
ಆಸ್ಟ್ರೇಲಿಯಾ ನೆಲದಲ್ಲಿ ಮುಗ್ಗರಿಸಿದ್ದ ಶ್ರೀಲಂಕಾ
ಇನ್ನು ಶ್ರೀಲಂಕಾ ತಂಡವು ಚುಟುಕು ಕ್ರಿಕೆಟ್‌ನಲ್ಲಿ ಅತ್ಯಂತ ಸಾಧಾರಣ ಪ್ರದರ್ಶನ ನೀಡಿದ್ದು, ಟಿ20 ಸರಣಿಯನ್ನ ಗೆದ್ದಿರುವ ಉದಾಹರಣೆ ತುಂಬಾ ಕಡಿಮೆ. ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ 4-1 ಅಂತರದಲ್ಲಿ ಶ್ರೀಲಂಕಾ ತಂಡವು ಮುಗ್ಗರಿಸಿತು. ಇದರ ಜೊತೆಗೆ ಟೀಂ ಇಂಡಿಯಾ ವಿರುದ್ಧದ ಟಿ20 ಸರಣಿಯಲ್ಲಿ 3-0 ಅಂತರದಲ್ಲಿ ಶ್ರೀಲಂಕಾ ಹೀನಾಯ ಸೋಲನ್ನ ಅನುಭವಿಸಿತು.
ಹೀಗಾಗಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ದ ಸಂಪೂರ್ಣ ಉತ್ತಮ ದರ್ಜೆಯ ಕ್ರಿಕೆಟ್ ಆಡಿದ್ರೆ ಮಾತ್ರ ಶ್ರೀಲಂಕಾ ತಂಡವು ಆಸ್ಟ್ರೇಲಿಯಾ ವಿರುದ್ಧ ಗೆಲುವು ಸಾಧಿಸಿಲು ಸಾಧ್ಯವಾಗುತ್ತದೆ.

ಪಿಚ್ ರಿಪೋರ್ಟ್
ಕೊಲಂಬೊದ ಆರ್. ಪ್ರೇಮದಾಸ ಸ್ಟೇಡಿಯಂನ ಪಿಚ್ ಬೌಲರ್‌ಗಳಿಗೆ ಸಾಕಷ್ಟು ನೆರವಾಗುವ ಉದಾಹರಣೆ ಹೆಚ್ಚಿದೆ. ಈ ಪಿಚ್‌ನಲ್ಲಿ ಕೊನೆಯ ಓವರ್‌ಗಳಲ್ಲಿ ಬ್ಯಾಟರ್‌ಗಳು ಹೆಣಗಾಡಿರುವ ಉದಾಹರಣೆ ಹೆಚ್ಚಿದೆ. ಆದರೂ ಕೂಡ 160 ಕ್ಕಿಂತ ಹೆಚ್ಚು ಮೊತ್ತದ ಸವಾಲಿನ ನಿರೀಕ್ಷೆ ಇದೆ.
ಇನ್ನು ಕಳೆದ ಐದು ಪಂದ್ಯಗಳನ್ನ ಗಮನಿಸಿದ್ರೆ, ಚೇಸಿಂಗ್ ಮಾಡಿರುವ ತಂಡವು ನಾಲ್ಕು ಪಂದ್ಯಗಳಲ್ಲಿ ಗೆಲುವು ಸಾಧಿಸಿರುವುದರಿಂದ, ಟಾಸ್ ಗೆದ್ದ ನಾಯಕನು ಮೊದಲು ಬೌಲಿಂಗ್ ಮಾಡಲು ಎದುರು ನೋಡಬಹುದು.
ಭಾರತ-ದಕ್ಷಿಣ ಆಫ್ರಿಕಾ ಟಿ20 ಮುಖಾಮುಖಿ: ಹೆಚ್ಚು ಸಿಕ್ಸರ್ ಸಿಡಿಸಿದ ಐವರು ಬ್ಯಾಟ್ಸ್‌ಮನ್

ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ಸಂಭಾವ್ಯ ಪ್ಲೇಯಿಂಗ್ 11
ಶ್ರೀಲಂಕಾ ಸಂಭಾವ್ಯ ತಂಡ
ಪಾತುಮ್ ನಿಸ್ಸಾಂಕ, ದನುಷ್ಕ ಗುಣತಿಲಕ, ಚರಿತ್ ಅಸಲಂಕ, ಭಾನುಕ ರಾಜಪಕ್ಸೆ (ವಿಕೆಟ್ ಕೀಪರ್), ದಸುನ್ ಶನಕ (ನಾಯಕ), ಚಾಮಿಕ ಕರುಣಾರತ್ನೆ, ವನಿಂದು ಹಸರಂಗ, ದುಷ್ಮಂತ ಚಮೀರ, ಮಹೀಶ್ ತೀಕ್ಷಣ, ಲಹಿರು ಮಧುಶಂಕ, ಮತೀಶ ಪತಿರಣ
ಆಸ್ಟ್ರೇಲಿಯಾ ಸಂಭಾವ್ಯ ತಂಡ
ಆ್ಯರೋನ್ ಫಿಂಚ್ (ನಾಯಕ), ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಸ್ಟೀವನ್ ಸ್ಮಿತ್, ಮಾರ್ಕಸ್ ಸ್ಟೊಯ್ನಿಸ್, ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್), ಆಷ್ಟನ್ ಅಗರ್, ಮಿಚೆಲ್ ಸ್ಟಾರ್ಕ್, ಕೇನ್ ರಿಚರ್ಡ್‌ಸನ್, ಜೋಶ್ ಹೇಜಲ್‌ವುಡ್
ಹಾರ್ದಿಕ್ ಪಾಂಡ್ಯನನ್ನ ಟಿ20ಯಲ್ಲಿ ಮಾತ್ರ ಆಡಿಸಿ: BCCIಗೆ ರವಿಶಾಸ್ತ್ರಿ ಎಚ್ಚರಿಕೆ

ಹೆಡ್ ಟು ಹೆಡ್ ರೆಕಾರ್ಡ್
ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ಇದುವರೆಗೆ 22 ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಅದರಲ್ಲಿ ಶ್ರೀಲಂಕಾ ಕೇವಲ 9 ಪಂದ್ಯಗಳನ್ನ ಗೆದ್ದಿದ್ದರೆ, ಆಸ್ಟ್ರೇಲಿಯಾ ತಂಡವು 13 ಪಂದ್ಯ ಜಯಿಸಿದೆ.
ಈ ಪಂದ್ಯವು ಸ್ಟಾರ್ ಸ್ಪೋರ್ಟ್ಸ್ ಮತ್ತು ಡಿಸ್ಲಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಸಂಜೆ 7 ಗಂಟೆಗೆ ನೇರ ಪ್ರಸಾರವಾಗಲಿದೆ.


Click it and Unblock the Notifications












