AUS vs PAK: ಶೇನ್ ವಾರ್ನ್ ನೆನಪಿಗಾಗಿ ಬಾಕ್ಸಿಂಗ್ ಡೇ ಟೆಸ್ಟ್
ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಖ್ಯಾತ ಸ್ಪಿನ್ ಬೌಲರ್ ಶೇನ್ ವಾರ್ನ್.. ಇವರ ನೆನಪಿಗಾಗಿ ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವೆ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ನಡೆಯಲಿದೆ.
ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಮತ್ತು ಶೇನ್ ವಾರ್ನ್ ಲೆಗಸಿ (ಎಸ್‌ಡಬ್ಲ್ಯೂಎಲ್) ಸಹ ಲೆಜೆಂಡರಿ ಸ್ಪಿನ್ನರ್ ನೆನಪಿಗಾಗಿ ಟೆಸ್ಟ್ ಪಂದ್ಯದ ಮೊದಲ 4 ದಿನ ಅಭಿಮಾನಿಗಳಿಗೆ ಉಚಿತ ಹೃದಯ ಪರೀಕ್ಷೆಯನ್ನು ಆಯೋಜಿಸಲಿದೆ. ಡಿಸೆಂಬರ್ 12 ಮಂಗಳವಾರದಂದು ಕ್ರಿಕೆಟ್ ಆಸ್ಟ್ರೇಲಿಯಾ ತನ್ನ ವೆಬ್‌ಸೈಟ್‌ನಲ್ಲಿ ಈ ಮಾಹಿತಿಯನ್ನು ನೀಡಿದೆ.
ಈ ವರ್ಷದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಡಿಸೆಂಬರ್ 26 ರಿಂದ 30 ರವರೆಗೆ ನಡೆಯಲಿದೆ. ಆಸ್ಟ್ರೇಲಿಯಾದ ದಂತಕಥೆ ಸ್ಪಿನ್ನರ್ ವಾರ್ನ್ ತಮ್ಮ 52ನೇ ವಯಸ್ಸಿನಲ್ಲಿ ಮಾರ್ಚ್ 2022 ರಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರು.

ಉಚಿತ ಹೃದಯ ಪರೀಕ್ಷೆಗಾಗಿ, ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ (MCG) ಸುತ್ತಮುತ್ತ 23 ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಅಲ್ಲಿ ಜನರು ನಾಲ್ಕು ನಿಮಿಷಗಳ ಪರೀಕ್ಷೆಗೆ ಒಳ ಪಡಬೇಕು. ಕ್ರಿಕೆಟ್ ಆಸ್ಟ್ರೇಲಿಯಾ ಮತ್ತು ಶೇನ್ ವಾರ್ನ್ ಲೆಗಸಿ (SWL) ಈ ಕಾರ್ಯಕ್ರಮವು ಹೃದಯದ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ.
ಮೆಲ್ಬೋರ್ನ್ ಪಂದ್ಯದ ವೇಳೆ ಫ್ಲಾಪಿ ಟೋಪಿ ಧರಿಸಿ ವಾರ್ನ್‌ಗೆ ಗೌರವ ಸಲ್ಲಿಸುವಂತೆ ಮಂಡಳಿಯು ಅಭಿಮಾನಿಗಳಿಗೆ ಮನವಿ ಮಾಡಿದೆ. ಕಳೆದ ವರ್ಷವೂ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾದ ಆಟಗಾರರು ರಾಷ್ಟ್ರಗೀತೆಯ ವೇಳೆ ಫ್ಲಾಪಿ ಟೋಪಿಗಳನ್ನು ಧರಿಸಿ ವಾರ್ನ್‌ಗೆ ಗೌರವ ಸಲ್ಲಿಸಿದ್ದರು.
ಸ್ಪಿನ್ ದಿಗ್ಗಜ
ಶೇನ್ ವಾರ್ನ್ ಟೆಸ್ಟ್ ಕ್ರಿಕೆಟ್‌ನಲ್ಲಿ 600 ಮತ್ತು 700 ವಿಕೆಟ್‌ಗಳ ಮೈಲಿಗಲ್ಲನ್ನು ತಲುಪಿದ ವಿಶ್ವದ ಮೊದಲ ಬೌಲರ್. ಅವರು 2005 ರಲ್ಲಿ ಇಂಗ್ಲೆಂಡ್ ವಿರುದ್ಧದ ಓಲ್ಡ್ ಟ್ರಾಫರ್ಡ್ ಟೆಸ್ಟ್‌ನಲ್ಲಿ 600 ವಿಕೆಟ್‌ಗಳನ್ನು ಪೂರೈಸಿದರು. 2006ರಲ್ಲಿ ಇಂಗ್ಲೆಂಡ್ ವಿರುದ್ಧ ಮೆಲ್ಬೋರ್ನ್‌ನಲ್ಲಿ ವಾರ್ನ್ 700 ವಿಕೆಟ್‌ಗಳ ಗಡಿ ದಾಟಿದ್ದರು.

ನಂತರ ಶ್ರೀಲಂಕಾದ ದಿಗ್ಗಜ ಆಫ್ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಅವರ ದಾಖಲೆಯನ್ನು ಮುರಿದರು. ಮುರಳಿ 800 ವಿಕೆಟ್ ಕಬಳಿಸಿದ್ದಾರೆ. ವಾರ್ನ್ ಬಳಿಕ ಗರಿಷ್ಠ ವಿಕೆಟ್ ಪಡೆದ ಸ್ಪಿನ್ ಬೌಲರ್ ಎಂಬ ಖ್ಯಾತಿ ಭಾರತದ ಅನಿಲ್ ಕುಂಬ್ಳೆ ಅವರಿಗೆ ಸಲ್ಲುತ್ತದೆ.
ಶೇನ್ ವಾರ್ನ್ ಏಕದಿನ ಕ್ರಿಕೆಟ್‌ನಲ್ಲೂ ಅತ್ಯಂತ ಪರಿಣಾಮಕಾರಿ ಬೌಲರ್. 1999 ರ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾವನ್ನು ಚಾಂಪಿಯನ್ ಮಾಡುವಲ್ಲಿ ವಾರ್ನ್ ಪ್ರಮುಖ ಪಾತ್ರ ವಹಿಸಿದ್ದರು. ಈ ಪಂದ್ಯಾವಳಿಯಲ್ಲಿ ಆಸ್ಟ್ರೇಲಿಯಾದ ಎರಡು ಪ್ರಮುಖ ಪಂದ್ಯಗಳಾದ ದಕ್ಷಿಣ ಆಫ್ರಿಕಾ ವಿರುದ್ಧದ ಸೆಮಿಫೈನಲ್ ಮತ್ತು ಪಾಕಿಸ್ತಾನ ವಿರುದ್ಧದ ಫೈನಲ್ ಪಂದ್ಯದಲ್ಲಿ ಪಂದ್ಯ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದಿದ್ದರು.
ಶೇನ್ ವಾರ್ನ್ ತಮ್ಮ 23 ನೇ ವಯಸ್ಸಿನಲ್ಲಿ ಭಾರತ ವಿರುದ್ಧ 1992 ಸಿಡ್ನಿ ಟೆಸ್ಟ್‌ನಲ್ಲಿ ತಮ್ಮ ಅಂತಾರಾಷ್ಟ್ರೀಯ ಪದಾರ್ಪಣೆ ಮಾಡಿದರು. ಅವರು ಜನವರಿ 2007 ರಲ್ಲಿ ಸಿಡ್ನಿಯಲ್ಲಿ ಇಂಗ್ಲೆಂಡ್ ವಿರುದ್ಧ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದರು.
ಚಾಂಪಿಯನ್ ನಾಯಕ
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪ್ರಸ್ತುತ ವಿಶ್ವದ ಅತಿದೊಡ್ಡ ಲೀಗ್ ಆಗಿದೆ. ಶೇನ್ ವಾರ್ನ್ ಐಪಿಎಲ್ ಪ್ರಶಸ್ತಿ ಗೆದ್ದ ಮೊದಲ ನಾಯಕರಾದರು. 2008 ರಲ್ಲಿ, ಅವರ ನಾಯಕತ್ವದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಪ್ರಶಸ್ತಿ ಎತ್ತಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications