ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ಭಾರತದಲ್ಲಿ ನಡೆಯಲಿರುವ ಮುಂಬರುವ 2023ರ ಐಸಿಸಿ ಪುರುಷರ ಏಕದಿನ ವಿಶ್ವಕಪ್ ಪಂದ್ಯಾವಳಿಗಾಗಿ ತಮ್ಮ ಪ್ರಾಥಮಿಕ ತಂಡವನ್ನು ಆಸ್ಟ್ರೇಲಿಯಾ ಘೋಷಿಸಿದೆ.
ಭಾರತ ಮೂಲದ ಲೆಗ್ ಸ್ಪಿನ್ನರ್ ತನ್ವೀರ್ ಸಂಘ ಮತ್ತು ವೆಸ್ಟರ್ನ್ ಆಸ್ಟ್ರೇಲಿಯನ್ ಆಲ್‌ರೌಂಡರ್ ಆರನ್ ಹಾರ್ಡಿ ಅವರಂತಹ ಯುವ ಆಟಗಾರರಿಗೆ ಮೊದಲ ಬಾರಿಗೆ ರಾಷ್ಟ್ರೀಯ ತಂಡದಿಂದ ಕರೆಬಂದಿದೆ ಮತ್ತು ತಂಡದಲ್ಲಿ ಅಗ್ರ ಟೆಸ್ಟ್ ಬ್ಯಾಟರ್ ಮಾರ್ನಸ್ ಲ್ಯಾಬುಸ್ಚಾಗ್ನೆ ಸ್ಥಾನ ಪಡೆಯಲು ವಿಫಲರಾಗಿದ್ದಾರೆ.

2023ರ ಏಕದಿನ ವಿಶ್ವಕಪ್‌ಗೆ 18 ಸದಸ್ಯರ ದೊಡ್ಡ ತಂಡವನ್ನು ಕ್ರಿಕೆಟ್ ಆಸ್ಟ್ರೇಲಿಯಾ ಪ್ರಕಟಿಸಿದೆ. ಬಳಿಕ ಈ ತಂಡವನ್ನು 15 ಸದಸ್ಯರಿಗೆ ಇಳಿಸಲಾಗುತ್ತದೆ. ಸೆಪ್ಟೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅವರದೆ ನೆಲದಲ್ಲಿ ಮೂರು ಪಂದ್ಯಗಳ ಟಿ20 ಸರಣಿಯನ್ನು ಮೊದಲ ನಿಯೋಜನೆಯೊಂದಿಗೆ ನಿಗದಿಪಡಿಸಲಾಗಿದೆ.
2023ರ ಏಕದಿನ ವಿಶ್ವಕಪ್ ಅಭಿಯಾನ ಪ್ರಾರಂಭವಾಗುವ ಮೊದಲು ದಕ್ಷಿಣ ಆಫ್ರಿಕಾದಲ್ಲಿ ಮೂರು ಪಂದ್ಯಗಳಿಗೆ ಬಲವಾದ ಬಿಗ್ ಬ್ಯಾಷ್ ಲೀಗ್ (ಬಿಬಿಎಲ್) ಹಿನ್ನೆಲೆ ಹೊಂದಿರುವ ಹೊಸ-ರೂಪದ ಟಿ20 ತಂಡವನ್ನು ಆಯ್ಕೆಗಾರರು ಹೆಸರಿಸಿದ್ದಾರೆ. ದೊಡ್ಡ ಆಟಗಾರರು ಕಠಿಣವಾದ ಏಕದಿನ ವಿಶ್ವಕಪ್‌ಗಿಂತ ಮುಂಚಿತವಾಗಿ ಕಡಿಮೆ ಸ್ವರೂಪದಿಂದ ವಿಶ್ರಾಂತಿ ಪಡೆದಿದ್ದಾರೆ.

ಜನವರಿ 2020ರಲ್ಲಿ ಚೊಚ್ಚಲ ಪಂದ್ಯದಿಂದ ಆಸ್ಟ್ರೇಲಿಯಾದ 38 ಪಂದ್ಯಗಳಲ್ಲಿ 30 ಪಂದ್ಯಗಳನ್ನು ಆಡಿರುವ ಮಾರ್ನಸ್ ಲ್ಯಾಬುಸ್ಚಾಗ್ನೆ 31.37ರ ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. ಹೀಗಾಗಿ 50 ಓವರ್ ತಂಡದಿಂದ ಕೈಬಿಡಲು ದೊಡ್ಡ ಕಾರಣವಾಗಿದೆ.
ಪ್ಯಾಟ್ ಕಮ್ಮಿನ್ಸ್ ಮಣಿಕಟ್ಟಿನ ಮೂಳೆ ಮುರಿತಕ್ಕೆ ಒಳಗಾಗಿದ್ದಾರೆ ಎಂದು ತಿಳಿದುಬಂದಿದ್ದು, ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ತಪ್ಪಿಸಿಕೊಂಡಿದ್ದಾರೆ. ಆರು ವಾರಗಳ ಕಾಲ ಕ್ರಿಕೆಟ್‌ನಿಂದ ದೂರವಿರಲಿದ್ದಾರೆ. ಆದರೆ ಭಾರತದಲ್ಲಿ ವಿಶ್ವಕಪ್ ಆಡಲು ಮರಳುವ ತಯಾರಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ನಂತರ ತಂಡವನ್ನು ಸೇರಿಕೊಳ್ಳುತ್ತಾರೆ.
ಸೆಪ್ಟೆಂಬರ್ ಅಂತ್ಯದಲ್ಲಿ ವಿಶ್ವಕಪ್‌ಗೂ ಮುನ್ನ ಭಾರತ ವಿರುದ್ಧ ಆಸ್ಟ್ರೇಲಿಯಾ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಮಿಚೆಲ್ ಸ್ಟಾರ್ಕ್ ಕೂಡ ಆಶಸ್‌ನಲ್ಲಿ ಭುಜದ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಆಯ್ಕೆಯಾಗಿಲ್ಲ.
"ಆಸ್ಟ್ರೇಲಿಯಾ ತಂಡದ ನಾಯಕ ಕಮ್ಮಿನ್ಸ್ ಅವರ ಎಡ ಮಣಿಕಟ್ಟಿನ ಮುರಿತಕ್ಕೆ ಆರು ವಾರಗಳ ಪುನರ್ವಸತಿ ಹಾಗೂ ವಿಶ್ರಾಂತಿಯ ಅಗತ್ಯವಿರುತ್ತದೆ," ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಆಯ್ಕೆ ಸಮಿತಿ ಅಧ್ಯಕ್ಷ ಜಾರ್ಜ್ ಬೈಲಿ ಹೇಳಿದ್ದಾರೆ.
"ಪ್ರಮುಖ ಏಕದಿನ ವಿಶ್ವಕಪ್ ಅಭಿಯಾನದ ಮೊದಲು ನಾವು ಪ್ಯಾಟ್ ಕಮ್ಮಿನ್ಸ್‌ಗೆ ದೊಡ್ಡ ವಿಶ್ರಾಂತಿಯ ಅವಧಿಯನ್ನು ಧನಾತ್ಮಕವಾಗಿ ನೋಡುತ್ತೇವೆ. ವಿಶ್ವಕಪ್‌ಗೆ ಮುನ್ನ ಅವರು ಇನ್ನೂ ಹಲವಾರು ಪಂದ್ಯಗಳನ್ನು ಆಡಬಹುದು, ಅದು ಅವರಿಗೆ ಬಲವಾದ ಸಿದ್ಧತೆಯನ್ನು ಹೊಂದಲು ಸಾಕಷ್ಟು ಅವಕಾಶ," ಎಂದರು.
ಕ್ರಿಕೆಟ್ ಆಸ್ಟ್ರೇಲಿಯಾ ಆಯ್ಕೆಗಾರರು ಏಕದಿನ ತಂಡಕ್ಕೆ ಉಪನಾಯಕನನ್ನು ಹೆಸರಿಸಿಲ್ಲ. ಕಳೆದ ನವೆಂಬರ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಒಂದು ಪಂದ್ಯದಲ್ಲಿ ಹ್ಯಾಝಲ್‌ವುಡ್ ತಂಡವನ್ನು ಮುನ್ನಡೆಸಿದರೆ, ಸ್ಟೀವ್ ಸ್ಮಿತ್ ಈ ವರ್ಷದ ಮಾರ್ಚ್‌ನಲ್ಲಿ ಭಾರತ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ ತಂಡವನ್ನು ಮುನ್ನಡೆಸಿದ್ದರು.
ತನ್ವೀರ್ ಸಂಘ ಅವರ ಆಯ್ಕೆಯು ದೊಡ್ಡ ಅಚ್ಚರಿಯಾಗಿದೆ. 21 ವರ್ಷದ ತನ್ವೀರ್ ಸಂಘ ಕಳೆದ ಸೆಪ್ಟೆಂಬರ್‌ನಲ್ಲಿ ಕಾಫ್ಸ್ ಹಾರ್ಬರ್‌ನಲ್ಲಿ ನಡೆದ ಏಕದಿನ ದೇಶೀಯ ಅಭ್ಯಾಸ ಪಂದ್ಯದ ನಂತರ, ಯಾವುದೇ ಉನ್ನತ ಮಟ್ಟದ ಕ್ರಿಕೆಟ್‌ಗಳನ್ನು ಆಡಿಲ್ಲ.
34 ವರ್ಷದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ತನ್ನ ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದ ಏಕದಿನ ಸರಣಿಯಿಂದ ವಿಶ್ರಾಂತಿ ಪಡೆದಿದ್ದಾರೆ ಮತ್ತು ಭಾರತದಲ್ಲಿ ನಡೆಯುವ ಸರಣಿಗೆ ತಂಡವನ್ನು ಸೇರಿಕೊಳ್ಳಲಿದ್ದಾರೆ.
ಆಸ್ಟ್ರೇಲಿಯಾ ತಂಡ ಸೆಪ್ಟೆಂಬರ್ 22ರ ಮತ್ತು 27 ನಡುವೆ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಮೊಹಾಲಿ, ಇಂದೋರ್ ಮತ್ತು ರಾಜ್‌ಕೋಟ್‌ನಲ್ಲಿ ಆಡಲು ನಿಗದಿಗೊಳಿಸಲಾಗಿದೆ.
ತಂಡ: ಪ್ಯಾಟ್ ಕಮಿನ್ಸ್ (ನಾಯಕ), ಡೇವಿಡ್ ವಾರ್ನರ್, ಸ್ಟೀವನ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಸೀನ್ ಅಬಾಟ್, ಆಶ್ಟನ್ ಅಗರ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ನಾಥನ್ ಎಲ್ಲಿಸ್, ಕ್ಯಾಮೆರಾನ್ ಗ್ರೀನ್, ಆರನ್ ಹಾರ್ಡಿ, ಜೋಶ್ ಹ್ಯಾಝಲ್‌ವುಡ್, ಜೋಶ್ ಇಂಗ್ಲಿಸ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ತನ್ವೀರ್ ಸಂಘ, ಮಾರ್ಕಸ್ ಸ್ಟೊಯಿನಿಸ್, ಆಡಮ್ ಝಂಪಾ, ಟ್ರಾವಿಸ್ ಹೆಡ್.