Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

AUS vs SA 1st Test: ಮೊದಲ ಟೆಸ್ಟ್‌ನಿಂದ ಆಸೀಸ್ ಸ್ಟಾರ್ ಬೌಲರ್ ಔಟ್; ಪ್ಯಾಟ್ ಕಮ್ಮಿನ್ಸ್ ವಾಪಸಾತಿ?

AUS vs SA: Josh Hazlewood Ruled Out of 1st Test Against South Africa; Pat Cummins Will Play

ಡಿಸೆಂಬರ್ 17ರಿಂದ ಬ್ರಿಸ್ಬೇನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಆಸ್ಟ್ರೇಲಿಯಾದ ಮೊದಲ ಟೆಸ್ಟ್‌ ಪಂದ್ಯದಿಂದ ಗಾಯಗೊಂಡಿರುವ ಸ್ಟಾರ್ ವೇಗಿ ಜೋಶ್ ಹ್ಯಾಜಲ್‌ವುಡ್ ಅವರು ಹೊರಗುಳಿಯಲಿದ್ದಾರೆ. ಇನ್ನು ಆಸೀಸ್ ನಾಯಕ ಪ್ಯಾಟ್ ಕಮ್ಮಿನ್ಸ್ ತಂಡಕ್ಕೆ ಮರಳುವ ಸಾಧ್ಯತೆ ಇದೆ.

ಸೈಡ್ ಸ್ಟ್ರೈನ್ ಗಾಯಕ್ಕೆ ತುತ್ತಾಗಿರುವ ಜೋಶ್ ಹ್ಯಾಜಲ್‌ವುಡ್, ವೆಸ್ಟ್ ಇಂಡೀಸ್ ವಿರುದ್ಧ ಅಡಿಲೇಡ್‌ನಲ್ಲಿ ಮುಕ್ತಾಯವಾದ ಎರಡನೇ ಟೆಸ್ಟ್‌ನಿಂದ ತಪ್ಪಿಸಿಕೊಂಡಿದ್ದರು ಮತ್ತು 14 ಸದಸ್ಯರ ತಂಡದಿಂದ ಹೊರಗುಳಿದಿದ್ದರು.

ಇನ್ನು ತೊಡೆ ಗಾಯದ ಸಮಸ್ಯೆಯಿಂದ ಅಡಿಲೇಡ್‌ನಲ್ಲಿ 419 ರನ್‌ಗಳ ಗೆಲುವಿನ ನಂತರ ಹೊರಗುಳಿದ ನಾಯಕ ಪ್ಯಾಟ್ ಕಮ್ಮಿನ್ಸ್ ತಂಡಕ್ಕೆ ಮರಳಲು ಸಿದ್ಧರಾಗಿದ್ದಾರೆ. ಅಂದರೆ ಸ್ಕಾಟ್ ಬೋಲ್ಯಾಂಡ್ ಅಥವಾ ಮೈಕೆಲ್ ನೆಸರ್ ಇಬ್ಬರೂ ಕೆರಿಬಿಯನ್ ತಂಡದ ವಿರುದ್ಧ ಟೆಸ್ಟ್ ಪಂದ್ಯಕ್ಕೆ ಹಿಂದಿರುಗುವಲ್ಲಿ ಪ್ರಭಾವಶಾಲಿ ಪ್ರದರ್ಶನ ನೀಡಿದ್ದರೂ ಸಹ ಸ್ಥಾನ ವಂಚಿತರಾಗಿದ್ದಾರೆ.

ಅನ್‌ಕ್ಯಾಪ್ಡ್ ವೇಗದ ಬೌಲರ್ ಲ್ಯಾನ್ಸ್ ಮೋರಿಸ್ ವೈಲ್ಡ್‌ಕಾರ್ಡ್ ಮೂಲಕ ಆಯ್ಕೆಯಾಗಿ ದಕ್ಷಿಣ ಆಫ್ರಿಕಾ ವಿರುದ್ಧದ 14 ಆಟಗಾರರ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

AUS vs SA: Josh Hazlewood Ruled Out of 1st Test Against South Africa; Pat Cummins Will Play

"ಪ್ಯಾಟ್ ಕಮ್ಮಿನ್ಸ್ ಬಹುಬೇಗ ಚೇತರಿಸಿಕೊಳ್ಳುತ್ತಿದ್ದಾರೆ, ಶನಿವಾರದಂದು ಪೂರ್ಣ ಸಾಮರ್ಥ್ಯದೊಂದಿಗೆ ಬೌಲಿಂಗ್ ಮಾಡಿದರು. ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನು ಆಡುವ ಸಾಧ್ಯತೆಯಿದೆ. ಆದರೂ ಜೋಶ್ ಹ್ಯಾಜಲ್‌ವುಡ್‌ಗೆ ಚೇತರಿಸಕೊಳ್ಳಲು ಹೆಚ್ಚಿನ ಸಮಯ ಬೇಕಾಗುತ್ತದೆ," ಎಂದು ಮುಖ್ಯ ಆಯ್ಕೆಗಾರ ಜಾರ್ಜ್ ಬೈಲಿ ಹೇಳಿದರು.

"ಜೋಶ್ ಹ್ಯಾಜಲ್‌ವುಡ್‌ ಗಾಯವನ್ನು ಗಮನದಲ್ಲಿಟ್ಟುಕೊಂಡು, ನಾವು ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಕ್ಕಾಗಿ ಮೈಕೆಲ್ ನೆಸರ್ ಮತ್ತು ಲ್ಯಾನ್ಸ್ ಮಾರಿಸ್ ಅವರನ್ನು ತಂಡದಲ್ಲಿ ಉಳಿಸಿಕೊಂಡಿದ್ದೇವೆ. ಸ್ಕಾಟ್‌ ಬೋಲ್ಯಾಂಡ್‌ನಂತೆ ಮೈಕೆಲ್ ನೆಸರ್ ಅಡಿಲೇಡ್‌ನಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡಿದರು," ಎಂದು ಜಾರ್ಜ್ ಬೈಲಿ ತಿಳಿಸಿದರು.

"ಈ ಹಿಂದೆ ಅವರ ಪ್ರದರ್ಶನಗಳಿಂದ ನಾವು ಯಾವಾಗಲೂ ಪ್ರಭಾವಿತರಾಗಿದ್ದೇವೆ. ಲ್ಯಾನ್ಸ್ ಮಾರಿಸ್ ಆಸೀಸ್ ಕೆಲವು ಸಮಯದಿಂದ ತಂಡದೊಂದಿಗಿದ್ದು, ಅವರಿಂದ ಪ್ರಯೋಜನ ಪಡೆಯುವ ನಿರೀಕ್ಷೆಯಿದೆ".

ವೆಸ್ಟ್ ಇಂಡೀಸ್ ತಂಡವನ್ನು ಎರಡು ಟೆಸ್ಟ್ ಪಂದ್ಯಗಳಲ್ಲಿ ಕ್ರಮವಾಗಿ 164 ರನ್‌ಗಳು ಮತ್ತು 419 ರನ್‌ಗಳಿಂದ ಸೋಲಿಸಿದ ಆಸ್ಟ್ರೇಲಿಯಾ ಶುಕ್ರವಾರದಿಂದ ಹರಿಣಗಳ ವಿರುದ್ಧದ ಮೂರು ಟೆಸ್ಟ್‌ಗಳಲ್ಲಿ ಅತ್ಯುತ್ತಮ ಫಾರ್ಮ್‌ನೊಂದಿಗೆ ಆಡಲಿದೆ.

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ಗೆ ಆಸ್ಟ್ರೇಲಿಯಾ ತಂಡ
ಡೇವಿಡ್ ವಾರ್ನರ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಸ್ಚಾಗ್ನೆ, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ, ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಸ್ಕಾಟ್ ಬೋಲ್ಯಾಂಡ್, ಮೈಕಲ್ ನೆಸರ್, ಮಾರ್ಕಸ್ ಹ್ಯಾರಿಸ್, ಲ್ಯಾನ್ಸ್ ಮೋರಿಸ್.

Story first published: Monday, December 12, 2022, 12:34 [IST]
Other articles published on Dec 12, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+