For Quick Alerts
ALLOW NOTIFICATIONS  
For Daily Alerts
 

ಪಾಕ್ ವಿರುದ್ಧ ಆಸಿಸ್ ಗೆಲುವು: ವಾರ್ನರ್, ಮಾರ್ಶ್ ಆಟಕ್ಕೆ ತಲೆದೂಗಿದ ನಾಯಕ ಪ್ಯಾಟ್ ಕಮ್ಮಿನ್ಸ್

ಪಾಕಿಸ್ತಾನದ ವಿರುದ್ಧ ಆಸ್ಟ್ರೇಲಿಯಾ ತಂಡ ಭರ್ಜರಿ ಗೆಲುವು ಸಾಧಿಸಿದ್ದು ಟೂರ್ನಿಯಲ್ಲಿ ಸತತ ಎರಡನೇ ಗೆಲುವು ಸಾಧಿಸಿದೆ. ಆರಂಭಿಕ ಎರಡು ಪಂದ್ಯಗಳಲ್ಲಿ ಸೋಲು ಕಾಣುವ ಮೂಲಕ ಟೂರ್ನಿಯಲ್ಲಿ ಭಾರೀ ಹಿನ್ನಡೆ ಅನುಭವಿಸಿದ್ದ ಆಸಿಸ್ ತಂಡ ಸಾಕಷ್ಟು ಟೀಕೆಗೂ ಗುರಿಯಾಗಿತ್ತು. ಇದೀಗ ಕಮ್‌ಬ್ಯಾಕ್ ಮಾಡುವಲ್ಲಿ ಯಶಸ್ವಿಯಾಗಿರುವ ಆಸ್ಟ್ರೇಲಿಯಾ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದೆ.

ಪಾಕಿಸ್ತಾನ ತಂಡದ ವಿರುದ್ಧದ ಈ ಗೆಲುವಿನ ಬಳಿಕ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಮಾತನಾಡಿದ್ದು ತಂಡದ ಆರಂಭಿಕ ಆಟಗಾರರ ಬಗ್ಗೆ ಭಾರೀ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ. ಈ ಪಂದ್ಯದಲ್ಲಿ ಆಸಿಸ್ ತಂಡದ ಆರಂಭಿಕರಾದ ವಾರ್ನರ್ ಹಾಗೂ ಮಾರ್ಶ್ ಜೋಡಿ ಅಬ್ಬರದ ಪ್ರದರ್ಶನ ನೀಡಿದ್ದಾರೆ. ಮೊದಲ ವಿಕೆಟ್‌ಗೆ ಭರ್ಜರಿ 259 ರನ್‌ಗಳ ದಾಖಲೆಯ ಜೊತೆಯಾಟ ನೀಡಿದ ಈ ಜೋಡಿ ಆಸ್ಟ್ರೇಲಿಯಾ ತಂಡವನ್ನು 400+ ರನ್‌ಗಳತ್ತ ಹೆಜ್ಜೆಯಿಟ್ಟಿರುವುದು ಸ್ಪಷ್ಟವಾಗಿತ್ತು. ಆದರೆ ಈ ಜೋಡಿಯ ಬಳಿಕ ಉಳಿದ ಆಟಗಾರರಿಂದ ನಿರೀಕ್ಷಿತ ಪ್ರದರ್ಶನ ಬಾರದ ಕಾರಣ 367 ರನ್‌ಗಳಿಗೆ ಆಸ್ಟ್ರೇಲಿಯಾ ತಂಡ ಇನ್ನಿಂಗ್ಸ್ ಅಂತ್ಯಗೊಳಿಸಿತು.

Aus vs Pak: Australian skipper Pat Cummins praises David Warner and Mitchell Marsh

"ಇದೊಂದು ಅದ್ಭುತವಾದ ಗೆಲುವು. ಚಿನ್ನಸ್ವಾಮಿಯಲ್ಲಿ ಆಡುವುದು ಯಾವಾಗಲೂ ಕಠಿಣ. ಆದರೆ ಉತ್ತಮವಾದ ಗೆಲುವು ನಮ್ಮದಾಗಿದೆ. ಮಾರ್ಶ್ ಹಾಗೂ ವಾರ್ನರ್ ಈ ಪಂದ್ಯಕ್ಕೆ ಅದ್ಭುತವಾದ ಅಡಿಪಾಯ ಹಾಕಿಕೊಟ್ಟರು ಹಾಗೂ ನಾವು ನಮ್ಮ ಆಟವನ್ನು ಹೇಗೆ ಆಟಬೇಕೆಂದು ತೋರಿಸಿಕೊಟ್ಟರು" ಎಂದಿದ್ದಾರೆ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್.

ಆಸ್ಟ್ರೇಲಿಯಾದ ಆರಂಭಿಕರಾದ ಡೇವಿಡ್ ವಾರ್ನರ್ ಹಾಗೂ ಮಿಚೆಲ್ ಮಾರ್ಶ್ ಇಬ್ಬರು ಕೂಡ ಬೃಹತ್ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಪಂದ್ಯದ ಆರಂಭದಲ್ಲಿ ಜೀವದಾನ ಪಡೆದ ವಾರ್ನರ್ ಈ ಅವಕಾಶವನ್ನು ಅದ್ಭುತವಾಗಿ ಬಳಸಿಕೊಂಡರು. 124 ಎಸೆತಗಳನ್ನು ಎದುರಿಸಿದ ವಾರ್ನರ್ 163 ರನ್‌ಗಳನ್ನು ಬಾರಿಸಿದ್ದಾರೆ. ಇನ್ನು ಅವರಿಗೆ ಅಮೋಘವಾಗಿ ಸಾಥ್ ನೀಡಿದ ಮಾರ್ಶ್ 108 ಎಸೆತಗಳಲ್ಲಿ 121 ರನ್‌ಗಳನ್ನು ಬಾರಿಸಿದರು.

ತಂಡದ ಮೊತ್ತ 259 ರನ್‌ಗಳಾಗಿದ್ದಾಗ ಮಿಚಲ್ ಮಾರ್ಶ್ ಔಟ್ ಆಗುವ ಮೂಲಕ ಈ ಜೋಡಿ ಬೇರ್ಪಟ್ಟಿತು. ಅದಾದ ಬಳಿಕ ಗ್ಲೆನ್ ಮ್ಯಾಕ್ಸ್‌ವೆಲ್ ಮುಂದಿನ ಎಸೆತದಲ್ಲಿಉಏ ಔಟ್ ಆಗುವ ಮೂಲಕ ಪಾಕ್ ತಂಡಕ್ಕೆ ಮತ್ತೊಂದು ಮೇಲುಗೈ ದೊರೆಯಿತು. ಅದಾದ ಬಳಿಕ ಪಾಕಿಸ್ತಾನದ ಬೌಲರ್‌ಗಳು ಆಸ್ಟ್ರೇಲಿಯಾದ ವಿರುದ್ಧ ಉತ್ತಮವಾಗಿ ಮೇಲುಗೈ ಸಾಧಿಸಿದರು. ಡೇವಿಡ್ ವಾರ್ನರ್ 163 ರನ್‌ಗಳಿಗೆ ವಿಕೆಟ್ ಕಳೆದುಕೊಂಡ ನಂತರ ಪಾಕಿಸ್ತಾನ ತಂಡದ ಬೌಲಿಂಗ್ ವಿಭಾಗ ಮೇಲುಗೈ ಸಾಧಿಸಿತು.

ಆಸ್ಟ್ರೇಲಿಯಾ ನೀಡಿದ 368 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ ತಂಡ ಅದ್ಭುತ ಆರಂಭವನ್ನು ಪಡೆದುಕೊಂಡಿತು. ಮೊದಲ ವಿಕೆಟ್‌ಗೆ 134ನ್‌ಗಳ ಭರ್ಜರಿ ಆರಂಭವನ್ನು ಪಡೆದ ಪಾಕಿಸ್ತಾನ ದಿಟ್ಟವಾಗಿ ರನ್ ಬೆನ್ನಟ್ಟುವ ಮುನ್ಸೂಚನೆ ನೀಡಿತ್ತು. ಆದರೆ ಮಧ್ಯಮ ಕ್ರಮಾಂಕದಿಂದ ನಿರೀಕ್ಷಿರ ಬೆಂಬಲ ದೊರೆಯದ ಕಾರಣ 305 ರನ್‌ಗಳಿಗೆ ಪಾಕ್ ಆಲೌಟ್ ಆಗುವ ಮೂಲಕ ಸೋಲು ಅನುಭವಿಸಿದೆ.

Story first published: Friday, October 20, 2023, 23:45 [IST]
Other articles published on Oct 20, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+