ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸ್ಟ್ರೇಲಿಯಾ vs ವೆಸ್ಟ್ ಇಂಡೀಸ್: ಮೊದಲ ಟೆಸ್ಟ್ ಪಂದ್ಯಕ್ಕೆ ಆಸಿಸ್ ಪಡೆಯ ಬಲಿಷ್ಠ ಆಡುವ ಬಳಗ ಘೋಷಣೆ

Aus vs WI test series: Australia announced playing XI for 1st Test match vs West Indies

ಆಸ್ಟ್ರೇಲಿಯ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಟೆಸ್ಟ್ ಸರಣಿಯಲ್ಲಿ ಮುಖಾಮುಖಿಯಾಗಲು ಸಜ್ಜಾಗಿದೆ. ಆಸ್ಟ್ರೇಲಿಯಾ ಆತಿಥ್ಯದಲ್ಲಿ ನಡೆಯಲಿರುವ ಎರಡು ಟೆಸ್ಟ ಪಂದ್ಯಗಳ ಈ ಸರಣಿಯಲ್ಲಿ ಮೊದಲ ಪಂದ್ಯ ನವೆಂಬರ್ 30ರಂದು ಆರಂಭವಾಗಲಿದೆ. ಪರ್ತ್‌ ಕ್ರೀಡಾಂಗಣದಲ್ಲಿ ಈ ಪಂದ್ಯ ಆಯೋಜನೆಯಾಗಲಿದೆ.

ಇನ್ನು ಈ ಪಂದ್ಯಕ್ಕೆ ಪ್ಯಾಟ್ ಕಮ್ಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಸಂಪೂರ್ಣವಾಗಿ ಸಜ್ಜಾಗಿದ್ದು ಈ ಪಂದ್ಯದಲ್ಲಿ ತಮ್ಮ ಆಡುವ ಬಳಗವನ್ನು ಕೂಡ ಘೋಷಣೆ ಮಾಡಿದೆ. ಟೆಸ್ಟ್ ಪಂದ್ಯದ ಮುನ್ನಾದಿನ ಆಸಿಸ್ ನಾಯಕ ಪ್ಯಾಟ್ ಕಮ್ಮಿನ್ಸ್ ಅವರೇ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಕ್ರಿಕೆಟ್ ಆಸ್ಟ್ರೇಲಿಯಾದ ಅಧಿಕೃತ ವೆಬ್‌ಸೈಟ್ ಈ ಬಗ್ಗೆ ವರದಿ ಮಾಡಿದೆ.

ಸಂಜು ಸ್ಯಾಮ್ಸನ್‌ಗೆ ಮತ್ತೆ ನಿರಾಸೆ: ಫಿಫಾ ವಿಶ್ವಕಪ್‌ನಿಂದಲೂ ಅಭಿಮಾನಿಗಳ ಬೆಂಬಲಸಂಜು ಸ್ಯಾಮ್ಸನ್‌ಗೆ ಮತ್ತೆ ನಿರಾಸೆ: ಫಿಫಾ ವಿಶ್ವಕಪ್‌ನಿಂದಲೂ ಅಭಿಮಾನಿಗಳ ಬೆಂಬಲ

ಇನ್ನು ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಈ ಹಿಂದೆ ಕಣಕ್ಕಿಳಿದಿದ್ದ ತಂಡದಲ್ಲಿ ಒಂದು ಬದಲಾವಣೆ ಮಾತ್ರವೇ ಮಾಡಿಕೊಂಡಿದೆ. ಆಸ್ಟ್ರೇಲಿಯಾ ತಂಡ ತನ್ನ ಅಂತಿಮ ಟೆಸ್ಟ್ ಪಂದ್ಯವನ್ನು ಕಳೆದ ಜುಲೈನಲ್ಲಿ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದಾಗ ಗಾಲೆ ಕ್ರೀಡಾಂಗಣದಲ್ಲಿ ಆಡಿತ್ತು. ಅಂದಿನ ಪಂದ್ಯದಲ್ಲಿ ಆಡಿದ್ದ ಲೆಗ್ ಸ್ಪಿನ್ನರ್ ಮಿಚೆಲ್ ಸ್ವೆಪ್ಸನ್ ಅವರು ಈ ಆಡುವ ಬಳಗದಿಂದ ಹೊರಬಿದ್ದಿದ್ದು ವೇಗಿ ಜೋಶ್ ಹೇಜಲ್‌ವುಡ್ ಆಡುವ ಬಳಗದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಕುತೂಹಲಕಾರಿ ಸಂಗತಿಯೆಂದರೆ ಇದು ಜೋಶ್ ಹೇಜಲ್‌ವುಡ್ ಈ ವರ್ಷದಲ್ಲಿ ಆಡುತ್ತಿರುವ ಕೇವಲ ಎರಡನೇ ಟೆಸ್ಟ್ ಪಂದ್ಯವಾಗಿರಲಿದೆ. ಕಳೆದ ಮಾರ್ಚ್‌ನಲ್ಲಿ ರಾವಲ್ಪಿಂಡಿಯಲ್ಲಿ ಪಾಕಿಸ್ತಾನದ ವಿರುದ್ಧ ಮಾತ್ರವೇ ಅವರು ಈ ವರ್ಷದ ಏಕೈಕ ಟೆಸ್ಟ್ ಪಂದ್ಯವನ್ನು ಆಡಿದ್ದರು. ಇನ್ನು ಆರಂಭಿಕ ಆಟಗಾರ ಮಾರ್ಕಸ್ ಹ್ಯಾರಿಸ್ ಹಾಗೂ ವೇಗಿ ಸ್ಕಾಟ್ ಬೋಲಾಂಡ್ ಮೊದಲ ಟೆಸ್ಟ್ ಪಂದ್ಯದ ಆಡುವ ಬಳಗದಿಂದ ಹೊರಗುಳಿದಿರುವ ಇಬ್ಬರು ಆಟಗಾರರಾಗಿದ್ದಾರೆ.

ಈತ ಭಾರತದಲ್ಲಿನ ನನ್ನ ನೆಚ್ಚಿನ ವೇಗದ ಬೌಲರ್; ಮಾಜಿ ಆಸೀಸ್ ಬೌಲರ್ ಬ್ರೆಟ್ ಲೀಈತ ಭಾರತದಲ್ಲಿನ ನನ್ನ ನೆಚ್ಚಿನ ವೇಗದ ಬೌಲರ್; ಮಾಜಿ ಆಸೀಸ್ ಬೌಲರ್ ಬ್ರೆಟ್ ಲೀ

ಆಸ್ಟ್ರೇಲಿಯಾದ ಆಡುವ ಬಳಗ: ಉಸ್ಮಾನ್ ಖವಾಜಾ, ಡೇವಿಡ್ ವಾರ್ನರ್, ಮಾರ್ನಸ್ ಲ್ಯಾಬುಶೈನ್, ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮ್ಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಜಲ್ವುಡ್, ನಾಥನ್ ಲಿಯಾನ್

ವೆಸ್ಟ್ ಇಂಡೀಸ್: ಕ್ರೇಗ್ ಬ್ರಾಥ್‌ವೈಟ್ (ನಾಯಕ), ಜೋಶುವಾ ಡ ಸಿಲ್ವಾ (ವಿಕೆಟ್ ಕೀಪರ್), ಟಾಗ್‌ನರೈನ್ ಚಂದ್ರಪಾಲ್, ಎನ್ಕ್ರುಮಾ ಬೊನ್ನರ್, ಡೆವೊನ್ ಥಾಮಸ್, ಕೈಲ್ ಮೇಯರ್ಸ್, ರೋಸ್ಟನ್ ಚೇಸ್, ಅಲ್ಜಾರಿ ಜೋಸೆಫ್, ಕೆಮರ್ ರೋಚ್, ಜೇಡನ್ ಸೀಲ್ಸ್, ರೇಮನ್ ರೀಫರ್, ಜೇಸನ್ ಹೋಲ್ಡರ್, ಜೆರ್ಮೈನ್ ಬ್ಲಾಕ್‌ವುಡ್, ಶಮರ್ ಬ್ರೂಕ್ಸ್, ಆಂಡರ್ಸನ್ ಫಿಲಿಪ್

Story first published: Tuesday, November 29, 2022, 14:38 [IST]
Other articles published on Nov 29, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X