For Quick Alerts
ALLOW NOTIFICATIONS  
For Daily Alerts
 

Aus vs SL 2nd Test: ಆಸ್ಟ್ರೇಲಿಯಾ 364ರನ್‌ಗೆ ಆಲೌಟ್‌, ಉತ್ತಮ ಹಂತದಲ್ಲಿ ಶ್ರೀಲಂಕಾ

Srilanka

ಗಾಲೆ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ಮೊದಲ ಇನ್ನಿಂಗ್ಸ್‌ 2 ವಿಕೆಟ್ ನಷ್ಟಕ್ಕೆ 182ರನ್ ಕಲೆಹಾಕಿದ್ದು, ಆಸ್ಟ್ರೇಲಿಯಾ ನೀಡಿದ್ದ 364ರನ್‌ಗಳಿಗೆ ಉತ್ತರವಾಗಿ ಇನ್ನೂ 180ರನ್ ಕಲೆಹಾಕಬೇಕಿದೆ.

ಎರಡನೇ ದಿನದಾಟದ ಆರಂಭಿಕ ಸೆಷನ್‌ನಲ್ಲೇ ಕಾಂಗರೂಗಳನ್ನ ಆಲೌಟ್ ಮಾಡಿದ ಶ್ರೀಲಂಕಾ, ಆರಂಭಿಕ ಆಘಾತದ ನಡುವೆ ಚೇತರಿಸಿಕೊಂಡು ಉತ್ತಮ ರನ್ ಕಲೆಹಾಕಿದೆ. ಲಂಕಾಗೆ ನಾಯಕ ದಿಮುತ್ ಕರುಣರತ್ನೆ ಹಾಗೂ ಕುಸಾಲ್ ಮೆಂಡೀಸ್ ಆಧಾರವಾಗಿದ್ದಾರೆ.

ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ 364ರನ್‌ಗಳಿಗೆ ಆಲೌಟ್‌

ಆಸ್ಟ್ರೇಲಿಯಾ ಮೊದಲ ದಿನದಾಟದಲ್ಲಿ ಲ್ಯಾಬುಸ್ಚಾಗ್ನೆ ಶತಕ ಹಾಗೂ ಸ್ಟೀವನ್ ಸ್ಮಿತ್‌ 28ನೇ ಟೆಸ್ಟ್ ಶತಕದ ನೆರವಿನಿಂದಾಗಿ 300ರ ಗಡಿ ಸಮೀಪಿಸಲು ಸಾಧ್ಯವಾಯಿತು. ಎರಡನೇ ದಿನದಾಟದಲ್ಲಿ ಸ್ವೀವನ್ ಸ್ಮಿತ್ ಅಜೇಯ 145ರನ್ ಕಲೆಹಾಕಿದರು. ಒಂದೆಡೆ ವಿಕೆಟ್ ಉರುಳಿದರೂ ಮತ್ತೊಂದೆಡೆ ಗಟ್ಟಿಯಾಗಿ ಕ್ರೀಸ್‌ನಲ್ಲಿ ನೆಲೆಯೂರಿದ ಸ್ಟೀವನ್ ಸ್ಮಿತ್‌ ತಂಡಕ್ಕೆ ಆಧಾರವಾದ್ರು. ಅಂತಿಮವಾಗಿ ಆಸ್ಟ್ರೇಲಿಯಾ 364ರನ್‌ಗಳಿಗೆ ಸರ್ವಪತನಗೊಂಡಿತು.

ಆಸ್ಟ್ರೇಲಿಯಾ ಪರ ಲ್ಯಾಬುಸ್ಚಾಗ್ನೆ 104, ಸ್ವೀವನ್ ಸ್ಮಿತ್ ಅಜೇಯ 145, ಅಲೆಕ್ಸ್‌ ಕ್ಯಾರಿ 28 ರನ್ ಕಲೆಹಾಕಿದರು. ಲಂಕಾ ಪರ ಪ್ರಭಾತ್ ಜಯಸೂರ್ಯ 6 ವಿಕೆಟ್ ಕಬಳಿಸುವ ಮೂಲಕ ಮಿಂಚಿದರು.

ಶ್ರೀಲಂಕಾ ತಂಡಕ್ಕೆ ಆಧಾರವಾದ ದಿಮುತ್ ಕರುಣರತ್ನೆ ಮತ್ತು ಕುಸಾಲ್ ಮೆಂಡೀಸ್

ಶ್ರೀಲಂಕಾ ತಂಡಕ್ಕೆ ಆಧಾರವಾದ ದಿಮುತ್ ಕರುಣರತ್ನೆ ಮತ್ತು ಕುಸಾಲ್ ಮೆಂಡೀಸ್

ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನ 364ರನ್‌ಗಳಿಗೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಮೊದಲ ಇನ್ನಿಂಗ್ಸ್‌ನಲ್ಲಿ 2 ವಿಕೆಟ್ ನಷ್ಟಕ್ಕೆ 184ರನ್ ಕಲೆಹಾಕಿದೆ. ಆರಂಭಿಕ ಬ್ಯಾಟರ್
ಪಾತುಮ್ ನಿಸ್ಸಾಂಕ 6 ರನ್‌ಗೆ ಔಟಾದ ಬಳಿಕ ದಿಮುತ್ ಕರುಣರತ್ನೆ 86 ರನ್ ಮತ್ತು ಕುಸಾಲ್ ಮೆಂಡೀಸ್ ಅಜೇಯ 84ರನ್ ಕಲೆಹಾಕುವ ಮೂಲಕ ತಂಡಕ್ಕೆ ಆಧಾರವಾದ್ರು. ಎರಡನೇ ವಿಕೆಟ್‌ಗೆ ಈ ಜೋಡಿ 152ರನ್‌ಗಳ ಜೊತೆಯಾಟವಾಡಿತು.

ದಿಮುತ್ ಕರುಣರತ್ನೆ 86 ರನ್‌ಗೆ ವಿಕೆಟ್ ಒಪ್ಪಿಸಿದ ಬಳಿಕ ಏಂಜೆಲೊ ಮ್ಯಾಥ್ಯೂಸ್ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದರು. ಮ್ಯಾಥ್ಯೂಸ್ ಅಜೇಯ 6, ಕುಸಾಲ್ ಮೆಂಡೀಸ್ ಅಜೇಯ 84ರನ್ ಕಲೆಹಾಕುವ ಮೂಲಕ ಮೂರನೇ ದಿನದಾಟಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.

ಆಸ್ಟ್ರೇಲಿಯಾ ಪರ ಮಿಚೆಲ್ ಸ್ಟಾರ್ಕ್ ಮತ್ತು ಮಿಚೆಲ್ ಸ್ವೆಪ್ಸನ್ ತಲಾ ಒಂದು ವಿಕೆಟ್ ಪಡೆದಿದ್ದಾರೆ.

ಉಭಯ ತಂಡಗಳ ಪ್ಲೇಯಿಂಗ್ 11

ಉಭಯ ತಂಡಗಳ ಪ್ಲೇಯಿಂಗ್ 11

ಆಸ್ಟ್ರೇಲಿಯಾ
ಡೇವಿಡ್ ವಾರ್ನರ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಸ್ಚಾಗ್ನೆ, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಮಿಚೆಲ್ ಸ್ವೆಪ್ಸನ್

ಶ್ರೀಲಂಕಾ
ಪಾತುಮ್ ನಿಸ್ಸಾಂಕ, ದಿಮುತ್ ಕರುಣಾರತ್ನೆ (ನಾಯಕ), ಕುಸಾಲ್ ಮೆಂಡಿಸ್, ಏಂಜೆಲೊ ಮ್ಯಾಥ್ಯೂಸ್, ದಿನೇಶ್ ಚಾಂಡಿಮಲ್, ಕಮಿಂದು ಮೆಂಡಿಸ್, ನಿರೋಶನ್ ಡಿಕ್ವೆಲ್ಲಾ (ವಿಕೆಟ್ ಕೀಪರ್), ರಮೇಶ್ ಮೆಂಡಿಸ್, ಮಹೀಶ್ ತೀಕ್ಷಣ, ಪ್ರಭಾತ್ ಜಯಸೂರ್ಯ, ಕಸುನ್ ರಜಿತಾ

Story first published: Saturday, July 9, 2022, 19:10 [IST]
Other articles published on Jul 9, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+