Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತ, ಪಾಕಿಸ್ತಾನ ಒಳಗೊಂಡ ಸರಣಿಗೆ ಆತಿಥ್ಯ ವಹಿಸಲು ಆಸ್ಟ್ರೇಲಿಯಾ ಸಿದ್ಧ: ಕ್ರಿಕೆಟ್ ಆಸ್ಟ್ರೇಲಿಯಾ ಮುಖ್ಯಸ್ಥ

Australia is open to hosting series with India and Pakistan said Cricket Australiad chief Nick Hockley

ಭಾರತ ಹಾಗೂ ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಸರಣಿ ಆಯೋಜನೆಯಾಗದೆ ಬಹುತೇಕ ಒಂದು ದಶಕ ಸಮೀಪಿಸುತ್ತಿದೆ. ಎರಡು ದೇಶಗಳ ನಡುವಿನ ರಾಜಕೀಯ ಪರಿಸ್ಥಿತಿ ಹದಗೆಟ್ಟಿರುವ ಕಾರಣದಿಂದಾಗಿ ಅದರ ಪರಿಣಾಮ ಕ್ರಿಕೆಟ್ ಮೇಲೂ ಬಿದ್ದಿದೆ. ಆದರೆ ಇತ್ತೀಚೆಗೆ ಈ ಎರಡೂ ದೇಶಗಳ ಮಧ್ಯೆ ಕ್ರಿಕೆಟ್ ಸರಣಿಗಳು ಮತ್ತೆ ಆರಂಭವಾಗಬೇಕು ಎಂಬ ಅಭಿಪ್ರಾಯಗಳು ಕೆಲವರಿಂದ ವ್ಯಕ್ತವಾಗುತ್ತಿದೆ. ಈ ಸಂದರ್ಭದಲ್ಲಿ ಆಸ್ಟ್ರೆಲಿಯಾ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ನಿಕ್ ಹಾಕ್ಲೆ ಭಾರತ ಹಾಗೂ ಪಾಕಿಸ್ತಾನ ನಡುವಿನ ಸರಣಿಗೆ ಆತಿಥ್ಯ ವಹಿಸಲು ಆಸ್ಟ್ರೇಲಿಯಾ ಮುಕ್ತವಾಗಿದೆ ಎಂದು ಹೇಳಿಕೆ ನೀಡಿದ್ದಾರೆ.

ಕ್ರಿಕೆಟ್ ಆಸ್ಟ್ರೇಲಿಯಾದ ಮುಖ್ಯಸ್ಥ ನಿಕ್ ಹಾಕ್ಲೆ ಭಾರತ ಹಾಗೂ ಪಾಕಿಸ್ತಾನ ಜೊತೆಗಿನ ಸರಣಿಗೆ ಆತಿಥ್ಯ ವಹಿಸಲು ನಾವು ಸಿದ್ಧವಾಗಿದ್ದೇವೆ. ಎರಡು ದೇಶಗಳ ನಡುವಿನ ಹಣಾಹಣಿ ಮುಂದುವರಿಯಲು ನಾವು ವೇದಿಕೆ ನೀಡಲು ಸಂತಸಪಡುತ್ತೇವೆ. ಭಾರತ ಹಾಗೂ ಪಾಕಿಸ್ತಾನ ಎರಡೂ ರಾಷ್ಟ್ರಗಳ ದೊಡ್ಡ ಪ್ರಮಾಣದ ವಲಸಿಗರು ಆಸ್ಟ್ರೇಲಿಯಾದಲ್ಲಿ ವಾಸ್ತವ್ಯವಿರುವುದರಿಂದಾಗಿ ಮಾರುಕಟ್ಟೆ ದೃಷ್ಟಿಯಿಂದಲೂ ಆಸ್ಟ್ರೇಲಿಯಾ ಉತ್ತಮ ತಾಣವಾಗುತ್ತದೆ ಎಂದು ನಿಕ್ ಹಾಕ್ಲೆ ಅಭಿಪ್ರಾಯಪಟ್ಟಿದ್ದಾರೆ.

ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖಸ್ಥ ರಮೀಜ್ ರಾಜಾ ಇತ್ತೀಚೆಗೆ ಭಾರತ, ಪಾಕಿಸ್ತಾನ, ಆಸ್ಟ್ರೇಲುಯಾ ಹಾಗೂ ಇಂಗ್ಲೆಂಡ್ ತಂಡಗಳನ್ನು ಒಳಗೊಂಡ ಟೂರ್ನಿಯ ಆಯೋಜನೆಗೆ ಐಸಿಸಿ ಮುಂದೆ ಪ್ರಸ್ತಾವನೆಯನ್ನು ಇಟ್ಟಿದ್ದರು. ಈ ಟೂರ್ನಮೆಂಟ್‌ನ ಲಾಭವನ್ನು ಎಲ್ಲಾ ಐಸಿಸಿ ಸದಸ್ಯ ರಾಷ್ಟ್ರಗಳೊಂದಿಗೆ ಹಂಚಿಕೊಳ್ಳಬಹುದು ಎಂದು ಅವರು ಸಲಹೆಯನ್ನು ನೀಡಿದ್ದರು.

ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡಗಳು ಈಗ ಪ್ರಮುಖ ಐಸಿಸಿ ಟೂರ್ನಿಗಳಲ್ಲಿ ಮಾತ್ರವೇ ಮುಖಾಮುಖಿಯಾಗುತ್ತಿವೆ. ಈ ವರ್ಷಾಂತ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಭಾರತ ತನ್ನ ಆರಂಭಿಕ ಪಂದ್ಯವನ್ನು ಪಾಕಿಸ್ತಾನದ ವಿರುದ್ಧ ಆಡಲಿದೆ. ಕಳೆದ ವರ್ಷ ನಡೆದ ಟಿ20 ವಿಶ್ವಕಪ್‌ನಲ್ಲಿಯೂ ಭಾರತ ಹಾಗೂ ಪಾಕಿಸ್ತಾನ ತಂಡಗಳಯ ತಮ್ಮ ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು.

ಇನ್ನು ಪಾಕಿಸ್ತಾನದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ನಿಕ್ ಹಾಕ್ಲೆ ಈ ಪ್ರಸ್ತಾಪದ ಬಗ್ಗೆ ಮಂಡಳಿ ಚರ್ಚೆಯನ್ನು ನಡೆಸಿಲ್ಲ ಎಂದು ತಿಳಿಸಿದ್ದು ಭಾರತ ಪಾಕಿಸ್ತಾನವನ್ನು ಒಳಗೊಮಡ ತ್ರಿಕೋನ ಸರಣಿ ಆಯೋಜಿಸಲು ಮುಕ್ತವಾಗಿರುವುದಾಗಿ ಹೇಳಿಕೊಂಡಿದ್ದಾರೆ. "ವೈಯಕ್ತಿಕವಾಗಿ ನಾನು ತ್ರಿಕೋನ ಸರಣಿ ಪರಿಕಲ್ಪನೆಯನ್ನು ಇಷ್ಟಪಡುತ್ತೇನೆ. ಈ ಹಿಂದೆಯೂ ಅದು ತುಂಬಾ ಚೆನ್ನಾಗಿ ಯಶಸ್ಸು ಸಾಧಿಸಿದೆ" ಎಂದು ನಿಕ್ ಹಾಕ್ಲೆ ರಾವಲ್ಪಿಂಡಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

"ಭಾರತ ಹಾಗೂ ಪಾಕಿಸ್ತಾನದಿಂದ ತುಂಬಾ ದೊಡ್ಡ ಸಂಖ್ಯೆಯ ಜನರು ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಈ ಮುಖಾಮುಖಿಯಲ್ಲಿ ವಿಶ್ವ ಕ್ರಿಕೆಟ್‌ನಲ್ಲಿ ಎಲ್ಲರೂ ನೋಡಲು ಬಯಸುತ್ತಾರೆ. ಈ ಸರಣಿಯ ಆಯೋಜನೆಗೆ ನಮ್ಮಿಂದ ಸಹಾಯ ಮಾಡಲು ನಾವು ಉತ್ಸುಕವಾಗಿದ್ದು ಈ ಅವಕಾಶವನ್ನು ಬಳಸಿಕೊಳ್ಳಲು ನಾವು ಇಷ್ಟ ಪಡುತ್ತೇವೆ" ಎಂದು ನಿಕ್ ಹಾಕ್ಲೆ ಹೇಳಿಕೆ ನೀಡಿದ್ದಾರೆ.

"ಭಾರತ ಹಾಗೂ ಪಾಕಿಸ್ತಾನದಿಂದ ತುಂಬಾ ದೊಡ್ಡ ಸಂಖ್ಯೆಯ ಜನರು ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಈ ಮುಖಾಮುಖಿಯಲ್ಲಿ ವಿಶ್ವ ಕ್ರಿಕೆಟ್‌ನಲ್ಲಿ ಎಲ್ಲರೂ ನೋಡಲು ಬಯಸುತ್ತಾರೆ. ಈ ಸರಣಿಯ ಆಯೋಜನೆಗೆ ನಮ್ಮಿಂದ ಸಹಾಯ ಮಾಡಲು ನಾವು ಉತ್ಸುಕವಾಗಿದ್ದು ಈ ಅವಕಾಶವನ್ನು ಬಳಸಿಕೊಳ್ಳಲು ನಾವು ಇಷ್ಟ ಪಡುತ್ತೇವೆ" ಎಂದು ನಿಕ್ ಹಾಕ್ಲೆ ಹೇಳಿಕೆ ನೀಡಿದ್ದಾರೆ.

ಸದ್ಯ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದು ಮೂರು ಮಾದರಿಯ ಸರಣಿಯಲ್ಲಿ ಆಡುತ್ತಿದೆ. 24 ವರ್ಷಗಳ ಬಳಿಕ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಪಾಕಿಸ್ತಾನಕ್ಕೆ ಕ್ರಿಕೆಟ್ ಸರಣಿಯನ್ನಾಡಲು ಬಂದಿಳಿದಿದ್ದು ಸಾಕಷ್ಟು ಭದ್ರತೆಯೊಂದಿಗೆ ಸರಣಿಯನ್ನು ಆಯೋಜಿಸಲಾಗುತ್ತಿದೆ. ಮೊದಲ ಟೆಸ್ಟ್ ಪಂದ್ಯ ರಾವಲ್ಪಿಂಡಿಯಲ್ಲಿ ನಡೆದಿದ್ದು ನೀರಸವಾಗಿ ಈ ಪಂದ್ಯ ಅಂತ್ಯವಾಗಿದೆ.

Story first published: Wednesday, March 9, 2022, 18:43 [IST]
Other articles published on Mar 9, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+