Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕ್ರಿಕೆಟ್ ದುರಂತ: ಇಂಗ್ಲೆಂಡ್ ವಿಕೆಟ್ ಕೀಪರ್ ವೃತ್ತಿ ಅಂತ್ಯ?

ಲಂಡನ್, ಜ.21: ಐಸಿಸಿ ವಿಶ್ವಕಪ್ 2015ರಲ್ಲಿ ಇಂಗ್ಲೆಂಡ್ ತಂಡವನ್ನು ಪ್ರತಿನಿಧಿಸುವ ಆಸೆ ಹೊತ್ತಿದ್ದ ಪ್ರತಿಭಾವಂತ ಆಟಗಾರನೊಬ್ಬನ ಕನಸು ಭಗ್ನಗೊಂಡಿದೆ. ಅಷ್ಟೇ ಅಲ್ಲ ಈ ವರ್ಷ ಪಂದ್ಯವಾಡುವಾಗ ಸಂಭವಿಸಿದ ಪೆಟ್ಟಿನಿಂದ ಆತನ ವೃತ್ತಿ ಬದುಕು ಅಂತ್ಯ ಕಾಣುವ ಆತಂಕ ಎದುರಾಗಿದೆ. ಇದು ಇಂಗ್ಲೆಂಡ್ ವಿಕೆಟ್ ಕೀಪರ್ ಕ್ರೇಗ್ ಕೀಸ್ವೆಟ್ಟರ್ ಕಥೆ.

27ವರ್ಷ ವಯಸ್ಸಿನ ಕ್ರೆಗ್ ಕೀಸ್ವೆಟ್ಟರ್ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಆಗಿ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ತಕ್ಕಮಟ್ಟಿನ ಪ್ರದರ್ಶನ ನೀಡಿದ್ದರು. ಅದರೆ, 2014ರ ಜುಲೈನಲ್ಲಿ ಕೌಂಟಿ ಪಂದ್ಯವೊಂದರ ವೇಳೆ ಚೆಂಡು ಅವರ ಮೂಗು ಹಾಗೂ ಕಣ್ಣಿಗೆ ಪೆಟ್ಟು ಮಾಡಿತ್ತು.[ದುರಂತ ಅಂತ್ಯ ಕಂಡ ಕ್ರಿಕೆಟರ್ಸ್ ಪಟ್ಟಿ]

ಗಾಯದ ಸಮಸ್ಯೆಯಿಂದ ಕ್ರಿಕೆಟ್ ನಿಂದ ದೂರವುಳಿಯಬೇಕಾಯಿತು. ಹೀಗಾಗಿ ವಿಶ್ವಕಪ್ ಸಂಭಾವ್ಯ ತಂಡಕ್ಕೂ ಆಯ್ಕೆಯಾಗಲಿಲ್ಲ.[ದುರಂತ ಅಂತ್ಯ ಕಂಡ ಕೊಡಗಿನ ಕ್ರಿಕೆಟರ್ ಆತ್ಮಕಥನ]

Kieswetter eye injury could end career prematurely

ಹೆಲ್ಮೆಟ್ ಧರಿಸಿ ಕೀಪಿಂಗ್ ಮಾಡುತ್ತಿದ್ದ ಕ್ರೆಗ್ ಅವರ ಹೆಲ್ಮೆಟ್ ನ ಗ್ರಿಲ್ ನಲ್ಲಿ ತೂರಿದ ಚೆಂಡು ಅವರ ಮೂಗು ಹಾಗೂ ಕಣ್ಣಿಗೆ ಗಾಯ ಮಾಡಿತ್ತು. ಅಂದಿನಿಂದ ಚಿಕಿತ್ಸೆ ಪಡೆಯುತ್ತಾ ಬಂದಿದ್ದ ಕ್ರೆಗ್ ಇತ್ತೀಚಿಗೆ ಮೈದಾನಕ್ಕೆ ಇಳಿಯುವ ಸಾಹಸ ಮಾಡಿದ್ದರು. ಅದರೆ, ದೃಷ್ಟಿ ಅಸ್ಪಷ್ಟವಾಗಿ ಕಾಣುತ್ತಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಬೆಲ್ಜಿಯಂಗೆ ಈ ವಾರ ತೆರಳುತ್ತಿದ್ದಾರೆ ಎಂದು ತಿಳಿದು ಬಂದಿದೆ. [ಕದನಕ್ಕಿಳಿಯುವ ಇಂಗ್ಲೆಂಡ್ ತಂಡ ಹೀಗಿದೆ]

ಕ್ರೆಗ್ ಅವರ ಕಣ್ಣಿಗೆ ಭಾರಿ ಪೆಟ್ಟು ಬಿದ್ದಿದ್ದು ಮತ್ತೆ ಸಂಪೂರ್ಣ ದೃಷ್ಟಿ ಲಭ್ಯವಾಗುವುದೆ ಇಲ್ಲವೇ ಗೊತ್ತಿಲ್ಲ. ಶೇ 100ರಷ್ಟು ದೃಷ್ಟಿ ಮರಳಿ ಪಡೆಯಲು ಬೇಕಾದ ವೈದ್ಯಕೀಯ ನೆರವು ಪಡೆಯಲು ಸೂಚಿಸಲಾಗಿದೆ.

ಅದರೆ, ಸದ್ಯಕ್ಕೆ ಲಭ್ಯವಿರುವ ಮಾಹಿತಿ ಪ್ರಕಾರ ಕಣ್ಣಿನ ದೋಷದ ಕಾರಣ ಅವರ ವೃತ್ತಿ ಬದುಕು ಅಕಾಲಿಕವಾಗಿ ಅಂತ್ಯಗೊಳ್ಳುವ ಭೀತಿ ಇದೆ ಎಂದು ಸಾಮರ್ ಸೆಟ್ ಕ್ರಿಕೆಟ್ ನ ನಿರ್ದೇಶಕ ಮ್ಯಾಥ್ಯೂ ಮೇಯ್ನಾರ್ಡ್ ಹೇಳಿದ್ದಾರೆ. []

ಇಂಗ್ಲೆಂಡ್ ಪರ ವಿಕೆಟ್ ಕೀಪರ್ ಕೀಸ್ವೆಟ್ಟರ್ ಅವರು 46 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಿಂದ 1,046 ರನ್ ಗಳಿಸಿದ್ದಾರೆ. ಕ್ರಿಕೆಟ್ ನಲ್ಲಿ ಚೆಂಡು ಬಡಿದು ಸಾವನ್ನಪ್ಪಿದ ದುರಂತಗಳ ಜೊತೆಗೆ ಗಾಯಗೊಂಡು ಕ್ರಿಕೆಟ್ ವೃತ್ತಿ ತೊರೆದ ನಿದರ್ಶನಗಳು ಸಾಕಷ್ಟಿವೆ. ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್ ಮಾರ್ಕ್ ಬೌಷರ್ ಪ್ರಮುಖವಾಗಿ ಹೆಸರಿಸಬಹುದು. (ಐಎಎನ್ಎಸ್)

Story first published: Wednesday, January 3, 2018, 10:12 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+