Tim Paine Retirement: ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಟಿಮ್ ಪೈನ್ ನಿವೃತ್ತಿ

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ಟಿಮ್ ಪೈನ್ ಅವರು ಕಳೆದ ಶುಕ್ರವಾರದಂದು ಟ್ಯಾಸ್ಮೆನಿಯಾದಲ್ಲಿ ತಮ್ಮ ಕೊನೆಯ ಶೆಫೀಲ್ಡ್ ಶೀಲ್ಡ್ ಪ್ರಥಮ ದರ್ಜೆ ಪಂದ್ಯವನ್ನು ಆಡಿದ ನಂತರ ಎಲ್ಲ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದರು.
ದಕ್ಷಿಣ ಆಫ್ರಿಕಾ ವಿರುದ್ಧದ 'ಸ್ಯಾಂಡ್‌ಪೇಪರ್-ಗೇಟ್' ಬಾಲ್ ಟ್ಯಾಂಪರಿಂಗ್ ಘಟನೆಯ ನಂತರ ಸ್ಟೀವನ್ ಸ್ಮಿತ್ ಅವರನ್ನು ನಾಯಕತ್ವದಿಂದ ತೆಗೆದುಹಾಕಲ್ಪಟ್ಟ ನಂತರ ಟಿಮ್ ಪೈನ್ ಅವರು 2018 ರಿಂದ 2021ರ ನಡುವೆ ಆಸ್ಟ್ರೇಲಿಯಾ ಟೆಸ್ಟ್ ತಂಡವನ್ನು ಮುನ್ನಡೆಸಿದರು.
ಟಿಮ್ ಪೈನ್ 23 ಟೆಸ್ಟ್ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಿದರು. ಅದರಲ್ಲಿ 11 ಪಂದ್ಯ ಗೆದ್ದರೆ, ಎಂಟು ಪಂದ್ಯಗಳಲ್ಲಿ ಸೋಲು ಕಂಡರು ಮತ್ತು ನಾಲ್ಕು ಪಂದ್ಯಗಳಲ್ಲಿ ಡ್ರಾ ಸಾಧಿಸಿದ್ದಾರೆ. ಬಾಲ್ ಟ್ಯಾಂಪರಿಂಗ್ ಹಗರಣದಿಂದ ಕುಗ್ಗಿದ್ದ ಆಸ್ಟ್ರೇಲಿಯಾದ ಕ್ರಿಕೆಟ್‌ನ ಖ್ಯಾತಿಯನ್ನು ಮರುನಿರ್ಮಾಣ ಮಾಡಿದ ಕೀರ್ತಿ ಟಿಮ್ ಪೈನ್ ಅವರದ್ದಾಗಿದೆ.

2017ರಲ್ಲಿ ಟಿಮ್ ಪೈನ್ ಮಹಿಳಾ ಸಹೋದ್ಯೋಗಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಾರೆ ಎಂದು ಬಹಿರಂಗವಾದ ನಂತರ ತಂಡದಿಂದ ಹೊರಹಾಕಲ್ಪಟ್ಟಿದ್ದರು. ನಂತರ ಸುಮಾರು ಒಂದು ವರ್ಷದ ನಂತರ ಅಕ್ಟೋಬರ್ 2022ರಲ್ಲಿ ಕ್ರಿಕೆಟ್‌ಗೆ ಮರಳಿದರು.
38 ವರ್ಷದ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಟಿಮ್ ಪೈನ್ ಶುಕ್ರವಾರ, ಮಾರ್ಚ್ 17ರಂದು ಕ್ವೀನ್ಸ್‌ಲ್ಯಾಂಡ್ ವಿರುದ್ಧದ ದೇಶೀಯ ಪಂದ್ಯವೊಂದರಲ್ಲಿ ಸ್ಟೇಟ್ ಸೈಡ್ ಟ್ಯಾಸ್ಮೆನಿಯಾ ಪರ ತಮ್ಮ ಅಂತಿಮ ಪ್ರಥಮ ದರ್ಜೆ ಪಂದ್ಯವನ್ನು ಆಡಿದರು. ನಂತರ ಉಭಯ ತಂಡಗಳ ಆಟಗಾರರಿಂದ ಗೌರವ ಪಡೆಯುವ ಮೂಲಕ ಹೊರನಡೆದರು.
ಟಿಮ್ ಪೈನ್ ಆಸ್ಟ್ರೇಲಿಯಾ ತಂಡದ ಪರ 35 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 92 ರನ್ ಗರಿಷ್ಠ ಸ್ಕೋರ್ ಆಗಿದೆ. 32.63ರ ಸರಾಸರಿ ರನ್‌ಗಳೊಂದಿಗೆ 35 ಏಕದಿನ ಪಂದ್ಯಗಳನ್ನೂ ಆಡಿದ್ದಾರೆ. ಇನ್ನು ವಿಕೆಟ್ ಕೀಪರ್ ಆಗಿ 157 ಔಟ್ ಮಾಡಿದ್ದಾರೆ.

ಹೋಬರ್ಟ್ ಮೂಲದ ಟಿಮ್ ಪೈನ್ 18 ವರ್ಷಗಳ ಕಾಲ ಟ್ಯಾಸ್ಮೆನಿಯಾ ತಂಡದ ಪರ ಆಡಿದರು. 2005ರಲ್ಲಿ ಚೊಚ್ಚಲ ಪ್ರವೇಶ ಮಾಡಿದ ನಂತರ 153 ಪ್ರಥಮ ದರ್ಜೆ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಟಿಮ್ ಪೈನ್ ನಾಯಕತ್ವದಲ್ಲಿ ಆಸ್ಟ್ರೇಲಿಯಾ ತಂಡವು 2019ರಲ್ಲಿ ಇಂಗ್ಲೆಂಡ್ ವಿರುದ್ಧ ಆಶಸ್ ಟ್ರೋಫಿಯನ್ನು ಪುನಃ ಪಡೆದುಕೊಂಡಿತು.
ಪ್ರಸ್ತುತ ಟೆಸ್ಟ್ ನಾಯಕ ಪ್ಯಾಟ್ ಕಮ್ಮಿನ್ಸ್ ಅವರು ನವೆಂಬರ್ 2021ರಲ್ಲಿ ಪೈನ್ ಅವರಿಂದ ನಾಯಕತ್ವದ ಜವಾಬ್ದಾರಿ ವಹಿಸಿಕೊಂಡರು. ಆ ಸಮಯದಲ್ಲಿ ಟಿಮ್ ಪೈನ್ ಅವರನ್ನು "ನಮ್ಮ ತಂಡವು ಚೆನ್ನಾಗಿ ಪ್ರೀತಿಸಿದ ಮತ್ತು ಗೌರವಾನ್ವಿತ ವ್ಯಕ್ತಿ' ಎಂದು ತಿಳಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications