Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WI vs AUS T20: ಮಾಜಿ ವಿಶ್ವ ಚಾಂಪಿಯನ್‌ರಿಗೆ ತವರಿನಲ್ಲಿ ಮುಖಭಂಗ: ಆಸೀಸ್ ಕ್ಲೀನ್ ಸ್ವೀಪ್ ಸಾಧನೆ

ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಆಸ್ಟ್ರೇಲಿಯಾ ಭರ್ಜರಿ ಪ್ರದರ್ಶನ ನೀಡಿದೆ. ಸೋಮವಾರ ನಡೆದ ಐದನೇ ಟಿ20 ಪಂದ್ಯವನ್ನು ಸಹ ಆಸ್ಟ್ರೇಲಿಯಾ 3 ವಿಕೆಟ್‌ಗಳಿಂದ ಗೆದ್ದು, ಆಡಿರುವ ಟೆಸ್ಟ್‌ ಹಾಗೂ ಟಿ20 ಸರಣಿಯಲ್ಲಿ ಕ್ಲೀನ್‌ ಸ್ವೀಪ್ ಸಾಧನೆ ಮಾಡಿದೆ. ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿದ ಕ್ಯಾಮರೂನ್‌ ಗ್ರೀನ್‌ ಅವರಿಗೆ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ವಿಂಡೀಸ್ ಆರಂಭ ಕಳಪೆಯಾಗಿತ್ತು. ಆರಂಭಿಕರಾದ ಬ್ರಾಂಡನ್ ಕಿಂಗ್ (11), ನಾಯಕ ಶಾಯ್ ಹೋಪ್ (9) ದೊಡ್ಡ ಇನಿಂಗ್ಸ್‌ ಕಟ್ಟುವಲ್ಲಿ ವಿಫಲರಾದರು. ಮಧ್ಯಮ ಕ್ರಮಾಂಕದಲ್ಲಿ ಕೀಸಿ ಕಾರ್ಟಿ (1) ಬಂದು ಹೋಗುವ ಸಂಪ್ರದಾಯವನ್ನು ಮುಗಿಸಿದರು. 32 ರನ್‌ಗಳಿಗೆ 3 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿ ತಂಡಕ್ಕೆ ಶೆರ್ಫೇನ್ ರುದರ್ಫೋರ್ಡ್ ಹಾಗೂ ಶಿಮ್ರಾನ್ ಹೆಟ್ಮೆಯರ್ ಕೊಂಚ ಆಧಾರವಾಯಿತು. ಈ ಜೋಡಿ ಮೂರನೇ ವಿಕೆಟ್‌ಗೆ 18 ಎಸೆತದಲ್ಲಿ 32 ರನ್‌ ಸೇರಿಸಿತು. ಶೆರ್ಫೇನ್ ರುದರ್ಫೋರ್ಡ್ 17 ಎಸೆತಗಳಲ್ಲಿ 35 ರನ್‌ ಬಾರಿಸಿ ಔಟ್ ಆದರು.

Australia clean sweeps West Indies in T20I and Test series Green shines

ಐದನೇ ವಿಕೆಟ್‌ಗೆ ಭರವಸೆಯ ಜೋಡಿ ಶಿಮ್ರೋನ್‌ ಹೆಟ್ಮೆಯರ್ ಹಾಗೂ ಜೇಸನ್‌ ಹೋಲ್ಡರ್‌ (20) ಜೋಡಿ ಆಸೀಸ್‌ ಬೌಲರ್‌ಗಳನ್ನು ಕಾಡಿತು. ಈ ಜೋಡಿ 30 ಎಸೆತಗಳಲ್ಲಿ 47 ರನ್‌ ಬಾರಿಸಿತು. ಶಿಮ್ರೋನ್‌ ಹೆಟ್ಮೆಯರ್‌ ಅಮೋಘ ಇನಿಂಗ್ಸ್‌ 52 ರನ್‌ಗಳಿಗೆ ಕೊನೆಯಾಯಿತು. ಮ್ಯಾಥ್ಯೂ ಫೋರ್ಡ್ (15), ಅಕೇಲ್ ಹೊಸೈನ್ (11) ಡಬಲ್‌ ಡಿಜಿಟ್‌ ಮುಟ್ಟಿದರು. ಉಳಿದ ಆಟಗಾರರು ಸಿಂಗಲ್‌ ಡಿಜಿಟ್‌ನಲ್ಲಿ ಆಟ ಮುಗಿಸಿದರು. ಅಂತಿಮವಾಗಿ ವಿಂಡೀಸ್‌ 19.4 ಓವರ್‌ಗಳಲ್ಲಿ 170 ರನ್‌ಗೆ ಆಲೌಟ್ ಆಯಿತು. ಆಸೀಸ್‌ ಪರ ಬೆನ್ ದ್ವಾರ್ಶುಯಿಸ್ 3, ನಾಥನ್ ಎಲ್ಲಿಸ್ 2 ವಿಕೆಟ್‌ ಉರುಳಿಸಿದರು.

ಕಳಪೆ ಆರಂಭ

ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡದ ಆರಂಭ ಭರ್ಜರಿಯಾಗಿತ್ತು. ಆಸ್ಟ್ರೇಲಿಯಾ ಪರ ಆರಂಭಿಕರಾದ ನಾಯಕ ಮಿಚೆಲ್ ಮಾರ್ಷ್ (14) ಹಾಗೂ ಗ್ಲೇನ್‌ ಮ್ಯಾಕ್ಸ್‌ವೆಲ್‌ (0) ಜವಾಬ್ದಾರಿ ಮರೆತರು. ಜೋಶ್‌ ಇಂಗ್ಲೀಷ್ 10 ರನ್‌ಗೆ ಆ ಮುಗಿಸಿದರು. 25 ರನ್‌ಗೆ 3 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ಆಸೀಸ್‌ಗೆ ಟೀಮ್ ಡೇವಿಡ್ ಹಾಗೂ ಕ್ಯಾಮರೂನ್‌ ಗ್ರೀನ್ (32) ಆಧಾರವಾದರು. ಈ ಜೋಡಿ 14 ಎಸೆತಗಳಲ್ಲಿ 35 ರನ್‌ ಸೇರಿಸಿತು. ಟೀಮ್ ಡೇವಿಡ್ (30) ಔಟ್ ಆಗುತ್ತಿದ್ದಂತೆ ಮಿಚೆಲ್ ಓವನ್‌ (37) ಕಣಕ್ಕೆ ಇಳಿದರು. ಇವರು ಹಾಗೂ ಗ್ರೀನ್‌ ತಂಡಕ್ಕೆ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ 29 ಎಸೆತಗಳಲ್ಲಿ 63 ರನ್‌ ಸೇರಿಸಿ ಅಬ್ಬರಿಸಿತು. ಆರನ್ ಹಾರ್ಡಿ (28) ತಂಡಕ್ಕೆ ಗೆಲುವಿನ ಮಾಲೆ ತೊಡಿಸುವಲ್ಲಿ ಶ್ರಮಿಸಿದರು.

Story first published: Tuesday, July 29, 2025, 10:41 [IST]
Other articles published on Jul 29, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+