For Quick Alerts
ALLOW NOTIFICATIONS  
For Daily Alerts
 

ಶ್ರೀಲಂಕಾ ವಿರುದ್ಧ ಮೊದಲ ಟಿ20ಗೂ ಮುನ್ನವೇ ಆಸಿಸ್‌ಗೆ ಆಘಾತ: ಗಾಯಗೊಂಡ ಬೌಲರ್ ಸೀನ್ ಅಬಾಟ್ ಔಟ್

Sean abbott

ಶ್ರೀಲಂಕಾ ಪ್ರವಾಸದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡಕ್ಕೆ ಮೊದಲ ಟಿ20ಗೂ ಮುನ್ನವೇ ಆಘಾತಗೊಂಡಿದೆ. ಆಸಿಸ್ ಯುವ ವೇಗಿ ಸೀನ್ ಅಬಾಟ್‌ ಬೆರಳು ಮುರಿತಕ್ಕೊಳಗಾಗಿ ಇಡೀ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ.

ನೆಟ್ಸ್ ಪ್ರಾಕ್ಟೀಸ್ ವೇಳೆಯಲ್ಲಿ ಚೆಂಡು ತಾಗಿದರ ಪರಿಣಾಮವಾಗಿ ಸೀನ್ ಅಬಾಟ್‌ ಎಡಗೈ ತೋರು ಬೆರಳು ಮುರಿದಿದೆ. ಹೀಗಾಗಿ ಮಂಗಳವಾರದಿಂದ (ಜೂ.07) ಆರಂಭಗೊಂಡ ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಅಬಾಟ್ ಅಲಭ್ಯರಾಗಿದ್ದಾರೆ.

ಆಸ್ಟ್ರೇಲಿಯಾ ಪರ ವೈಟ್‌ಬಾಲ್ ಕ್ರಿಕೆಟ್‌ನ ಎರಡೂ ಫಾರ್ಮೆಟ್‌ಗೆ ಆಡುವ ಅಬಾಟ್ ಕಳೆದ ಪಾಕಿಸ್ತಾನ ವಿರುದ್ಧದ ಟಿ20 ಸರಣಿಯಲ್ಲಿ ತಂಡದಲ್ಲಿ ಕಾಣಿಸಿಕೊಂಡಿದ್ದರು. 30 ವರ್ಷದ ಈ ಬೌಲರ್‌ ಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಆದ್ರೆ ಅಭ್ಯಾಸದ ವೇಳೆ ಅಚಾತುರ್ಯದಿಂದಾಗಿ ಗಾಯಗೊಂಡಿ ತಂಡದಿಂದ ಹೊರಬಿದ್ದಿದ್ದಾರೆ.

ಆದ್ರೆ ಟಿ20 ತಂಡದಲ್ಲಿ ಅಬಾಟ್ ಅವರ ಸ್ಥಾನಕ್ಕೆ ಇನ್ನೂ ಯಾವುದೇ ಬದಲಿ ಆಟಗಾರನನ್ನ ಹೆಸರಿಸಲಾಗಿಲ್ಲ. ಝೈ ರಿಚರ್ಡ್‌ಸನ್ ಮೀಸಲು ವೇಗದ ಬೌಲರ್ ಆಗಿದ್ದು, ಅಗತ್ಯವಿದ್ದರೆ ಆಯ್ಕೆದಾರರು A ತಂಡದಿಂದ ಆಟಗಾರರನ್ನು ಸಹ ಕರೆಯಬಹುದು.

ಕ್ವೀನ್ಸ್‌ಲ್ಯಾಂಡ್‌ನ ಜಿಮ್ಮಿ ಪೀರ್ಸನ್ ಅವರನ್ನು ಪೀಟರ್ ಹ್ಯಾಂಡ್ಸ್‌ಕಾಂಬ್ ಬದಲಿಗೆ ಎ ತಂಡಕ್ಕೆ ಕರೆಯಲಾಗಿದೆ. ಮುಂದಿನ ವಾರ ಎ ತಂಡದ ಆರಂಭಿಕ ನಾಲ್ಕು ದಿನಗಳ ಪಂದ್ಯದಲ್ಲಿ ಆಡುವ ಉದ್ದೇಶದಿಂದ ಆಶಸ್ ತಾರೆ ಸ್ಕಾಟ್ ಬೋಲ್ಯಾಂಡ್ ನಿರೀಕ್ಷೆಗಿಂತ ಬೇಗ ಶ್ರೀಲಂಕಾಕ್ಕೆ ಹೋಗಲಿದ್ದಾರೆ ಎಂದು ಆಸ್ಟ್ರೇಲಿಯಾ ತಂಡದ ಮ್ಯಾನೇಜ್‌ಮೆಂಟ್ ಖಚಿತಪಡಿಸಿದೆ.

ಕೊಲಂಬೊದಾ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊದಲ ಟಿ20 ಪಂದ್ಯದಲ್ಲಿ ಟಾಸ್‌ ಗೆದ್ದ ಆಸ್ಟ್ರೇಲಿಯಾ ಮೊದಲು ಬೌಲಿಂಗ್ ಆಯ್ದುಕೊಂಡಿದ್ದು, ಶ್ರೀಲಂಕಾಗೆ ಬ್ಯಾಟಿಂಗ್ ಆಹ್ವಾನಿಸಿದೆ. ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್ ಮತ್ತು ಬೆಂಚ್ ಈ ಕೆಳಗಿದೆ.

ಶ್ರೀಲಂಕಾ ಪ್ಲೇಯಿಂಗ್ ಇಲೆವೆನ್
ದನುಷ್ಕ ಗುಣತಿಲಕ, ಪಾತುಮ್ ನಿಸ್ಸಾಂಕ, ಚರಿತ್ ಅಸಲಂಕ, ಕುಸಲ್ ಮೆಂಡಿಸ್ (ವಿಕೆಟ್ ಕೀಪರ್), ಭಾನುಕಾ ರಾಜಪಕ್ಸೆ, ದಸುನ್ ಶನಕ (ನಾಯಕ), ವನಿಂದು ಹಸರಂಗ, ಚಾಮಿಕ ಕರುಣಾರತ್ನೆ, ದುಷ್ಮಂತ ಚಮೀರ, ಮಹೀಶ್ ತೀಕ್ಷಣ, ನುವಾನ್ ತುಷಾರ

ಬೆಂಚ್: ರಮೇಶ್ ಮೆಂಡಿಸ್, ಲಹಿರು ಮಧುಶಂಕ, ಕಸುನ್ ರಜಿತ, ಲಕ್ಷಣ ಸಂದಕನ್, ಪ್ರವೀಣ್ ಜಯವಿಕ್ರಮ, ನುವಾನಿಡು ಫೆರ್ನಾಂಡೋ, ಮತೀಶ ಪತಿರಣ

ಆಸ್ಟ್ರೇಲಿಯಾ ಪ್ಲೇಯಿಂಗ್ ಇಲೆವೆನ್
ಆರನ್ ಫಿಂಚ್ (ನಾಯಕ), ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಸ್ಟೀವನ್ ಸ್ಮಿತ್, ಮಾರ್ಕಸ್ ಸ್ಟೊಯಿನಿಸ್, ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್), ಆಷ್ಟನ್ ಅಗರ್, ಮಿಚೆಲ್ ಸ್ಟಾರ್ಕ್, ಕೇನ್ ರಿಚರ್ಡ್ಸನ್, ಜೋಶ್ ಹೇಜಲ್‌ವುಡ್‌

ಬೆಂಚ್: ಸೀನ್ ಅಬಾಟ್, ಜ್ಯೆ ರಿಚರ್ಡ್ಸನ್, ಮಿಚೆಲ್ ಸ್ವೆಪ್ಸನ್, ಜೋಶ್ ಇಂಗ್ಲಿಸ್

ಆಸ್ಟ್ರೇಲಿಯಾ ವರ್ಸಸ್ ಶ್ರೀಲಂಕಾ ಮೊದಲ ಟಿ20 ಪಂದ್ಯದ ಲೈವ್‌ ಸ್ಕೋರ್ ಈ ಕೆಳಗಿದೆ

1
53762

Story first published: Tuesday, June 7, 2022, 19:41 [IST]
Other articles published on Jun 7, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+