್ಲೆನ್ ಮ್ಯಾಕ್ಸ್‌ವೆಲ್ (ಆಸ್ಟ್ರೇಲಿಯಾ) vs ಅಫ್ಘಾನಿಸ್ತಾನ, ಮುಂಬೈ, 2023
138 - ಕ್ರಿಸ್ ಗೇಲ್ (ವೆಸ್ಟ್ ಇಂಡೀಸ್) vs ಜಿಂಬಾಬ್ವೆ, ಕ್ಯಾನ್‌ಬೆರಾ, 2015
ವಿಶ್ವಕಪ್ ಇನ್ನಿಂಗ್ಸ್‌ನಲ್ಲಿ ವೈಯಕ್ತಿಕ ಅತಿ ಹೆಚ್ಚು ಸಿಕ್ಸರ್
17 - ಇಯಾನ್ ಮಾರ್ಗನ್, ಮ್ಯಾಂಚೆಸ್ಟರ್, 2019
16 - ಕ್ರಿಸ್ ಗೇಲ್, ಕ್ಯಾನ್‌ಬೆರಾ, 2015
11 - ಮಾರ್ಟಿನ್ ಗಪ್ಟಿಲ್, ವೆಲ್ಲಿಂಗ್ಟನ್, 2015
11 - ಫಖರ್ ಜಮಾನ್, ಬೆಂಗಳೂರು, 2023
10 - ಗ್ಲೆನ್ ಮ್ಯಾಕ್ಸ್‌ವೆಲ್, ಮುಂಬೈ, 2023
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications