For Quick Alerts
ALLOW NOTIFICATIONS  
For Daily Alerts
 

ಕೋಪದಲ್ಲಿ ಯಾಮಾರಿ ಕೈ ಮುರಿದುಕೊಂಡ ಆಸ್ಟ್ರೇಲಿಯಾ ಆಲ್ ರೌಂಡರ್!

Mitchell Marsh breaks his hand after punching wall in frustration | Oneindia Kannada
Australias Mitchell Marsh breaks his hand punching wall

ಸಿಡ್ನಿ, ಅಕ್ಟೋಬರ್ 15: 'ಕೋಪದಲ್ಲಿ ಕುಯ್ದುಕೊಂಡ ಮೂಗು ಮತ್ತೆ ಬಾರದು' ಅನ್ನೋ ಗಾದೆ ಸಾಲು ಆಸ್ಟ್ರೇಲಿಯಾದ ಆಲ್ ರೌಂಡರ್‌ ಮಿಚೆಲ್ ಮಾರ್ಷ್ ಪಾಲಿಗೆ ಸದ್ಯಕ್ಕಂತೂ ಸೂಕ್ತವೆನಿಸಿದೆ. ಕೋಪ, ಹತಾಶೆಗೆ ಒಳಗಾಗಿ ಮಾರ್ಷ್ ತನ್ನ ಕೈಯನ್ನೇ ಮುರಿದುಕೊಂಡು ಪ್ರಮುಖ ಸರಣಿಯೊಂದರಿಂದ ಹೊರಬಿದ್ದಿದ್ದಾರೆ.

ಆಸ್ಟ್ರೇಲಿಯಾ ದೇಸಿ ಕ್ರಿಕೆಟ್ ಟೂರ್ನಿ 'ಶೆಫೀಲ್ಡ್ ಶೀಲ್ಡ್'ನ ಪಂದ್ಯದ ವೇಳೆ ಹತಾಶೆಗೊಳಗಾದ ಮಿಚೆಲ್ ಮಾರ್ಚ್, ಡ್ರೆಸ್ಸಿಂಗ್ ರೂಮ್‌ನಲ್ಲಿ ತನ್ನ ಬೌಲಿಂಗ್ ಕೈಯನ್ನು ಗೋಡೆಗೆ ಗುದ್ದಿಕೊಂಡು ಮುರಿದುಕೊಂಡಿದ್ದಾರೆ. ಹೀಗಾಗಿ ಪಾಕಿಸ್ತಾನ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯಿಂದ ಮಾರ್ಚ್ ತಾನೇ ಹೊರ ನಡೆದಂತಾಗಿದೆ.

ಪಾಕಿಸ್ತಾನ ವಿರುದ್ಧದ ಟೆಸ್ಟ್‌ ಸರಣಿಗೆ ಆಸೀಸ್ ತಂಡದಲ್ಲಿ 27ರ ಹರೆಯದ ಮಾರ್ಚ್ ಕೂಡ ಹೆಸರಿಸಲ್ಪಟ್ಟಿದ್ದರು. ಆದರೆ ಶೆಫೀಲ್ಡ್ ಶೀಲ್ಡ್ ಟೂರ್ನಿಯ ವೆಸ್ಟರ್ನ್ ಆಸ್ಟ್ರೇಲಿಯಾ ಮತ್ತು ಟ್ಯಾಸ್ಮೆನಿಯಾ ನಡುವಿನ ಪಂದ್ಯದ ವೇಳೆ ಹತಾಶೆಯಿಂದ ಮಾರ್ಷ್ ಕೈ ಮುರಿದುಕೊಂಡಿದ್ದಾರೆ. ಈ ಪಂದ್ಯ ಡ್ರಾ ಎನಿಸಿತ್ತು.

'ನೀನೊಬ್ಬ ಮೂರ್ಖ ಎಂದು ಆಸ್ಟ್ರೇಲಿಯಾ ಕೋಚ್ ಜಸ್ಟಿನ್ ಲ್ಯಾಂಗರ್ ನನ್ನಲ್ಲಿ ಹೇಳಿದರು. ಅವರಿಗೆ ನನ್ನ ವರ್ತನೆಯಿಂದ ನಿರಾಶೆಯಾಗಿದೆ,' ಎಂದು ಮಾರ್ಷ್ ಕ್ರಿಕೆಟ್‌ ಡಾಟ್ ಕಾಮ್ ಡಾಟ್ ಯುಗೆ ಪ್ರತಿಕ್ರಿಯಿಸಿದ್ದಾರೆ. ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿ ನವೆಂಬರ್ 21ರಿಂದ ಬ್ರಿಸ್ಬೇನ್‌ನಲ್ಲಿ ಆರಂಭವಾಗಲಿದೆ.

Story first published: Tuesday, October 15, 2019, 18:58 [IST]
Other articles published on Oct 15, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+