For Quick Alerts
ALLOW NOTIFICATIONS  
For Daily Alerts
 

AUS vs PAK: ಪಾಕಿಸ್ತಾನ ವಿರುದ್ಧ ಭರ್ಜರಿ ಶತಕ; ವಿರಾಟ್ ಕೊಹ್ಲಿಯ ಅಪರೂಪದ ದಾಖಲೆ ಸರಿಗಟ್ಟಿದ ಡೇವಿಡ್ ವಾರ್ನರ್

ಶುಕ್ರವಾರ, ಅಕ್ಟೋಬರ್ 20ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಆಸ್ಟ್ರೇಲಿಯಾ ತಂಡದ ಆರಂಭಿಕ ಆಟಗಾರರು ಅಬ್ಬರಿಸಿದರು.

ತಮ್ಮ ನಾಲ್ಕನೇ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನದ ನಾಯಕ ಬಾಬರ್ ಅಜಂ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡಿದರು. ಆಸ್ಟ್ರೇಲಿಯಾದ ಇಬ್ಬರೂ ಆರಂಭಿಕರು ಆಕ್ರಮಣಕಾರಿ ಪ್ರದರ್ಶನ ನೀಡಿದರು. ಆದರೆ, ನಂತರದ ಬ್ಯಾಟರ್‌ಗಳು ವಿಫಲರಾದರು.

AUS vs PAK: David Warner Hits Century Against Pakistan And Equals Virat Kohlis This Rare Record

ಆಸ್ಟ್ರೇಲಿಯಾ ತಂಡ ಡೇವಿಡ್ ವಾರ್ನರ್ ಮತ್ತು ಮಿಚೆಲ್ ಮಾರ್ಷ್ ಅವರ ಅಮೋಘ ಶತಕದ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 367 ರನ್‌ಗಳನ್ನು ಕಲೆಹಾಕಿದೆ.

ಆಸ್ಟ್ರೇಲಿಯಾದ ಆರಂಭಿಕ ಜೋಡಿಯಾದ ಡೇವಿಡ್ ವಾರ್ನರ್ ಮತ್ತು ಮಿಚೆಲ್ ಮಾರ್ಷ್ ಅವರು ಪಾಕಿಸ್ತಾನದ ಬೌಲಿಂಗ್ ದಾಳಿಯನ್ನು ಮನಬಂದಂತೆ ದಂಡಿಸಿದರು. ಈ ಜೋಡಿ ಮೊದಲ ವಿಕೆಟ್‌ಗೆ 33.5 ಓವರ್‌ಗಳಲ್ಲಿ 259 ರನ್‌ಗಳ ಜೊತೆಯಾಟ ನಿರ್ಮಿಸಿ ಬೃಹತ್ ಮೊತ್ತಕ್ಕೆ ಮುನ್ನುಡಿ ಬರೆದರು.

ಆಸ್ಟ್ರೇಲಿಯಾ ತಂಡದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಅವರು 2023ರ ವಿಶ್ವಕಪ್‌ನಲ್ಲಿ ತಮ್ಮ ಮೊದಲ ಶತಕ ಮತ್ತು ಒಟ್ಟಾರೆ 21ನೇ ಏಕದಿನ ಶತಕವನ್ನು ಗಳಿಸಿದ ಕಾರಣ ಏಕದಿನ ಪಂದ್ಯಗಳಲ್ಲಿ ಪಾಕಿಸ್ತಾನಕ್ಕೆ ದುಸ್ವಪ್ನವಾಗುವುದನ್ನು ಮುಂದುವರೆಸಿದರು.

AUS vs PAK: David Warner Hits Century Against Pakistan And Equals Virat Kohlis This Rare Record

ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಡೇವಿಡ್ ವಾರ್ನರ್ ಅವರು ತಮ್ಮ 21ನೇ ಏಕದಿನ ಶತಕವನ್ನು ದಾಖಲಿಸುವ ವೇಳೆ ಪಡೆದ ಜೀವದಾನವು ಅವರಿಗೆ ವರವಾಗಿ ಪರಿಣಮಿಸಿತು. ಪಾಕಿಸ್ತಾನದ ಬೌಲಿಂಗ್ ದಾಳಿ ಲಘುವಾಗಿ ಕೆಲಸ ಮಾಡಿದ ಕಾರಣ, ಡೇವಿಡ್ ವಾರ್ನರ್ ಕೇವಲ 85 ಎಸೆತಗಳಲ್ಲಿ ಶತಕ ಗಳಿಸಿದರು.

ಇದು ಡೇವಿಡ್ ವಾರ್ನರ್ ತಮ್ಮ 5ನೇ ವಿಶ್ವಕಪ್ ಶತಕ ಮತ್ತು ಪಾಕಿಸ್ತಾನದ ವಿರುದ್ಧ ಏಕದಿನದಲ್ಲಿ ಅವರ ಸತತ ನಾಲ್ಕನೇ ಶತಕವಾಗಿದೆ. ಇದು 2017ರಲ್ಲಿ ಪ್ರಾರಂಭವಾದ ಶತಕದ ಸರಣಿ ಮುಂದುವರೆದಿದೆ.

ಡೇವಿಡ್ ವಾರ್ನರ್ ಏಕದಿನ ಕ್ರಿಕೆಟ್ ಸ್ವರೂಪದ ಇತಿಹಾಸದಲ್ಲಿ ಒಂದೇ ಎದುರಾಳಿಯ ವಿರುದ್ಧ ಸತತ 4 ಶತಕಗಳನ್ನು ಗಳಿಸಿದ ವಿಶ್ವದ ಎರಡನೇ ಬ್ಯಾಟರ್ ಎನಿಸಿಕೊಂಡರು.

ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ 2017-18ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಈ ಸಾಧನೆ ಮಾಡಿದರು. ಕೆರಿಬಿಯನ್ನರ ವಿರುದ್ಧ ಸತತ 4 ಏಕದಿನ ಶತಕಗಳನ್ನು ಬಾರಿಸಿದ್ದಾರೆ.

ಪಾಕಿಸ್ತಾನ ವಿರುದ್ಧ ಡೇವಿಡ್ ವಾರ್ನರ್ ಶತಕ

2017ರಲ್ಲಿ ಸಿಡ್ನಿಯಲ್ಲಿ 130 ರನ್
2017ರಲ್ಲಿ ಅಡಿಲೇಡ್‌ನಲ್ಲಿ 179 ರನ್
2019ರಲ್ಲಿ ಟೌಂಟನ್‌ನಲ್ಲಿ 107 ರನ್
2023ರಲ್ಲಿ ಬೆಂಗಳೂರಿನಲ್ಲಿ 163 ರನ್

ಮಿಚೆಲ್ ಮಾರ್ಷ್ 108 ಎಸೆತಗಳಲ್ಲಿ 10 ಬೌಂಡರಿ ಹಾಗೂ 9 ಸಿಕ್ಸರ್‌ಗಳ ಮೂಲಕ 121 ರನ್ ಗಳಿಸಿದ್ದ ಮಿಚೆಲ್ ಮಾರ್ಷ್ ವಿಕೆಟ್ ಒಪ್ಪಿಸಿದರೆ, ಡೇವಿಡ್ ವಾರ್ನರ್ 129 ಎಸೆತಗಳಲ್ಲಿ 14 ಬೌಂಡರಿ ಮತ್ತು 9 ಸಿಕ್ಸರ್‌ಗಳ ಸಮೇತ 163 ರನ್‌ ಬಾರಿಸಿ ಹ್ಯಾರಿಸ್ ರೌಫ್‌ಗೆ ವಿಕೆಟ್ ನೀಡಿದರು.

ಡೇವಿಡ್ ವಾರ್ನರ್ ಅವರು ನಿರ್ದಯವಾಗಿ ಉಸ್ಮಾನ್ ಮಿರ್ ನೀಡಿದ ಜೀವದಾನವನ್ನು ಸಂಪೂರ್ಣವಾಗಿ ಬಳಸಿಕೊಂಡರು, ಎಲ್ಲ ಬಾಲ್‌ಗಳನ್ನು ಸ್ಟ್ಯಾಂಡ್‌ಗೆ ಕಳುಹಿಸಿದರು.

ಗಮನಾರ್ಹವಾಗಿ, ಮಿಚೆಲ್ ಮಾರ್ಷ್ ತಮ್ಮ ಜನ್ಮದಿನವನ್ನು ಶತಕದೊಂದಿಗೆ ಆಚರಿಸಿದರು. ಏಕದಿನ ಕ್ರಿಕೆಟ್‌ನಲ್ಲಿ ಹೀಗೆ ಮಾಡಿದ ಮೊದಲ ಆಸ್ಟ್ರೇಲಿಯಾ ಬ್ಯಾಟರ್ ಆಗಿದ್ದಾರೆ.

ಮಿಚೆಲ್ ಮಾರ್ಷ್ ಮತ್ತು ಡೇವಿಡ್ ವಾರ್ನರ್ ಅವರು ಏಕದಿನ ವಿಶ್ವಕಪ್ ಪಂದ್ಯದ ಒಂದೇ ಇನ್ನಿಂಗ್ಸ್‌ನಲ್ಲಿ ತಲಾ ಶತಕ ಗಳಿಸಿದ ಆಸ್ಟ್ರೇಲಿಯಾದ ಆರಂಭಿಕರ ಮೊದಲ ಜೋಡಿ ಎನಿಸಿದರು.

Story first published: Friday, October 20, 2023, 18:49 [IST]
Other articles published on Oct 20, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+