Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆಸ್ಟ್ರೇಲಿಯಾದ ಕ್ರಿಕೆಟರ್ ಮ್ಯಾಟ್ ರೆನ್ ಶಾ ತಲೆಗೆ ಭಾರಿ ಪೆಟ್ಟು

Australia opener Renshaw takes nasty blow in tour match

ದುಬೈ, ಸೆಪ್ಟೆಂಬರ್ 30: ಪಾಕಿಸ್ತಾನ 'ಎ' ವಿರುದ್ಧ ಆಸ್ಟ್ರೇಲಿಯಾ 'ಎ' ಪಂದ್ಯವಾಡುತ್ತಿದೆ. ಆಸ್ಟ್ರೇಲಿಯಾದ ಆಟಗಾರ ಮ್ಯಾಟ್ ರೆನ್ ಶಾ ಅವರು ಮೊದಲ ದಿನದಂದು ಆಡುವಾಗ ತಲೆಗೆ ಪೆಟ್ಟು ತಿಂದಿದ್ದಾರೆ. ರೆನ್ ಶಾ ಅವರ ಹೆಲ್ಮೆಟ್ ಗೆ ಚೆಂಡು ಬಡಿದಿತ್ತು.

ಆರಂಭಿಕ ಆಟಗಾರ ರೆನ್ ಶಾ ಅವರು ಶಾರ್ಟ್ ಲೆಗ್ ನಲ್ಲಿ ಫೀಲ್ಡಿಂಗ್ ಮಾಡುವಾಗ ಪಾಕಿಸ್ತಾನದ ಬ್ಯಾಟ್ಸ್ ಮನ್ ಅಬಿದ್ ಅಲಿ ಅವರು ಹೊಡೆದ ಚೆಂಡು ರೆನ್ ಶಾ ತಲೆಗೆ ಬಡಿದಿದೆ. ಅದೃಷ್ಟವಶಾತ್, ರೆನ್ ಶಾ ಅವರು ತಲೆಗೆ ಹೆಲ್ಮಟ್ ಧರಿಸಿದ್ದರು.

ಆದರೆ, ರೆನ್ ಶಾ ಅವರು ಇಂದು ಫೀಲ್ಡಿಂಗ್ ಗೆ ಇಳಿಯಲಿಲ್ಲ. ಅವರ ಬದಲಿಗೆ ಉಸ್ಮಾನ್ ಖವಾಜಾ ಹಾಗೂ ಅರೋನ್ ಫಿಂಚ್ ಅವರು ಆರಂಭಿಕ ಆಟಗಾರರಾಗಿ ಕಣಕ್ಕಿಳಿದರು. ರೆನ್ ಶಾ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಡೇವಿಡ್ ವಾರ್ನರ್ ಹಾಗೂ ಕೆಮರೂನ್ ಬ್ಯಾನ್ ಕ್ರಾಫ್ಟ್ ಅವರ ಅನುಪಸ್ಥಿತಿಯಲ್ಲಿ ತಂಡದಲ್ಲಿ ಸ್ಥಾನ ಪಡೆಯಲು ರೆನ್ ಶಾ ಅವರು ಯತ್ನಿಸುತ್ತಿದ್ದರು.

ಸ್ಪಿನ್ನರ್ ಲಿಯಾನ್ 8/103 ಪಡೆದು ಪಾಕಿಸ್ತಾನ ತಂಡವನ್ನು 278 ಸ್ಕೋರಿಗೆ ನಿಯಂತ್ರಿಸಿದರು. ದುಬೈಯಲ್ಲಿ ಅಕ್ಟೋಬರ್ 07ರಿಂದ ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ವಿರುದ್ಧ ಪಂದ್ಯ ನಡೆಯಲಿದೆ.

Story first published: Sunday, September 30, 2018, 15:47 [IST]
Other articles published on Sep 30, 2018
Read in English: Renshaw takes nasty blow
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+