Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

AUS vs PAK TEST: ಆಸೀಸ್‌ 318ಕ್ಕೆ ಆಲೌಟ್‌, ಪಾಕ್‌ ವೇಗಿಗಳ ಅಬ್ಬರ

ಆಸ್ಟ್ರೇಲಿಯ ಹಾಗೂ ಪಾಕಿಸ್ತಾನ ನಡುವಣ ಮೂರನೇ ಪಂದ್ಯಗಳ ಸರಣಿಯ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಆಸೀಸ್‌ 318 ರನ್‌ಗಳಿಗೆ ಆಲೌಟ್ ಆಗಿದೆ.

ಮೊದಲ ದಿನ ಆಸ್ಟ್ರೇಲಿಯಾ ಪರವಾಗಿದ್ದರೆ, ಎರಡನೇ ದಿನದಾಟವನ್ನು ಪಾಕ್ ತನ್ನದಾಗಿಸಿಕೊಂಡಿದೆ. ಆಸೀಸ್‌ ಮೊದಲ ಇನ್ನಿಂಗ್ಸ್‌ನಲ್ಲಿ 3 ವಿಕೆಟ್‌ಗೆ 187 ರನ್‌ಗಳಿಂದ ಆಟ ಮುಂದುವರಿಸಿ, 318 ರನ್‌ ಗಳಿಸಿ ಆಲೌಟ್ ಆಯಿತು.

AUS vs PAK TEST: Aussies All Out for 318, Pak Pacers Rock

ಆಸ್ಟ್ರೇಲಿಯಾ 4 ವಿಕೆಟ್‌ಗೆ 250 ರನ್ ಆಗಿತ್ತು. ಆದರೆ ಪಾಕಿಸ್ತಾನಿ ಬೌಲರ್‌ಗಳು ಭರ್ಜರಿ ಕಮ್ ಬ್ಯಾಕ್‌ ಮಾಡಿದರು. ಮತ್ತು ಕೊನೆಯ 6 ವಿಕೆಟ್‌ಗಳನ್ನು ಆಸ್ಟ್ರೇಲಿಯಾ ಕೇವಲ 68 ರನ್‌ಗಳನ್ನು ಅಷ್ಟೇ ಸೀಮಿತವಾಯಿತು.

ಆಸ್ಟ್ರೇಲಿಯಾದ ಕೆಳ ಕ್ರಮಾಂಕವು ಪಾಕಿಸ್ತಾನದ ಬೌಲರ್‌ಗಳನ್ನು ಎದುರಿಸಲು ಸಾಧ್ಯವಾಗಲಿಲ್ಲ. ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಅಲೆಕ್ಸ್ ಕ್ಯಾರಿ ಮತ್ತೊಮ್ಮೆ ವಿಫಲರಾದರು. ಆಸ್ಟ್ರೇಲಿಯ ಪರ ಮಾರ್ನಸ್ ಲಂಬುಶೇನ್ 63 ರನ್ ಗಳಿಸಿದರು. ಆದರೆ ಮಿಚೆಲ್ ಮಾರ್ಷ್ 6 ಬೌಂಡರಿ ಮತ್ತು ಒಂದು ಸಿಕ್ಸರ್ ನೆರವಿನಿಂದ 41 ರನ್ ಗಳಿಸಿದರು. ಮಿಚೆಲ್ ಸ್ಟಾರ್ಕ್ 09 ರನ್, ನಾಯಕ ಪ್ಯಾಟ್ ಕಮಿನ್ಸ್ 13 ಮತ್ತು ನಾಥನ್ ಲಿಯಾನ್ 08 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು.

ವೇಗದ ಬೌಲರ್ ಅಮೀರ್ ಜಮಾಲ್ ಪಾಕಿಸ್ತಾನದ ಪರ ಯಶಸ್ವಿಯಾದರು. ಅಮೀರ್ ಗರಿಷ್ಠ ಮೂರು ವಿಕೆಟ್ ಪಡೆದರು. ಅವರು ಮಾರ್ನಸ್ ಲಂಬುಶೇನ್, ಸ್ಟೀವ್ ಸ್ಮಿತ್ ಮತ್ತು ಪ್ಯಾಟ್ ಕಮ್ಮಿನ್ಸ್ ಅವರನ್ನು ಔಟ್ ಮಾಡಿದರು.

AUS vs PAK TEST: Aussies All Out for 318, Pak Pacers Rock

ಶಾಹೀನ್ ಶಾ ಆಫ್ರಿದಿ ಟ್ರಾವಿಸ್ ಹೆಡ್ ಮತ್ತು ಅಲೆಕ್ಸ್ ಕ್ಯಾರಿ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು. ಮಿರ್ ಹಮ್ಜಾ ಮತ್ತು ಹಸನ್ ಅಲಿ ತಲಾ ಎರಡು ವಿಕೆಟ್ ಪಡೆದರು. ಸಲ್ಮಾನ್ ಅಘಾ ಒಂದು ವಿಕೆಟ್ ಪಡೆದರು.

ಮೊದಲ ಟೆಸ್ಟ್‌ನಲ್ಲಿ ಪಾಕಿಸ್ತಾನ ತಂಡ ಹೀನಾಯವಾಗಿ ಸೋತಿತ್ತು. ಮೊದಲ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ 360 ರನ್‌ಗಳ ಬೃಹತ್ ಜಯ ದಾಖಲಿಸಿತ್ತು. ಪಾಕ್ ಈ ಸರಣಿಯನ್ನು ಜೀವಂತವಾಗಿ ಇಟ್ಟುಕೊಳ್ಳಬೇಕಾದರೆ, ಈ ಪಂದ್ಯದಲ್ಲಿ ಗೆಲುವು ಅನಿವಾರ್ಯ.

Story first published: Wednesday, December 27, 2023, 9:45 [IST]
Other articles published on Dec 27, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+