For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟ್: ಏಕದಿನ ಪಂದ್ಯದಲ್ಲಿ 257 ರನ್ ಚಚ್ಚಿದ ಆಸ್ಟ್ರೇಲಿಯಾದ ಆರ್ಸಿ ಶಾರ್ಟ್

Australia cricketer DArcy Short hits 257 runs against Queensland

ಸಿಡ್ನಿ, ಸೆಪ್ಟೆಂಬರ್ 28: ಆಸ್ಟ್ರೇಲಿಯಾದ ಕ್ರಿಕೆಟಿಗ ಡಿ ಆರ್ಸಿ ಶಾರ್ಟ್, ಪ್ರಥಮ ದರ್ಜೆ ಏಕದಿನ ಪಂದ್ಯದಲ್ಲಿ 257 ರನ್‌ಗಳನ್ನು ಬಾರಿಸುವ ಮೂಲಕ ಪಂದ್ಯವೊಂದರಲ್ಲಿ ಅತಿ ಹೆಚ್ಚು ರನ್ ಗಳಿಸಿದ ಮೂರನೇ ಅಟಗಾರ ಎಂಬ ದಾಖಲೆ ಬರೆದರು.

ಆಸ್ಟ್ರೇಲಿಯಾದ ದೇಶಿ ಕ್ರಿಕೆಟ್ ಏಕದಿನ ಪಂದ್ಯದಲ್ಲಿ ವೆಸ್ಟರ್ ಆಸ್ಟ್ರೇಲಿಯಾ ತಂಡದ ಆಟಗಾರ ಆರ್ಸಿ ಶಾರ್ಟ್, ಕ್ವೀನ್ಸ್‌ಲ್ಯಾಂಡ್ ವಿರುದ್ಧ ಈ ಸಾಧನೆ ಮಾಡಿದ್ದಾರೆ.

ಭಾರತದ ಕ್ರಿಕೆಟಿಗ ರೋಹಿತ್ ಶರ್ಮಾ ಶ್ರೀಲಂಕಾ ವಿರುದ್ಧ 2014ರಲ್ಲಿ ಗಳಿಸಿದ 264 ರನ್, ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನ ಗರಿಷ್ಠ ಸ್ಕೋರ್ ಎನಿಸಿದೆ.

ಸರ್ರೆ ಕೌಂಟಿ ತಂಡದ ಅಲಿಸ್ಟರ್ ಬ್ರೌನ್ 2002ರಲ್ಲಿ 268 ರನ್ ಬಾರಿಸಿದ್ದರು. ಪ್ರಥಮದರ್ಜೆ ಕ್ರಿಕೆಟ್‌ ಮತ್ತು ಒಟ್ಟಾರೆ ಏಕದಿನ ಕ್ರಿಕೆಟ್‌ನಲ್ಲಿ ಇದು ಗರಿಷ್ಠ ಸ್ಕೋರ್ ಆಗಿದೆ. 257 ರನ್ ಚಚ್ಚಿದ ಆರ್ಸಿ ಶಾರ್ಟ್ ಮೂರನೇ ಆಟಗಾರ ಎನಿಸಿಕೊಂಡಿದ್ದಾರೆ.

ಕೇವಲ 148 ಎಸೆತಗಳನ್ನು ಎದುರಿಸಿದ ಅವರ ಇನ್ನಿಂಗ್ಸ್‌ನಲ್ಲಿ 23 ಸಿಕ್ಸರ್ ಮತ್ತು 15 ಬೌಂಡರಿಗಳಿದ್ದವು. ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯದಲ್ಲಿ 17 ಸಿಕ್ಸರ್‌ಗಳನ್ನು ಬಾರಿಸಿದ್ದು ಇದುವರೆಗಿನ ದಾಖಲೆಯಾಗಿತ್ತು.

83 ಎಸೆತಗಳಲ್ಲಿ ಮೂರಂಕಿ ಗಡಿ ದಾಟಿದ ಅವರು, ಮತ್ತೆ ನೂರು ರನ್‌ಗಳನ್ನು ಗಳಿಸಲು 45 ಎಸೆತಗಳನ್ನಷ್ಟೇ ತೆಗೆದುಕೊಂಡರು. 173.65 ಸ್ಟ್ರೇಕ್‌ರೇಟ್‌ನಲ್ಲಿ ಅವರು ರನ್ ಗಳಿಸಿದರು.

ಮೂರನೇ ಕ್ರಮಾಂಕದಲ್ಲಿ ಆಡಿದ ಆರ್ಸಿ ಶಾರ್ಟ್ ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ವೆಸ್ಟರ್ನ್ ಆಸ್ಟ್ರೇಲಿಯಾ 47 ಓವರ್‌ಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 387 ರನ್ ಗಳಿಸಿತು.



46ನೇ ಓವರ್‌ನಲ್ಲಿ ಮ್ಯಾಥ್ಯೂ ಕುಹ್ನೆಮನ್ ಬೌಲಿಂಗ್‌ನಲ್ಲಿ ಆರ್ಸಿ ಶಾರ್ಟ್ ಸ್ಟಂಪ್‌ಔಟ್ ಆದರು. ಹೀಗಾಗಿ ವಿಶ್ವದಾಖಲೆ ನಿರ್ಮಿಸುವ ಅಪೂರ್ವ ಅವಕಾಶ ಕೇವಲ 11 ರನ್‌ಗಳಿಂದ ಕೈತಪ್ಪಿತು.

ಮತ್ತೊಂದು ವಿಶೇಷವೆಂದರೆ, ಪಂದ್ಯದಲ್ಲಿ ಆರ್ಸಿ ಶಾರ್ಟ್ 257 ರನ್ ಗಳಿಸಿದ್ದರೆ, ಎರಡನೆಯ ಗರಿಷ್ಠ ಸ್ಕೋರ್ ಮಾರ್ಕಸ್ ಸ್ಟೋನಿಸ್ ಗಳಿಸಿ 27 ರನ್.

ಸ್ಫೋಟಕ ಬ್ಯಾಟಿಂಗ್‌ಗೆ ಹೆಸರಾದ ಡಿ ಆರ್ಸಿ ಶಾರ್ಟ್, ಐಪಿಎಲ್‌ನ 2018ರ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಆಡಿದ್ದರು. ಆದರೆ, ಅವರಿಂದ ನಿರೀಕ್ಷಿತ ಆಟ ಕಂಡುಬಂದಿರಲಿಲ್ಲ.

Story first published: Friday, September 28, 2018, 10:07 [IST]
Other articles published on Sep 28, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+