Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

AUS vs PAK: ಬಾಕ್ಸಿಂಗ್‌ ಡೆ ಟೆಸ್ಟ್‌ಗೆ ಖುರ್ರಂ ಶಹಜಾದ್ ಅಲಭ್ಯ

ಗಾಯದಿಂದ ಬಳಲುತ್ತಿರುವ ಪಾಕಿಸ್ತಾನದ ವೇಗದ ಬೌಲರ್‌ ಖುರ್ರಂ ಶಹಜಾದ್ ಎರಡನೇ ಟೆಸ್ಟ್‌ನಲ್ಲಿ ಆಡುವುದಿಲ್ಲ.

ಆಸ್ಟ್ರೇಲಿಯಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕೂ ಮುನ್ನ ಪಾಕಿಸ್ತಾನ ಕ್ರಿಕೆಟ್ ತಂಡ ಭಾರೀ ಹಿನ್ನಡೆ ಅನುಭವಿಸಿದೆ. ವೇಗದ ಬೌಲರ್ ಖುರ್ರಂ ಶಹಜಾದ್ ಗಾಯದ ಸಮಸ್ಯೆಯಿಂದಾಗಿ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ ಎಂದು ಪಾಕಿಸ್ತಾನ ಕ್ರಿಕೆಟ್‌ ಬೋರ್ಡ್‌ ತಿಳಿಸಿದೆ.

AUS vs PAK: Khurram Shahzad ruled out for Boxing Day Test

ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ನಡುವಿನ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಆಸ್ಟ್ರೇಲಿಯಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕೂ ಮುನ್ನ ಪಾಕಿಸ್ತಾನ ತಂಡಕ್ಕೆ ಭಾರೀ ಹಿನ್ನಡೆ ಆಗಿದೆ. ವೇಗದ ಬೌಲರ್ ಖುರ್ರಂ ಶೆಹಜಾದ್ ಗಾಯದ ಸಮಸ್ಯೆಯಿಂದಾಗಿ ಪ್ರಸಕ್ತ ಸರಣಿಯಿಂದ ಹೊರಗುಳಿದಿದ್ದಾರೆ. ವೇಗದ ಬೌಲರ್ ತನ್ನ ಪಕ್ಕೆಲುಬುಗಳಲ್ಲಿ ಗಾಯ ಕಾಣಿಸಿಕೊಂಡ ಪರಿಣಾಮ ಇವರು ತಂಡದಿಂದ ಹೊರ ನಡೆಯಬೇಕಾಯಿತು. ಇವರಿಗೆ ನಿರಂತರವಾಗಿ ಸ್ನಾಯು ಸೆಳೆತ ಕಾಡುತ್ತಿದೆ.

ಶೆಹಜಾದ್ ಸರಣಿಯಿಂದ ನಿರ್ಗಮಿಸಿರುವುದನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಖಚಿತಪಡಿಸಿದೆ. ಪಿಸಿಬಿ ತನ್ನ ವೆಬ್‌ಸೈಟ್‌ನಲ್ಲಿ ಶೆಹಜಾದ್ ಗಾಯಗೊಂಡಿರುವುದನ್ನು ದೃಢಪಡಿಸಿದೆ. ಪರ್ತ್ ಟೆಸ್ಟ್‌ನಲ್ಲಿ ಶಹಜಾದ್ ಅವರ ಬೌಲಿಂಗ್‌ನಿಂದ ಸಾಕಷ್ಟು ಪ್ರಭಾವ ಬೀರಿದ್ದರು. ಎರಡು ಇನ್ನಿಂಗ್ಸ್‌ಗಳಲ್ಲಿ ಸ್ಟೀವ್ ಸ್ಮಿತ್ ಅವರನ್ನು ಇವರೇ ಔಟ್ ಮಾಡಿದ್ದರು. ಅಲ್ಲದೆ ಅವರು ಐದು ವಿಕೆಟ್‌ಗಳನ್ನು ಪಡೆದಿದ್ದರು.
ಖುರ್ರಂ ಶಹಜಾದ್ ಆಸ್ಟ್ರೇಲಿಯಾದಲ್ಲಿ ವೈದ್ಯರನ್ನು ಭೇಟಿ ಮಾಡಿದ್ದಾರೆ. ನಂತರ ಅವರು ಲಾಹೋರ್‌ನಲ್ಲಿರುವ ಎನ್‌ಸಿಎಗೆ ಹಿಂತಿರುಗುತ್ತಾರೆ. ತವರಿಗೆ ಮರಳಿದ ಬಳಿಕ ಖುರ್ರಂ ಶಹಜಾದ್ ಚಿಕಿತ್ಸೆ ಪಡೆಯಲಿದ್ದು, ಪುನರ್ವಸತಿ ಕ್ಯಾಂಪ್‌ನಲ್ಲಿ ಬೆವರು ಹರಿಸಲಿದ್ದಾರೆ ಎಂದು ಪಿಸಿಬಿ ಹೊರಡಿಸಿದ ಹೇಳಿಕೆ ತಿಳಿಸಿದೆ.

ಶಹಜಾದ್ ಗಾಯಗೊಂಡಿರುವುದು ಪಾಕಿಸ್ತಾನದ ಚಿಂತೆಯನ್ನು ಹೆಚ್ಚಿಸಿದೆ. ಬಹಳ ದಿನಗಳಿಂದ ಗಾಯದಿಂದ ಚೇತರಿಸಿಕೊಳ್ಳದ ನಸೀಮ್ ಶಾ ಅವರ ಅನುಪಸ್ಥಿತಿ ತಂಡಕ್ಕೆ ಬಹುವಾಗಿ ಕಾಡುತ್ತಿದೆ. ಅಬ್ರಾರ್ ಅಹ್ಮದ್ ಅವರಿಗೂ ಗಾಯ ಕಾಣಿಸಿಕೊಂಡಿದ್ದು, ಪರ್ತ್ ಟೆಸ್ಟ್‌ನಿಂದ ಹೊರಗುಳಿದಿದ್ದರು. ಇನ್ನುಳಿದ ಸರಣಿಯಲ್ಲಿ ಸ್ಪಿನ್ನರ್‌ಗೆ ಆಡುವುದು ಕೂಡ ಕಷ್ಟ.

AUS vs PAK: Khurram Shahzad ruled out for Boxing Day Test

ಶಹಜಾದ್‌ಗೆ ಪರ್ಯಾಯವಾಗಿ ಪಾಕಿಸ್ತಾನವು ಮೊಹಮ್ಮದ್ ವಾಸಿಂ ಜೂನಿಯರ್ ಮತ್ತು ಹಸನ್ ಅಲಿಯನ್ನು ತಂಡದಲ್ಲಿ ಹೊಂದಿದೆ. ಪ್ರಸ್ತುತ ಸರಣಿಯಲ್ಲಿ ಪಾಕಿಸ್ತಾನ 0-1 ಅಂತರದಲ್ಲಿ ಹಿನ್ನಡೆಯಲ್ಲಿದೆ. ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಪಾಕಿಸ್ತಾನ 360 ರನ್‌ಗಳ ಹೀನಾಯ ಸೋಲನ್ನು ಎದುರಿಸಬೇಕಾಯಿತು.

ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ಬೌಲರ್‌ಗಳನ್ನು ಕಟ್ಟಿ ಹಾಕುವಲ್ಲಿ ವಿಫಲರಾಗಿದ್ದರು. ಪಾಕ್‌ ಮೊದಲ ಇನಿಂಗ್ಸ್‌ನಲ್ಲಿ ಅಮರ್ ಜಮಾಲ್ 111 ರನ್‌ ನೀಡಿ ಆರು ವಿಕೆಟ್ ಪಡೆದಿದ್ದಾರೆ. ಎರಡನೇ ಇನ್ನಿಂಗ್ಸ್‌ನಲ್ಲಿ ಶಹಜಾದ್‌ ಪಾಕ್‌ ಪರ ಹೆಚ್ಚು ವಿಕೆಟ್‌ ಪಡೆದ ಬೌಲರ್‌. ಇವರು ಎರಡನೇ ಇನಿಂಗ್ಸ್‌ನಲ್ಲಿ ಮೂರು ವಿಕೆಟ್‌ ಪಡೆದಿದ್ದಾರೆ.

AUS vs PAK: Khurram Shahzad ruled out for Boxing Day Test

ಆಸ್ಟ್ರೇಲಿಯಾದ ಬೌನ್ಸ್‌ ಹಾಗೂ ವೇಗದ ಪಿಚ್‌ಗಳ ಲಾಭ ಪಡೆಯುವಲ್ಲಿ ಪಾಕ್ ವೇಗದ ಬೌಲರ್‌ಗಳು ಪರದಾಡುತ್ತಿದ್ದು, ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್‌ಗಳಿಗೆ ರನ್‌ಗಳನ್ನು ನೀಡಿ ಕೈ ಸುಟ್ಟುಕೊಂಡಿದ್ದಾರೆ.

Story first published: Thursday, December 21, 2023, 13:57 [IST]
Other articles published on Dec 21, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+