ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಪ್ಯಾಟ್ ಕಮಿನ್ಸ್ ಮಾರಕ ಬೌಲಿಂಗ್, ಪಾಕ್ ಬ್ಯಾಟರ್ ತತ್ತರ
ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಸ್ಟಾರ್ ಬೌಲರ್‌ಗಳು ಕರಾರುವಕ್ ದಾಳಿ ನಡೆಸಿ ಪ್ರವಾಸಿ ಪಾಕಿಸ್ತಾನ ಬ್ಯಾಟರ್‌ಗಳನ್ನು ಕಾಡಿದ್ದಾರೆ. ಆಸೀಸ್ ನಾಯಕ ಪ್ಯಾಟ್ ಕಮಿನ್ಸ್ ಅಬ್ಬರದ ಬೌಲಿಂಗ್ ನಡೆಸಿ ತಂಡಕ್ಕೆ ನೆರವಾಗಿದ್ದಾರೆ.
ಬುಧವಾರ ನಡೆದ ಏರಡನೇ ದಿನದಾಟದಲ್ಲಿ ಆಸೀಸ್ 3 ವಿಕೆಟ್‌ಗೆ 187 ರನ್ ಗಳಿಗೆ ಆಟ ಮುಂದುವರಿಸಿ 318 ರನ್‌ಗಳಿಗೆ ಆಲೌಟ್ ಆಯಿತು. ಆತಿಥೇಯ ತಂಡದ ಪರ ಮಾರ್ನಸ್ ಲಂಬುಶೇನ್ 63, ಮಿಚೆಲ್ ಮಾರ್ಷ 41, ಪ್ಯಾಟ್ ಕಮಿನ್ಸ್ 13 ರನ್ ಬಾರಿಸಿ ತಂಡಕ್ಕೆ ಆಧಾರವಾದರು.

ಪಾಕ್ ಪರ ಅಮೀರ್ ಜಮಲ್ ಮೂರು ವಿಕೆಟ್ ಕಬಳಿಸಿದರೆ, ಶಾಹೀನ್ ಶಾ ಅಫ್ರಿದಿ, ಮಿರ್ ಹಮ್ಜಾ, ಹಸನ್ ಅಲಿ ತಲಾ ಎರಡು ವಿಕೆಟ್ ಪಡೆದರು.
ಕಳಪೆ ಆರಂಭ
ಮೊದಲ ಇನ್ನಿಂಗ್ಸ್ ಆರಂಭಿಸಿದ ಪಾಕ್ ತಂಡದ ಆರಂಭ ಕಳಪೆ ಆಗಿತ್ತು. ಆರಂಭಿಕ ಇಮಾಮ್ ಉಲ್ ಹಕ್ 10 ರನ್‌ಗಳಿಗೆ ಆಟ ಮುಗಿಸಿತು. ಎರಡನೇ ವಿಕೆಟ್‌ಗೆ ಅಬ್ದುಲ್ ಶಫಿಕ್ ಹಾಗೂ ಶಾನ್ ಮಸೂದ್ 90 ರನ್ ಗಳ ಜೊತೆಯಾಟದ ಕಾಣಿಕೆ ನೀಡಿ ಕೊಂಚ ಆಸೀಸ್ ಬೌಲರ್ ಗಳನ್ನು ಕಾಡಿದರು. ಆರಂಭಿಕ ಅಬ್ದುಲ್ 5 ಬೌಂಡರಿ ಸೇರಿದಂತೆ 62, ಶಾನ್ ಮಸೂದ್ 54 ರನ್ ಸಿಡಿಸಿದ್ದು ಬಿಟ್ಟರೆ, ಉಳಿದ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು.

ಆಸೀಸ್ ಪರ ನಾಯಕ ಪ್ಯಾಟ್ ಕಮಿನ್ಸ್ 14 ಓವರ್ ಬೌಲಿಂಗ್ ಮಾಡಿ 37 ರನ್ ನೀಡಿ ಮೂರು ವಿಕೆಟ್ ಪಡೆದರು. ಸ್ಪಿನ್ನರ್ ನಥನ್ ಲಿಯಾನ್ 2 ವಿಕೆಟ್ ಉರುಳಿಸಿದರು.
ಪಾಕಿಸ್ತಾನ ದಿನದಾಟದಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 194 ರನ್ ಸೇರಿಸಿದೆ. ಇನ್ನಿಂಗ್ಸ್ ಮುನ್ನಡೆ ಸಾಧಿಸಲು ಪಾಕ್ ತಂಡಕ್ಕೆ ಇನ್ನು 124 ರನ್ ಅವಶ್ಯಕತೆ ಇದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications