For Quick Alerts
ALLOW NOTIFICATIONS  
For Daily Alerts
 

AUS vs PAK: ಪರ್ತ್‌ನಲ್ಲಿ ಬೌನ್ಸ್‌, ವೇಗ ಪಾಕ್‌ ಬ್ಯಾಟರ್‌ಗಳಿಗೆ ರಿಯಲ್ ಟೆಸ್ಟ್‌

ಆಸ್ಟ್ರೇಲಿಯಾ ಪ್ರವಾಸವನ್ನು ಪಾಕಿಸ್ತಾನ ಬೆಳೆಸಿದೆ. ಈ ವೇಳೆ ಆತಿಥೇಯರ ವಿರುದ್ಧ ಪಾಕ್‌ ಮೂರು ಟೆಸ್ಟ್‌ ಪಂದ್ಯಗಳ ಸರಣಿಯನ್ನು ಆಡಲಿದ್ದು, ಈ ಸರಣಿಯತ್ತ ಎಲ್ಲರ ಚಿತ್ತ ನೆಟ್ಟಿದೆ. ಈ ಸರಣಿಯ ಮೊದಲ ಪಂದ್ಯ ಡಿಸೆಂಬರ್ 14 ರಿಂದ ಆರಂಭವಾಗಲಿದೆ. ಪರ್ತ್‌ನ ಆಪ್ಟಸ್‌ ಮೈದಾನ ಮೊದಲ ಟೆಸ್ಟ್‌ಗೆ ವೇದಿಕೆ ಕಲ್ಪಿಸಲಿದೆ.

ಆಪ್ಟಸ್ ಸ್ಟೇಡಿಯಂನ ಬೌನ್ಸ್ ಮತ್ತು ವೇಗದ ಬೌಲರ್‌ಗಳಿಗೆ ಸಹಾಯಕವಾಗಲಿದ್ದು, ನಿಜಕ್ಕೂ ಪಾಕಿಸ್ತಾನ ತಂಡದ ಬ್ಯಾಟಿಂಗ್‌ ಟೆಸ್ಟ್‌ ನಡೆಯಲಿದೆ. ನಾಯಕ ಪ್ಯಾಟ್ ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯಾದ ವೇಗದ ದಾಳಿಯು ಪಾಕಿಸ್ತಾನದ ಬ್ಯಾಟ್ಸ್‌ಮನ್‌ಗಳ ಮೇಲೆ ಒತ್ತಡ ಹೇರಲು ಪ್ರಯತ್ನಿಸುವುದು ಖಚಿತ.

AUS vs PAK: Bounce in Perth, real test for pace Pak batters

ಹೇಗಿದೆ ಪರ್ತ್‌ ಪಿಚ್

ಪರ್ತ್ ಪಿಚ್ ಬಗ್ಗೆ ಹೆಡ್ ಕ್ಯುರೇಟರ್ ಐಸಾಕ್ ಮೆಕ್ ಡೊನಾಲ್ಡ್ ನುಡಿದಿರುವ ಭವಿಷ್ಯ ಪಾಕಿಸ್ತಾನ ತಂಡದಲ್ಲಿ ಭಯ ಹುಟ್ಟಿಸಿದೆ. ಪಿಚ್‌ ಮೇಲೆ ಅಲಲ್ಲಿ ಹುಲ್ಲು ಕಾಣಿಸಿಕೊಳ್ಳುತ್ತದೆ. ಬೌನ್ಸ್‌ ಹಾಗೂ ವೇಗ ಬೌಲರ್‌ಗಳಿಗೆ ನೆರವು ನೀಡಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಈ ಪಿಚ್‌ನಲ್ಲಿ ವೇಗದ ಬೌಲರ್ ಗಳು ಮೇಲುಗೈ ಸಾಧಿಸಲಿದ್ದಾರೆ.

ಆಸ್ಟ್ರೇಲಿಯದ ವೇಗದ ಬೌಲಿಂಗ್ ದಾಳಿ ಕಮ್ಮಿನ್ಸ್, ಸ್ಟಾರ್ಕ್ ಮತ್ತು ಹೇಜಲ್‌ವುಡ್‌ರಂತಹ ಅನುಭವಿ ಆಟಗಾರರನ್ನು ಹೊಂದಿದ್ದು, ಪಾಕ್ ತಂಡದಲ್ಲಿ ಅನುಭವಿ ವೇಗದ ಬೌಲರ್‌ಗಳಾದ ಶಾಹೀನ್ ಅಫ್ರಿದಿ ಮತ್ತು ಹಸನ್ ಅಲಿ ಮಾತ್ರ ಇದ್ದಾರೆ. ಕೊನೆ ಕ್ಷಣದಲ್ಲಿ ಹ್ಯಾರಿಸ್ ರೌಫ್ ತಂಡದಿಂದ ಹಿಂದೆ ಸರಿದ ಕಾರಣ, ಪಾಕಿಸ್ತಾನ ತಂಡದ ಬೌಲಿಂಗ್ ವಿಭಾಗಕ್ಕೆ ಪೆಟ್ಟು ಬಿದ್ದಿದೆ.

ಆಸ್ಟ್ರೇಲಿಯಾದಲ್ಲಿ ಪಾಕಿಸ್ತಾನದ ಟೆಸ್ಟ್ ದಾಖಲೆ ತುಂಬಾ ಕೆಟ್ಟದಾಗಿದೆ. ಇಲ್ಲಿಯವರೆಗೆ, ಆಸ್ಟ್ರೇಲಿಯಾದಲ್ಲಿ ಉಭಯ ದೇಶಗಳ ನಡುವೆ 37 ಟೆಸ್ಟ್‌ಗಳು ನಡೆದಿವೆ, ಇದರಲ್ಲಿ ಪಾಕಿಸ್ತಾನ ಕೇವಲ 4 ಮತ್ತು ಆಸ್ಟ್ರೇಲಿಯಾ 26 ಗೆದ್ದಿದೆ. ಏಳು ಟೆಸ್ಟ್‌ಗಳು ಡ್ರಾದಲ್ಲಿ ಕೊನೆಗೊಂಡಿವೆ.

AUS vs PAK: Bounce in Perth, real test for pace Pak batters

ದಾಖಲೆಯ ಮೇಲೆ ಪ್ಲೇಯರ್ಸ್ ಕಣ್ಣು

ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್, ನಾಥನ್ ಲಿಯಾನ್ ಮತ್ತು ಪಾಕಿಸ್ತಾನದ ಬಾಬರ್ ಅಜಮ್ ವಿಶೇಷ ಸಾಧನೆಯ ಹೊಸ್ತಿಲಲ್ಲಿ ನಿಂತಿದ್ದಾರೆ. ಭರ್ಜರಿ ಫಾರ್ಮ್‌ನಲ್ಲಿರುವ ಹೆಡ್, ಪ್ರಸ್ತುತ 3000 ಟೆಸ್ಟ್ ರನ್‌ಗಳನ್ನು ಗಳಿಸಲು 96 ರನ್‌ಗಳ ಅವಶ್ಯಕತೆ ಇದೆ. ಪರ್ತ್ ಸ್ಟೇಡಿಯಂನಲ್ಲಿ ಕಳೆದ ಐದು ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ ಹೆಡ್ ಮೂರು ಅರ್ಧಶತಕಗಳನ್ನು ಗಳಿಸಿದ್ದಾರೆ.

ಲಿಯಾನ್ ಈ ಪಂದ್ಯದಲ್ಲಿ ನಾಲ್ಕು ವಿಕೆಟ್‌ಗಳನ್ನು ಪಡೆಯುವ ಮೂಲಕ 500 ಟೆಸ್ಟ್ ವಿಕೆಟ್‌ಗಳ ಗಡಿಯನ್ನು ಮುಟ್ಟಬಹುದು. ಆಫ್ ಸ್ಪಿನ್ನರ್ ಇದುವರೆಗೆ 122 ಟೆಸ್ಟ್‌ಗಳಲ್ಲಿ 496 ವಿಕೆಟ್‌ಗಳನ್ನು ಪಡೆದಿದ್ದಾರೆ. ಪರ್ತ್‌ನಲ್ಲಿ ನಡೆದ ಟೆಸ್ಟ್‌ನಲ್ಲಿ, ಲಿಯಾನ್ ಇದುವರೆಗೆ 22 ವಿಕೆಟ್‌ಗಳನ್ನು ಪಡೆದಿದ್ದಾರೆ.

ಪಾಕಿಸ್ತಾನದ ಬಾಬರ್ ಅಜಮ್ ಅವರ ಟೆಸ್ಟ್ ವೃತ್ತಿಜೀವನದ 50 ನೇ ಪಂದ್ಯವಾಗಿದೆ. ಪ್ರಸ್ತುತ ಪಾಕಿಸ್ತಾನ ತಂಡದ ಅತ್ಯುತ್ತಮ ಬ್ಯಾಟ್ಸ್‌ಮನ್ ಎಂದು ಪರಿಗಣಿಸಲ್ಪಟ್ಟಿರುವ ಬಾಬರ್ ಅವರು ತಮ್ಮ ಈ ಪಂದ್ಯವನ್ನು ಸ್ಮರಣೀಯವಾಗಿಸುವ ನಿಟ್ಟಿನಲ್ಲಿ ಚಿತ್ತ ನೆಟ್ಟಿದ್ದಾರೆ.

Story first published: Wednesday, December 13, 2023, 13:04 [IST]
Other articles published on Dec 13, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+