ಲಂಡನ್, ಜುಲೈ 19: ಆಸೀಸ್ ಸರಣಿಯಲ್ಲಿ ದಾಖಲೆಗಳನ್ನು ಬರೆಯುತ್ತಿರುವ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಕ್ರಿಸ್ ರೋಜರ್ಸ್ ಅವರು ಬೌನ್ಸರ್ ದಾಳಿಗೆ ತುತ್ತಾಗಿ ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದಾರೆ. ಇಂಗ್ಲೆಂಡ್ ವಿರುದ್ಧ ಎರಡನೇ ಟೆಸ್ಟ್ ಪಂದ್ಯವನ್ನು ಭಾರಿ ಅಂತರದಿಂದ ಗೆದ್ದ ಖುಷಿಯಲ್ಲಿ ತನಗಾದ ನೋವನ್ನು ಮರೆತ್ತಿದ್ದಾರೆ.
ಆಷಸ್ ಸರಣಿ 2ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ 405 ರನ್ಗಳ ಭಾರಿ ಅಂತರದ ಗೆಲುವು ಸಾಧಿಸಿದೆ. ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ. [ದುರಂತ ಅಂತ್ಯ ಕಂಡ ಕ್ರಿಕೆಟರ್ಸ್ ಪಟ್ಟಿ]
ಪಂದ್ಯ ನಾಲ್ಕನೇ ದಿನ ಬೆಳಗ್ಗೆ ಆಸೀಸ್ ದ್ವಿತೀಯ ಸರದಿಯಲ್ಲಿ 2 ವಿಕೆಟ್ಗೆ 254 ರನ್ ಸೇರಿಸಿ ಡಿಕ್ಲೇರ್ ಮಾಡಿಕೊಂಡಿತು. 509 ರನ್ಗಳ ಕಠಿಣ ಸವಾಲು ಎದುರಿಸಿದ ಇಂಗ್ಲೆಂಡ್ ಚಹಾ ವಿರಾಮದ ನಂತರ 37 ಓವರ್ಗಳಲ್ಲಿ ಕೇವಲ 103 ರನ್ಗೆ ಆಲೌಟ್ ಆಗಿ ಶರಣಾಯಿತು. [ಬ್ರಾಡ್ಮನ್-ವುಡ್ ಫುಲ್ ದಾಖಲೆ ಮುರಿದ ಸ್ಮಿತ್-ರೋಜರ್ಸ್]

ಐತಿಹಾಸಿಕ ಲಾರ್ಡ್ಸ್ ಅಂಗಳದಲ್ಲಿ 2005ರ ಬಳಿಕ ಮೊದಲ ಗೆಲುವು ಸಾಧಿಸಿದ ಸಂಭ್ರಮದಲ್ಲಿ ಆಸೀಸ್ ಆಟಗಾರರಿದ್ದಾರೆ. ಕಾರ್ಡಿಫ್ನಲ್ಲಿ ನಡೆದ ಮೊದಲ ಟೆಸ್ಟ್ನಲ್ಲಿ ಇಂಗ್ಲೆಂಡ್ 169 ರನ್ ಜಯ ಸಾಧಿಸಿತ್ತು. 3ನೇ ಟೆಸ್ಟ್ ಆಗಸ್ಟ್ 2ರಿಂದ ಬರ್ವಿುಂಗ್ಹ್ಯಾಂನಲ್ಲಿ ನಡೆಯಲಿದೆ.[ಕ್ರಿಕೆಟ್ ದುರಂತ: ಇಂಗ್ಲೆಂಡ್ ವಿಕೆಟ್ ಕೀಪರ್ ವೃತ್ತಿ ಅಂತ್ಯ]
ರೋಜರ್ ಹೋರಾಟ: 3ನೇ ದಿನದಂತ್ಯಕ್ಕೆ 44 ರನ್ ಗಳಿಸಿ ಕ್ರೀಸ್ನಲ್ಲಿದ್ದ ಆರಂಭಿಕ ಕ್ರಿಸ್ ರೋಜರ್ಸ್ (49) ಮತ್ತೆ 5 ರನ್ ಗಳಿಸುತ್ತಿದ್ದಂತೆ ತಲೆಸುತ್ತು ಬಂದು ಬಿದ್ದರು. ಬೌನ್ಸರ್ ನಿಂದ ತಿಂದ ಪೆಟ್ಟು ನಿಧಾನವಾಗಿ ಅವರ ಮೇಲೆ ಪರಿಣಾಮ ಬೀರಿತ್ತು. 37 ವರ್ಷದ ರೋಜರ್ಸ್ ಮೊದಲ ಇನಿಂಗ್ಸ್ನಲ್ಲಿ 173 ರನ್ ಸಿಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು. []
ರೋಜರ್ ಸ್ಥಿತಿ ಕಂಡು ಡೇವಿಡ್ ವಾರ್ನರ್ ತಕ್ಷಣವೇ ವೈದ್ಯರ ನೆರವಿಗಾಗಿ ಕರೆ ಮಾಡಿದರು. ಸೀನ್ ಅಬಾಟ್ ಎಸೆತ ಚೆಂಡು ಹ್ಯೂಸ್ ತಲೆಗೆ ಬಡಿದು ಹ್ಯೂಸ್ ಸಾವನ್ನಪ್ಪಿದ ಘಟನೆಗೆ ಸಾಕ್ಷಿಯಾಗಿದ್ದ ಡೇವಿಡ್ ವಾರ್ನರ್ ಮತ್ತೊಮ್ಮೆ ಈ ರೀತಿ ಆಘಾತ ಎದುರಿಸಿದ್ದರು. ಆದರೆ, ರೋಜರ್ ಸದ್ಯಕ್ಕೆ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಸುದ್ದಿ ಬಂದಿದೆ.