Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs AUS: ಭಾರತ-ಆಸ್ಟ್ರೇಲಿಯಾ ನಡುವೆ ಮತ್ತೊಂದು ಸೆಮಿಸ್ ಫೈಟ್; ಯಾವಾಗ, ಎಲ್ಲಿ?

ಚಾಂಪಿಯನ್ಸ್ ಟ್ರೋಫಿ 2025ರ ಸೆಮಿಫೈನಲ್‌ ಪಂದ್ಯದಲ್ಲಿ ಭಾರತ ತಂಡವು ಆಸ್ಟ್ರೇಲಿಯಾವನ್ನು 4 ವಿಕೆಟ್‌ಗಳಿಂದ ಸೋಲಿಸಿ ಫೈನಲ್‌ಗೆ ಪ್ರವೇಶಿಸಿತು. ಫೈನಲ್ ಪಂದ್ಯದಲ್ಲಿಯೂ ನ್ಯೂಜಿಲೆಂಡ್ ತಂಡವನ್ನು ಮಣಿಸಿ ರೋಹಿತ್ ಶರ್ಮಾ ನೇತೃತ್ವದಲ್ಲಿ ಭಾರತ ಚಾಂಪಿಯನ್ಸ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತ್ತು. ಈಗ ಮತ್ತೊಮ್ಮೆ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಸೆಮಿಫೈನಲ್ ಆಡಲು ಸಿದ್ಧವಾಗಿವೆ. ಆದರೆ ಈ ಬಾರಿ ಟೀಮ್ ಇಂಡಿಯಾವನ್ನು ಸಚಿನ್ ತೆಂಡೂಲ್ಕರ್ ಮುನ್ನಡೆಸಲಿದ್ದು, ಆಸ್ಟ್ರೇಲಿಯಾ ತಂಡಕ್ಕೆ ಶೇನ್ ವ್ಯಾಟ್ಸನ್ ನಾಯಕರಾಗಿದ್ದಾರೆ.

ಮಾರ್ಚ್ 12 ರಂದು ಆಸ್ಟ್ರೇಲಿಯಾ ಮಾಸ್ಟರ್ಸ್ ಮತ್ತು ಇಂಗ್ಲೆಂಡ್ ಮಾಸ್ಟರ್ಸ್ ನಡುವೆ ಇಂಟರ್ನ್ಯಾಷನಲ್ ಮಾಸ್ಟರ್ಸ್ ಲೀಗ್ (ಐಎಂಎಲ್) 2025 ರ ಅಂತಿಮ ಗುಂಪು ಹಂತದ ಪಂದ್ಯದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಆಸ್ಟ್ರೇಲಿಯಾ ಮೂರು ವಿಕೆಟ್‌ಗಳಿಂದ ಸೋಲಿಸಿತು. ಈಗ ಅವರು ಮಾರ್ಚ್ 13 ರಂದು ಮೊದಲ ಸೆಮಿಫೈನಲ್‌ನಲ್ಲಿ ಇಂಡಿಯಾ ಮಾಸ್ಟರ್ಸ್ ತಂಡವನ್ನು ಆಸ್ಟ್ರೇಲಯಾ ಎದುರಿಸಲಿದ್ದಾರೆ.

Australia Masters-India Masters International Masters League Semi-Final Match

ಇಂಗ್ಲೆಂಡ ತಂಡವನ್ನು ಮಣಿಸಿದ ಆಸ್ಟ್ರೇಲಿಯಾ ಮಾಸ್ಟರ್ಸ್ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದದೆ. ಎರಡನೇ ಸ್ಥಾನದಲ್ಲಿರುವ ಇಂಡಿಯಾ ಮಾಸ್ಟರ್ಸ್ ವಿರುದ್ಧ ನಾಕೌಟ್ ಪಂದ್ಯವನ್ನು ಆಡಲಿದೆ. ಈ ಪಂದ್ಯವೂ ಇಂದು ಮಾರ್ಚ್ 13 ರಂದು ರಾಯ್‌ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತರಾಷ್ಟ್ರೀಯ ಕ್ರೀಡಾಂಗಣ ನಡೆಯಲಿದ್ದು, ರಾತ್ರಿ 7.30 ಗಂಟೆಗೆ ಆರಂಭವಾಗಲಿದೆ.

ಇಂಟರ್ನ್ಯಾಷನಲ್ ಮಾಸ್ಟರ್ಸ್ ಲೀಗ್‌ನ ಎರಡನೇ ಸೆಮಿಫೈನಲ್ ಪಂದ್ಯವೂ 14 ರಂದು ಶ್ರೀಲಂಕಾ ಮಾಸ್ಟರ್ಸ್ ಮತ್ತು ವೆಸ್ಟ್ ಇಂಡೀಸ್ ಮಾಸ್ಟರ್ಸ್ ನಡುವೆ ನಡೆಯಲಿದೆ. ಐಎಂಎಲ್ ಪಾಯಿಂಟ್ ಪಟ್ಟಿಯಲ್ಲಿ ಶ್ರೀಲಂಕಾ ಮೊದಲ ಸ್ಥಾನದಲ್ಲಿದ್ದರೆ, ವೆಸ್ಟ್ ಇಂಡೀಸ್ ನಾಲ್ಕನೇ ಸ್ಥಾನದಲ್ಲಿದೆ.

ಆಸ್ಟ್ರೇಲಿಯಾ ಮಾಸ್ಟರ್ಸ್ - ಇಂಡಿಯಾ ಮಾಸ್ಟರ್ಸ್ ತಂಡಗಳು

ಇಂಡಿಯಾ ಮಾಸ್ಟರ್ಸ್: ಸಚಿನ್ ತೆಂಡೂಲ್ಕರ್ (ನಾಯಕ), ಯುವರಾಜ್ ಸಿಂಗ್, ಸುರೇಶ್ ರೈನಾ, ಅಂಬಟಿ ರಾಯುಡು, ಯೂಸುಫ್ ಪಠಾಣ್, ಇರ್ಫಾನ್ ಪಠಾಣ್, ಸ್ಟುವರ್ಟ್ ಬಿನ್ನಿ, ಧವಲ್ ಕುಲಕರ್ಣಿ, ವಿನಯ್ ಕುಮಾರ್, ಶಹಬಾಜ್ ನದೀಮ್, ರಾಹುಲ್ ಶರ್ಮಾ, ನಮನ್ ಓಜಾ, ಪವನ್ ನೇಗಿ, ಗುರುಕೀರತ್ ಸಿಂಗ್ ಮಾನ್, ಅಭಿಮನ್ಯು ಮಿಥುನ್.

ಆಸ್ಟ್ರೇಲಿಯಾ ಮಾಸ್ಟರ್ಸ್: ಶೇನ್ ವ್ಯಾಟ್ಸನ್ (ನಾಯಕ), ಶಾನ್ ಮಾರ್ಷ್, ಡೇನಿಯಲ್ ಕ್ರಿಶ್ಚಿಯನ್, ಬೆನ್ ಕಟಿಂಗ್, ಜೇಮ್ಸ್ ಪ್ಯಾಟಿನ್ಸನ್, ಬೆನ್ ಹಿಲ್ಫೆನ್‌ಹೌಸ್, ಪೀಟರ್ ನೆವಿಲ್ಲೆ, ಬೆನ್ ಡಂಕ್, ನಾಥನ್ ರಿಯರ್ಡನ್, ಜೇಸನ್ ಕ್ರೆಜ್ಜಾ, ನಾಥನ್ ಕೌಲ್ಟರ್-ನೈಲ್, ಬೆನ್ ಲಾಫ್ಲಿನ್, ಕ್ಯಾಲಮ್ ಫರ್ಗುಸನ್, ಬ್ರೈಸ್ ಮೆಕ್‌ಗೈನ್, ಕ್ಸೇವಿಯರ್ ಡೊಹೆರ್ಟಿ.

ಐಎಂಎಲ್‌ನ ಫೈನಲ್ ಪಂದ್ಯವು ಮಾರ್ಚ್ 16 ರ ಭಾನುವಾರ ರಾಯ್‌ಪುರದಲ್ಲಿ ನಡೆಯಲಿದೆ. ಈ ಪಂದ್ಯ ಜಿಯೋ ಹಾಟ್‌ಸ್ಟಾರ್ ಜೊತೆಗೆ ಕಲರ್ಸ್ ಸಿನೆಪ್ಲೆಕ್ಸ್ (ಎಸ್‌ಡಿ ಮತ್ತು ಹೆಚ್‌ಡಿ) ಮತ್ತು ಕಲರ್ಸ್ ಸಿನೆಪ್ಲೆಕ್ಸ್ ಸೂಪರ್‌ಹಿಟ್ಸ್‌ನಲ್ಲಿ ಸಂಜೆ 7:00 ರಿಂದ ನೇರ ಪ್ರಸಾರವಾಗಲಿದೆ.

Story first published: Thursday, March 13, 2025, 12:53 [IST]
Other articles published on Mar 13, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+