For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್‌ನಿಂದ ಹೊರಬಿದ್ದ ಆಸ್ಟ್ರೇಲಿಯಾ; ಪ್ಯಾಟ್ ಕಮ್ಮಿನ್ಸ್‌ರನ್ನು ಟ್ರೋಲ್ ಮಾಡಿದ ಆಫ್ಘಾನ್ ಬ್ಯಾಟರ್

2024ರ ಐಸಿಸಿ ಟಿ20 ವಿಶ್ವಕಪ್‌ ಪಂದ್ಯಾವಳಿಯ ಸೆಮಿಫೈನಲ್‌ಗೆ ಅರ್ಹತೆ ಪಡೆಯಲು ಬಲಾಢ್ಯ ಆಸ್ಟ್ರೇಲಿಯಾ ತಂಡ ವಿಫಲವಾದ ಬಳಿಕ, ಅಫ್ಘಾನಿಸ್ತಾನ ತಂಡದ ಬ್ಯಾಟರ್ ನಜಿಬುಲ್ಲಾ ಝದ್ರಾನ್ ಅವರು ಪ್ಯಾಟ್ ಕಮ್ಮಿನ್ಸ್ ಅವರನ್ನು ಟ್ರೋಲ್ ಮಾಡಿದ್ದಾರೆ.

ಮಂಗಳವಾರ, ಜೂನ್ 25ರಂದು ಸೇಂಟ್ ವಿನ್ಸೆಂಟ್‌ನ ಕಿಂಗ್‌ಸ್ಟೌನ್‌ನಲ್ಲಿರುವ ಅರ್ನೋಸ್ ವೇಲ್ ಗ್ರೌಂಡ್‌ನಲ್ಲಿ ನಡೆದ ಸೂಪರ್ 8ರಲ್ಲಿ ಗುಂಪು 1ರ ಕೊನೆಯ ಪಂದ್ಯದಲ್ಲಿ ನಜ್ಮುಲ್ ಹೊಸೈನ್ ಶಾಂಟೋ ನಾಯಕತ್ವದ ಬಾಂಗ್ಲಾದೇಶ ತಂಡವನ್ನು 8 ರನ್‌ಗಳಿಂದ (ಡಿಎಲ್ಎಸ್ ವಿಧಾನ ಮೂಲಕ) ಸೋಲಿಸಿದ ನಂತರ ಅಫ್ಘಾನಿಸ್ತಾನ ತಂಡವು ಐತಿಹಾಸಿಕವಾಗಿ ಚೊಚ್ಚಲ ಬಾರಿಗೆ ಸೆಮಿಫೈನಲ್‌ಗೆ ಪ್ರವೇಶಿಸಿತು.

Australia Knocked out of T20 World Cup 2024 Afghan Batter Najibullah Zadran Trolled Pat Cummins

ಬಾಂಗ್ಲಾದೇಶ ವಿರುದ್ಧ ಅಫ್ಘಾನಿಸ್ತಾನದ ಗೆಲುವು ಮಿಚೆಲ್ ಮಾರ್ಷ್ ನಾಯಕತ್ವದ ಆಸ್ಟ್ರೇಲಿಯಾ ತಂಡವನ್ನು 2024ರ ಟಿ20 ವಿಶ್ವಕಪ್‌ ಪಂದ್ಯಾವಳಿಯಿಂದ ಹೊರಬೀಳುವಂತೆ ಮಾಡಿತು.

ಇದಕ್ಕೂ ಮೊದಲು, ಆಸ್ಟ್ರೇಲಿಯಾ ಅನುಭವಿ ಬೌಲರ್ ಪ್ಯಾಟ್ ಕಮ್ಮಿನ್ಸ್ ಅವರನ್ನು ಟಿ20 ವಿಶ್ವಕಪ್‌ನಲ್ಲಿ 4 ಸೆಮಿ-ಫೈನಲಿಸ್ಟ್ ತಂಡಗಳನ್ನು ಆಯ್ಕೆ ಮಾಡಲು ಕೇಳಲಾಗಿತ್ತು. ಇದಕ್ಕೆ ಅವರು ಆಸ್ಟ್ರೇಲಿಯಾ ಎಂದು ಹೆಸರಿಸಿದರು, ಆದರೆ ಇತರ ಮೂರು ತಂಡಗಳನ್ನು ಹೆಸರಿಸಲು ಹಿಂಜರಿದರು.

"ನಾಲ್ಕು ಸೆಮಿಫೈನಲ್ ತಂಡಗಳಲ್ಲಿ ಖಂಡಿತವಾಗಿಯೂ ಆಸ್ಟ್ರೇಲಿಯಾ ಇರುತ್ತದೆ. ತದನಂತರ ನಿಮಗೆ ಯಾವ ಮೂರು ತಂಡಗಳು ಬೇಕು ಎಂದು ನೀವು ಆಯ್ಕೆ ಮಾಡಬಹುದು," ಎಂದು ಪ್ಯಾಟ್ ಕಮ್ಮಿನ್ಸ್ CNBC-TV18 ಗೆ ತಿಳಿಸಿದ್ದರು.

ಇತರ ಮೂರು ಸೆಮಿಫೈನಲಿಸ್ಟ್‌ಗಳನ್ನು ಹೆಸರಿಸಲು ಒತ್ತಾಯಿಸಿದ ನಂತರ ಪ್ಯಾಟ್ ಕಮ್ಮಿನ್ಸ್, ""ನಾನು ಅದನ್ನು ಹೇಳುವುದಿಲ್ಲ, ನೀವು ಯಾವ ತಂಡಗಳನ್ನಾದದರೂ ಆಯ್ಕೆ ಮಾಡಬಹುದು,'' ಎಂದು ಹೇಳಿದರು.

Australia Knocked out of T20 World Cup 2024 Afghan Batter Najibullah Zadran Trolled Pat Cummins

ನಜಿಬುಲ್ಲಾ ಝದ್ರಾನ್ ಅವರು ತಮ್ಮ ಅಧಿಕೃತ ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ಪ್ಯಾಟ್ ಕಮ್ಮಿನ್ಸ್ ಅವರ ಸಂದರ್ಶನದ ಉಲ್ಲೇಖಗಳನ್ನು ವಿಮಾನ ಮತ್ತು ಮೌನದ ಎಮೋಜಿಗಳೊಂದಿಗೆ ಹಂಚಿಕೊಂಡಯು ಟ್ರೋಲ್ ಮಾಡಿದ್ದಾರೆ.

ಗಮನಾರ್ಹವಾಗಿ, ನಜೀಬುಲ್ಲಾ ಝದ್ರಾನ್ ಅವರು ಆಸ್ಟ್ರೇಲಿಯಾ ಮತ್ತು ಬಾಂಗ್ಲಾದೇಶ ವಿರುದ್ಧದ ಪಂದ್ಯಗಳಲ್ಲಿ ಆಡಲಿಲ್ಲ. ಬದಲಿಗೆ, ಆಫ್ಘನ್ ತಂಡವು ಯುವ ಆಟಗಾರ ನಂಗೆಯಲಿಯಾ ಖರೋಟೆಗೆ ಅವಕಾಶ ನೀಡಿದರು.

ಬಾಂಗ್ಲಾದೇಶ ವಿರುದ್ಧ ರೋಚಕ ಗೆಲುವು ಸಾಧಿಸಿದ ಅಫ್ಘಾನಿಸ್ತಾನ

ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳ ನಡುವಿನ ಪಂದ್ಯವು ಹಲವು ತಿರುವುಗಳಿಗೆ ಸಾಕ್ಷಿಯಾಯಿತು. ರಹಮಾನುಲ್ಲಾ ಗುರ್ಬಾಜ್ ಅವರ 43 ರನ್ ಮತ್ತು ರಶೀದ್ ಖಾನ್ ಅವರ ಅಜೇಯ 19 ರನ್‌ಗಳು ಸ್ಕೋರ್ ಬೋರ್ಡ್‌ನಲ್ಲಿ 8 ವಿಕೆಟ್‌ಗೆ 115 ರನ್ ಕಲೆಹಾಕಲು ನೆರವಾದವು.

ಆ ಬಳಿಕ, ರಶೀದ್ ಖಾನ್ 4 ವಿಕೆಟ್ ಕಬಳಿಸುವ ಮೂಲಕ ಅಫ್ಘಾನ್ ಬೌಲಿಂಗ್‌ನಲ್ಲಿ ಎದುರಾಳಿ ತಂಡವನ್ನು 17.5 ಓವರ್‌ಗಳಲ್ಲಿ 105 ರನ್‌ಗಳಿಗೆ ಆಲೌಟ್ ಮಾಡಿದರು.

ನವೀನ್-ಉಲ್-ಹಕ್ ಪಂದ್ಯಕ್ಕೆ ತೆರೆ ಎಳೆಯಲು ಮುಸ್ತಾಫಿಜುರ್ ರೆಹಮಾನ್ ಅವರನ್ನು ಬಲೆಗೆ ಬೀಳಿಸಿದರು. ಬಲಗೈ ವೇಗಿ ಡೆತ್ ಓವರ್‌ಗಳಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡಿ 4 ವಿಕೆಟ್‌ಗಳನ್ನು ಕಬಳಿಸಿದರು.

ಟ್ರಿನಿಡಾಡ್‌ನ ತರೂಬಾದಲ್ಲಿರುವ ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ಬುಧವಾರ, ಜೂನ್ 26ರಂದು ನಡೆಯುವ ಮೊದಲ ಸೆಮಿಫೈನಲ್‌ನಲ್ಲಿ ಅಫ್ಘಾನಿಸ್ತಾನ ತಂಡ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.

ಆಸ್ಟ್ರೇಲಿಯಾ ತಂಡವು ತಮ್ಮ ಮೊದಲ ಸೂಪರ್ 8ರ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಸೋಲಿಸಿತು. ಆನಂತರ, ಭಾರತ ಮತ್ತು ಅಫ್ಘಾನಿಸ್ತಾನ ವಿರುದ್ಧದ ಸೋಲು ಅವರನ್ನು ಪಂದ್ಯಾವಳಿಯಿಂದ ಹೊರಗುಳಿಯುವುಂತೆ ಮಾಡಿತು.

Story first published: Tuesday, June 25, 2024, 13:50 [IST]
Other articles published on Jun 25, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+